ಭಾರತ ಮತ್ತು ಪಾಕಿಸ್ತಾನ ಮೂಲದ, ಯುಎಸ್‌ನಲ್ಲಿ ನೆಲೆಸಿರುವ ಖ್ಯಾತ ಸಲಿಂಗ ದಂಪತಿ ಅಂಜಲಿ ಚಕ್ರ ಮತ್ತು ಸೂಫಿ ಮಲಿಕ್ ದಾಂಪತ್ಯ ದ್ರೋಹದ ಕಾರಣದಿಂದಾಗಿ 5 ವರ್ಷಗಳ ವಿವಾಹ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಈ ಬಗ್ಗೆ ಹಂಚಿಕೊಂಡಿದ್ದಾರೆ. ಈ ಬಗ್ಗೆ ವಿವರ ಬರೆದಿರುb ಅಂಜಲಿ ಚಕ್ರಾ- ಅವಳು ನನಗೆ ಮೋಸ ಮಾಡಿದಳು. ಆದರೆ, ನಾನು ಅವಳೊಂದಿಗಿನ ಸಮಯವನ್ನು ಸಂತೋಷದಾಯಕವಾಗಿಯೇ ನೋಡುತ್ತೇನೆ ಎಂದಿದ್ದಾರೆ.
ಇತ್ತ ಸೂಫಿ ಕೂಡಾ ತಮ್ಮಿಬ್ಬರ ದಾಂಪತ್ಯ ಅಂತ್ಯವಾಗಿದೆ ಎಂದು ಘೋಷಿಸಿದ್ದು, ಇದಕ್ಕೆ ತಾನು ಮಾಡಿದ ಮೋಸವೇ ಕಾರಣ. ವಿವಾಹಕ್ಕೆ ಕೆಲ ದಿನಗಳಿರುವಾಗ ತಾನು ಅಂಜಲಿಗೆ ಮೋಸ ಎಸಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
'ನನ್ನ ತಿಳುವಳಿಕೆಯನ್ನು ಮೀರಿ ನಾನು ಅವಳನ್ನು ತೀವ್ರವಾಗಿ ನೋಯಿಸಿದ್ದೇನೆ' ಎಂದಿರುವ ಸೂಫಿ, ತಪ್ಪನ್ನು ಒಪ್ಪಿಕೊಂಡಳು ಮತ್ತು ಅವಳ ಕಾರ್ಯಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾಳೆ.
'ಇದು ಆಘಾತಕಾರಿಯಾಗಬಹುದು, ಆದರೆ ನಮ್ಮ ಪ್ರಯಾಣವು ಬದಲಾಗುತ್ತಿದೆ. ಸೂಫಿ ಮಾಡಿದ ದಾಂಪತ್ಯ ದ್ರೋಹದಿಂದಾಗಿ ನಾವು ನಮ್ಮ ಮದುವೆಯನ್ನು ರದ್ದುಗೊಳಿಸಲು ಮತ್ತು ನಮ್ಮ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದೇವೆ' ಎಂದು ಚಕ್ರಾ ಭಾನುವಾರ ತನ್ನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಬರೆದಿದ್ದಾರೆ.
2019ರಲ್ಲಿ, ವ್ಯಾಪಕವಾಗಿ ಮೆಚ್ಚುಗೆ ಪಡೆದ ಫೋಟೋಶೂಟ್‌ನ ಛಾಯಾಚಿತ್ರಗಳ ಸರಣಿಯು ಸಾಂಪ್ರದಾಯಿಕ ಉಡುಪಿನಲ್ಲಿ ಅಲಂಕರಿಸಲ್ಪಟ್ಟ ಈ ದಂಪತಿಯ ವಿವಾಹ ಕಾರ್ಯಕ್ರಮ ಅಂತರ್ಜಾಲವನ್ನು ಆಕರ್ಷಿಸಿತ್ತು.
ಬೇರೆ ಬೇರೆ ದೇಶಗಳು, ವಿಭಿನ್ನ ಧರ್ಮ, ಸಲಿಂಗ ವಿವಾಹ- ಹೀಗೆ ಹಲವಾರು ಕಾರಣಗಳಿಂದಾಗಿ ಈ ಜೋಡಿಯು ಇಂಟರ್‌ನೆಟ್‌ನಲ್ಲಿ ಸೆನ್ಸೇಶನ್ ಹುಟ್ಟು ಹಾಕಿತ್ತು.
ದಂಪತಿಯು 1.36 ಲಕ್ಷ ಚಂದಾದಾರರನ್ನು ಹೊಂದಿರುವ ಯೂಟ್ಯೂಬ್ ಚಾನೆಲ್ ಅನ್ನು ಸಹ ಹಂಚಿಕೊಂಡಿದ್ದಾರೆ. ಎರಡು ತಿಂಗಳ ಹಿಂದಿನವರೆಗೂ ಅವರು ನಿಯಮಿತವಾಗಿ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು.
ಒಂದು ವರ್ಷದ ಹಿಂದೆ, ಅವರು ತಮ್ಮ ನಿಶ್ಚಿತಾರ್ಥವನ್ನು ಘೋಷಿಸುವ ವೀಡಿಯೊವನ್ನು ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಲ್ಲಿ ಪ್ರಸ್ತಾಪದೊಂದಿಗೆ ಹಂಚಿಕೊಂಡಿದ್ದರು.
ಈ ಜೋಡಿಗೆ ಆನ್‌ಲೈನ್ ಪ್ರಪಂಚದಲ್ಲಿ ಸಾಕಷ್ಟು ಬೆಂಬಲಿಗರಿದ್ದು, ಇವರ ಪ್ರೀತಿ, ಬೋಲ್ಡ್‌ನೆಸ್‌ಗೆ ಫಿಧಾ ಆಗಿದ್ದರು. ಆದರೆ ಈಗ ಇವರ ಮುರಿದ ದಾಂಪತ್ಯದ ಬಗ್ಗೆ ನೆಟ್ಟಿಗರು ಖೇದ ವ್ಯಕ್ತಪಡಿಸಿದ್ದಾರೆ.