ಈ ಜಗತ್ತಿನಲ್ಲಿ ಹಲವು ಐಷಾರಾಮಿ ಬಂಗಲೆಗಳಿವೆ. ಆದರೆ ಬಕಿಂಗ್‌ಹ್ಯಾಮ್ ಅರಮನೆ ಅದ್ವಿತೀಯ ಸ್ಥಾನದಲ್ಲಿದೆ. ಬ್ರಿಟಿಷ್ ರಾಣಿಯವರ ಈ ಅರಮನೆ, ವಿಶ್ವದ ಎರಡನೇ ಅತಿ ದುಬಾರಿ ಖಾಸಗಿ ಮನೆಯಾದ ಮುಖೇಶ್ ಅಂಬಾನಿಯವರ ಆಂಟಿಲಿಯಾಕ್ಕಿಂತ ಎರಡು ಪಟ್ಟು ಹೆಚ್ಚು ಮೌಲ್ಯದ್ದಾಗಿದೆ. ಹೌದು. ಬಕಿಂಗ್‌ಹ್ಯಾಮ್ ಅರಮನೆಯ ಬೆಲೆ ಸುಮಾರು ₹40,000 ಕೋಟಿ.
775 ಕೊಠಡಿಗಳು, 19 ಸ್ಟೇಟ್ರೂಮ್‌ಗಳು ಸೇರಿದಂತೆ, ಬಕಿಂಗ್‌ಹ್ಯಾಮ್ ಅರಮನೆಯು ರಾಜಮನೆತನದ ನಿವಾಸವಾಗಿದೆ. ಇದು 92 ಕಚೇರಿಗಳು ಮತ್ತು 78 ಸ್ನಾನಗೃಹಗಳನ್ನು ಹೊಂದಿದೆ.