ಪತ್ನಿಗೆ ನೋವು ಕೊಡಲು ಮಕ್ಕಳನ್ನೇ ಕೊಂದ ಪತಿ, ಶವವನ್ನೂ ಸಮುದ್ರಕ್ಕೆಸೆದ!

Published : Jun 15, 2021, 04:58 PM IST

ಸ್ಪೇನ್‌ನಲ್ಲಿ ವ್ಯಕ್ತಿಯೊಬ್ಬ ತನ್ನಿಬ್ಬರು ಮಕ್ಕಳಿಗೆ ವಿಷ ನೀಡಿ ಕೊಂದಿದ್ದಾನೆ.. ಬಳಿಕಿ ಅವರ ಶವವನ್ನು ನದಿಗೆಸೆದಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಈ ವ್ಯಕ್ತಿ ಇದೆಲ್ಲವನ್ನೂ ತನ್ನ ಪತ್ನಿಗೆ ತಿಳಿಯದಂತೆ ಮಾಡಿದ್ದಾನೆ. ಇನ್ನು ಗಂಡ ತನಗೆ ನೀನಿನ್ನು ಯಾವತ್ತೂ ಮಕ್ಕಳನ್ನು ನೋಡಲಾರೆ ಎಂದು ಹೇಳಿದ್ದನೆಂದು ಪತ್ನಿ ವಿಚಾರಣೆ ವೇಳೆ ಆರೋಪಿಸಿದ್ದಾಳೆ. ಆತ ಹಾಗೇ ನಡೆದುಕೊಂಡಿದ್ದು, ತನ್ನಿಬ್ಬರು ಮಕ್ಕಳನ್ನೇ ಕೊಂದು ಹಾಕಿದ್ದಾನೆ.  

PREV
17
ಪತ್ನಿಗೆ ನೋವು ಕೊಡಲು ಮಕ್ಕಳನ್ನೇ ಕೊಂದ ಪತಿ, ಶವವನ್ನೂ ಸಮುದ್ರಕ್ಕೆಸೆದ!

ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಟ: ಡೈಲಿ ಮೇಲ್ ವರದಿಯನ್ವಯ, ಪ್ರಾಥಮಿಕ ತನಿಖೆಯಲ್ಲಿ ಸ್ಪಾನಿಶ್ ವ್ಯಕ್ತಿ ಟಾಮಸ್‌ ಗಿಮೆನೋ ತನ್ನ ಆರು ವರ್ಷದ ಮಗಳು ಒಲಿವಿಯಾ ಹಾಗೂ ಒಂದು ವರ್ಷದ ಅನ್ನಾಳಿಗೆ ನಿದ್ದೆ ಮಾತ್ರೆ ನೀಡಿದ್ದ. ಇಬ್ಬರೂ ಪ್ರಜ್ಞಾಹೀನರಾಗಿದ್ದಾಗ ನದಿಗೆಸೆದಿದ್ದಾನೆ ಎಂದು ತಿಳಿದು ಬಂದಿದೆ.
 
27

ಏಪ್ರಿಲ್ 27ರಂದು ಹತ್ಯೆ: ಕೋರ್ಟ್‌ಗೆ ನೀಡಲಾದ ವರದಿಯಲ್ಲಿ ಆರೋಪಿ ಏಪಗ್ರಿಲ್ 27ರಂದು ತನ್ನ ಮನೆಯಲ್ಲೇ ಮಕ್ಕಳನ್ನು ಕೊಂದಿದ್ದಾನೆ. ತನ್ನ ಈ ಕೃತ್ಯದಿಂದ ತನ್ನ ಮಾಝಿ ಪತ್ನಿಗೆ ಸಹಿಸಲಸಾಧ್ಯವಾದ ನೋವು ನೀಡುವುದೇ ಅವನ ಉದ್ದೇಶವಾಗಿತ್ತೆನ್ನಲಾಗಿದೆ.
 
37

ಆರೋಪಿಯ ಮನೆಯಲ್ಲಿ ಲಿವಿಂಗ್ ರೂಂನನಲ್ಲಿ ಮಾತ್ರೆಗಳ ಪ್ಯಾಕೇಟ್ ಸಿಕ್ಕಿದ್ದು, ಇದರಲ್ಲಿ ನಿದ್ದೆ ಮಾತ್ರೆಗಳಿದ್ದವೆನ್ನಲಾಗಿದೆ. ಇನ್ನು ಕೇವಲ ಮೂರು ತಿಂಗಳ ಹಿಂದಷ್ಟೇ ಈ ವ್ಯಕ್ತಿ ತನ್ನ ಮಾಝಿ ಪತ್ನಿಯ ಪ್ರೇಮಿಯ ಮೇಲೆ ದಾಳಿ ನಡೆಸಿದ್ದ. ಇದಾದ ಬಳಿಕ ಮಕ್ಕಳ ಜೊತೆ ನಾಪತ್ತೆಯಾಗಿದ್ದ. ವಿಚಾರಣೆ ನಡೆಸಿರುವ ಕೋರ್ಟ್ ಹತ್ಯೆ ಹಾಗೂ ದೌರ್ಜನ್ಯದಡಿ ಆರೋಪಿಯನ್ನು ಬಂಧಿಸುವಂತೆ ವಾರೆಂಟ್ ಜಾರಿಗೊಳಿಸಿದೆ.
 
47

ಪ್ಲಾಸ್ಟಿಕ್‌ನಲ್ಲಿ ಹಾಕಿ ಸಮುದ್ರಕ್ಕೆಸೆದ: ಈ ವ್ಯಕ್ತಿ ತನ್ನ ಮಕ್ಕಳನ್ನು ಕೊಂದು ಕಾರಿನಲ್ಲಿ ಸಮುದ್ರದ ಬದಿಗೆ ಕೊಂಡೊಯ್ದಿದ್ದಾನೆ ಬಳಿಕ ಶವಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ನದಿಗೆಸೆದಿದ್ದಾನೆ ಎಂದು ವರದಿಗಳು ಉಲ್ಲೇಖಿಸಿವೆ.
 
57

ಆರು ವರ್ಷದ ಒಲಿವಿಯಾ ಮೃತದೇಹ ಸಮುದ್ರದಲ್ಲಿ  ಮೂರು ಸಾವಿರ ಅಡಿಗೂ ಹೆಚ್ಚಿನ ಆಳದಲ್ಲಿ ಬ್ಯಾಗ್‌ ಒಂದರಲ್ಲಿ ಪತ್ತೆಯಾಗಿದೆ. ಇನ್ನು 37 ವರ್ಷದ ಆರೋಪಿ ಹಾಗೂ ಕಿರಿ ಮಗಳು ಅನ್ನಾ ಇನ್ನೂ ನಾಪತ್ತೆಯಾಗಿದ್ದಾರೆ. ಪೊಲೀಸರು ಇವರ ಹುಡುಕಾಟ ಮುಂದುವರೆಸಿದ್ದಾರೆ.

67

ಸ್ಪೇನ್‌ನಲ್ಲಿ ಭಾರೀ ಪ್ರತಿಭಟನೆ: ಇಬ್ಬರೂ ಮಕ್ಕಳು ನಾಪತ್ತೆಯಾದ ಬೆನ್ನಲ್ಲೇ ಸ್ಪೇನ್ ನಗರಾದ್ಯಂತ ಭಾರೀ ಪ್ರತಿಭಟನೆ ನಡೆದಿದೆ. ಇಲ್ಲಿನ ನಾಗರಿಕರು ಈ ಘಟನೆಯನ್ನು ಕಟುವಾಗಿ ಖಂಡಿಸಿದ್ದಾರೆ.
 
77

ಇದು ಆರೋಪಿಯ ಫೋಟೋ ಆಗಿದೆ. ಪೊಲೀಸರು ಈತನಿಗಾಗಿ ಹುಡುಕಾಟ ಮುಂದುವರೆಸಿದರೂ, ಈತ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories