ವಿಶ್ವದ ಪ್ರಸಿದ್ಧ ಪಾಪ್ ಸಿಂಗರ್ ಜೀವನದಲ್ಲಿ ನಡೆದ ಅಮಾನವೀಯ ಘಟನೆ ಇದು!

First Published | May 31, 2021, 4:30 PM IST

ಲೇಡಿ ಗಾಗಾ ಎಂದರೆ ಎಲ್ಲರೂ ಕಣ್ಣು ಬಾಯಿ ಬಿಡುತ್ತಾರೆ.ಸೌಂದರ್ಯ, ಶಾರೀರ ಎಲ್ಲವೂ ಎಂಥವರನ್ನಾದರೂ ಮಂತ್ರಮುಗ್ಧರನ್ನಾಗಿಸುತ್ತೆ. ಅಂಥ ಖ್ಯಾತ ಗಾಯಕಿಯ ಬಾಳಲ್ಲಿ ನಡೆಯಬಾರದ ಘಟನೆ ನಡೆದಿತ್ತಂತೆ. ಎಲ್ಲವನ್ನೂ ಮೆಟ್ಟಿ ನಿಂತು, ಇದೀಗ ವಿಶ್ವದ ಪ್ರಸಿದ್ಧ ಗಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲಿತ್ತಾರೆ. ಇವರೀಗ ದಾಂಪತ್ಯಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಯಾರು ಆ ಹುಡುಗ?

ಗ್ರ್ಯಾಮಿ ಆವಾರ್ಡ್‌ನಿಂದ ಹಿಡಿದು ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ 35 ವರ್ಷದ ಲೇಡಿ ಗಾಗಾ ಇತ್ತೀಚೆಗೆ ತನ್ನ ಜೀವನಕ್ಕೆ ಸಂಬಂಧಿಸಿದ ಕಟು ಸತ್ಯವನ್ನು ಬಹಿರಂಗಪಡಿಸಿದ್ದಾರೆ.
ಅಮೇರಿಕನ್ ಟಿವಿಯ ಪ್ರಸಿದ್ಧ ಹೋಸ್ಟ್ ಓಪ್ರಾ ವಿನ್ಫ್ರೇ ಶೋನಲ್ಲಿ ಕಾಣಿಸಿಕೊಂಡಾಗ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹಂಚಿಕೊಂಡರು.
Tap to resize

ಗಾಗಾ ತನ್ನ 19 ವರ್ಷದಲ್ಲಿ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದರು ಎಂದು ಹೇಳಿ ಕೊಂಡಿದ್ದಾರೆ.
ಸಂಗೀತ ನಿರ್ಮಾಪಕ ತನ್ನ ಮೇಲೆ ಅತ್ಯಾಚಾರ ಎಸಗಿದನು ಎಂದು ಹೇಳಿದರು.
'ನನಗೆ 19 ವರ್ಷ ಮತ್ತು ನನ್ನ ಮ್ಯೂಸಿಕ್‌ ಕೆರಿಯರ್‌ ಪ್ರಾರಂಭವಾಗಿತ್ತು. ನಿರ್ಮಾಪಕ ನನ್ನ ಬಟ್ಟೆಗಳನ್ನು ತೆಗೆಯುವಂತೆ ಕೇಳಿಕೊಂಡನು. ನಿರಾಕರಿಸಿದಾಗ ಅವನು ನನ್ನ ವೃತ್ತಿಜೀವನವನ್ನು ಹಾಳು ಮಾಡುವುದಾಗಿ ನನಗೆ ಬೆದರಿಕೆ ಹಾಕಿದನು.ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾ ಇಂದಿಗೂ ನಾನು ನಡುಗುತ್ತಿದ್ದೇನೆ' ಎಂದು ಅವರು ಹೇಳಿದರು.
'ಅತ್ಯಾಚಾರದ ನಂತರ, ನಾನು ವಾರಗಟ್ಟಲೆ ಅನಾರೋಗ್ಯದಿಂದ ಬಳಲುತ್ತಿದ್ದೆ. ನನಗೆ ಏನೂ ಅರ್ಥವಾಗಲಿಲ್ಲ. ಅವರು ನನ್ನನ್ನು ಗರ್ಭಿಣಿಯಾದ ನಂತರ ಬಿಟ್ಟರು. ನಂತರ ನನ್ನನ್ನು ಹಲವಾರು ತಿಂಗಳು ಸ್ಟುಡಿಯೊದಲ್ಲಿ ಬಂಧಿಸಿಡಲಾಗಿತ್ತು' ಎಂದು ಮತ್ತಷ್ಟು ಬಹಿರಂಗ ಪಡಿಸಿದ ಸಿಂಗರ್‌.
'ನಂತರ, ನಾನು ಅನೇಕ ವರ್ಷಗಳ ಕಾಲ ಮಾನಸಿಕ ಅಸ್ವಸ್ಥಳಾಗಿದ್ದೆ. ನನ್ನ ಕೆಲಸದಿಂದಲೂ ವಿರಾಮ ತೆಗೆದುಕೊಂಡೆ. ಆ ಸಮಯದಲ್ಲಿ ಚಿಕಿತ್ಸೆಗೆ ಒಳಾಗದೆ. ಅನೇಕ ಟೆಸ್ಟ್‌ಗಳನ್ನು ಸಹ ಮಾಡಲಾಯಿತು.ನನ್ನ ಮನಸ್ಸುಸಂಪೂರ್ಣವಾಗಿ ಆಫ್‌ಲೈನ್‌ನಲ್ಲಿತ್ತು' ಎಂದು ಹೇಳಿದ ಲೇಡಿ ಗಾಗಾ
'ಆ ಅಪಘಾತವನ್ನು ಮರೆಯಲು ನನ್ನ ದೇಹ ಸಿದ್ಧವಾಗಿರಲಿಲ್ಲ.ಆಗ ನಾನು ನನ್ನನ್ನು ಬಲಪಡಿಸಿಕೊಂಡೆ. ಆ ಘಟನೆಯನ್ನು ಮೆರೆಯಲು ಹಲವು ಥೆರಪಿಗಳ ಸಹಾಯ ತೆಗೆದುಕೊಂಡೆ. ಎರಡೂವರೆ ವರ್ಷಗಳ ಕಾಲ ಚಿಕಿತ್ಸೆಯನ್ನು ತೆಗೆದುಕೊಂಡ ನಂತರ ನಾನು ನಾರ್ಮಲ್‌ ಆಗಲು ಸಾಧ್ಯವಾಯಿತು' ಎಂದು ಹೇಳಿದ್ದಾರೆ.
ಗಾಗಾ ಈ ದಿನಗಳಲ್ಲಿ ಉದ್ಯಮಿ ಮೈಕೆಲ್ ಪೋಲನ್‌ಸ್ಕಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.
ಲೇಡಿ ಗಾಗಾ ಫ್ಯಾಷನಿಸ್ಟ್ ಮತ್ತು ಯಾವಾಗಲೂ ಅವರ ಡ್ರೆಸ್ಸಿಂಗ್‌ ಸೆನ್ಸ್‌ನಿಂದಾಗಿಹೆಡ್‌ಲೈನ್‌ಲ್ಲಿರುತ್ತಾರೆ.
ಶೀಘ್ರದಲ್ಲೇ ಹೌಸ್‌ ಆಫ್‌ ಗುಶಿ ಎಂಬ ಕ್ರೈಮ್‌ ಡ್ರಾಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಲೇಡಿ ಗಾಗಾ.

Latest Videos

click me!