ರಾಜನಂತಿದ್ದ ನಾಯಿ ಅನಾಥ, ವೈಟ್‌ಹೌಸ್‌ನಿಂದ ಜರ್ಮನ್ ಶೆಫರ್ಡ್ ಹೊರಹಾಕಿದ ಜೋ ಬೈಡೆನ್!

First Published Oct 5, 2023, 12:44 PM IST

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಮ್ಮ ಮುದ್ದಿನ ಸಾಕು ನಾಯಿಯನ್ನು ವೈಟ್‌ಹೌಸ್‌ನಿಂದ ಹೊರಕ್ಕೆ ಹಾಕಿದ್ದಾರೆ. ಅಮೆರಿಕ ಅಧ್ಯಕ್ಷರ ಶ್ವೇತಭವನದಲ್ಲಿ ರಾಜನಂತಿದ್ದ 2 ವರ್ಷದ ಜರ್ಮನ್ ಶೆಫರ್ಡ್ ಇದೀಗ ಅನಾಥವಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಲವು ಬಾರಿ ತಮ್ಮ ಮುದ್ದಿನ ನಾಯಿ ಜೊತೆ ಕಾಣಿಸಿಕೊಂಡಿದ್ದಾರೆ. 2 ವರ್ಷದ ಜರ್ಮನ್ ಶೆಫರ್ಡ್, ಜೋ ಬೈಡೆನ್ ಡಾಗ್ ಕಮಾಂಡರ್ ಆಗಿ ನೇಮಕಗೊಂಡಿತ್ತು

2021ರಲ್ಲಿ ವೈಟ್‌ಹೌಸ್‌ನಲ್ಲಿ ಡಾಗ್ ಕಮಾಂಡರ್ ಸೇವೆಗೆ ನಿಯುಕ್ತಿಗೊಂಡ ಜರ್ಮನ್ ಶೆಫರ್ಡ್ ಇದೀಗ ವೈಟ್‌ಹೌಸ್‌ನಿಂದಲೇ ಹೊರಬಿದ್ದಿದೆ. ನಾಯಿ ಈಗಾಗಲೇ 11 ಮಂದಿ ಕಚ್ಚಿರುವುದೇ ಗೆಟೌಟ್‌ಗೆ ಮುಖ್ಯ ಕಾರಣ.

Latest Videos


ವೈಟ್‌ಹೌಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು 11 ಮಂದಿಗೆ ಜೆರ್ಮನ ಶೆಫರ್ಡ್ ಕಚ್ಚಿದೆ. ಹೆಚ್ಚು ಆಕ್ರಮಣಕಾರಿಯಾಗಿದ್ದ ಈ ಜೆರ್ಮನ್ ಶೆಫರ್ಡ್‌ನಿಂದ ಗಾಯಗೊಂಡವರ ಸಂಖ್ಯೆಯೇ ಹೆಚ್ಚಿದೆ.

ಸೆಪ್ಟೆಂಬರ್ 25 ರಂದು ಅಮೆರಿಕ ಸೆಕ್ರೆಟರಿ ಸರ್ವೀಸ್ ಎಜೆಂಟ್‌ಗೆ ಕಚ್ಚಿ ಗಾಯಗೊಳಿಸಿತ್ತು. ಸೆಪ್ಟೆಂಬರ್ 30 ರಂದು ವೈಟ್‌ಹೌಸ್‌ನಲ್ಲಿ ಕೊನೆಯದಾಗಿ ಜೆರ್ಮನ್ ಶೆಫರ್ಡ್ ಕಾಣಿಸಿಕೊಂಡಿತ್ತು.

ಸೆಕ್ರೆಟರಿ ಸರ್ವೀಸ್ ಎಜೆಂಟ್ ನಾಯಿ ಕಡಿತದಿಂದ ತೀವ್ರವಾಗಿ ಗಾಯಗೊಂಡಿದ್ದರು. ಇಷ್ಟೇ ಅಲ್ಲ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾಗ್ ಕಮಾಂಡರ್‌ನಿಂದ ಅಪಾಯ ಹೆಚ್ಚುತ್ತಿದ್ದಂತೆ ನಾಯಿಗೆ ಗೇಟ್ ಪಾಸ್ ನೀಡುವ ನಿರ್ಧಾರಕ್ಕೆ ಬರಲಾಗಿದೆ.

ಅಕ್ಟೋಬರ್ 1 ರಿಂದ ವೈಟ್‌ಹೌಸ್‌ನಿಂದ ಜರ್ಮನ್ ಶೆಫರ್ಡ್ ಹೊರಬಿದ್ದಿದೆ. ಇನ್ನು ಈ ಡಾಗ್ ಕಮಾಂಡರನ್ನು ಎಲ್ಲಿಗೆ ಸ್ಥಳಾಂತರಿಸಲಾಗಿದೆ. ಯಾರು ನೋಡಿಕೊಳ್ಳುತ್ತಿದ್ದಾರೆ ಅನ್ನೋ ಯಾವುದೇ ಮಾಹಿತಿ ಲಭ್ಯವಿಲ್ಲ.

2022ರ ನವೆಂಬರ್‌ನಲ್ಲಿ ಅಮೆರಿಕ ಸರ್ಕಾರಿ ಅಧಿಕಾರಿಯನ್ನು ಕಚ್ಚಿ ಗಾಯಗೊಳಿಸಿತ್ತು. ಗಂಭೀರವಾಗಿ ಗಾಯಗೊಂಡ ಅಧಿಕಾರಿ ಸತತ 3 ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಜುಲೈ ತಿಂಗಳಲ್ಲಿ ಸಂವಹನ ನಿರ್ದೇಶಕ ಹಾಗೂ  ಇತರ ಕೆಲ ಅಧಿಕಾರಿಗಳ ತಂಡ ಸಭೆ ಸೇರಿ ಹೊಸ ನಿಯಮ ರೂಪಿಸಿತ್ತು. ಬಳಿಕ ಈ ಕುರಿತು ಜೋ ಬೈಡೆನ್ ಪತ್ನಿಗೆ ಮನವರಿಕೆ ಮಾಡಿಕೊಡಲಾಗಿತ್ತು. ನಾಯಿಗೆ ಗೇಟ್‌ಪಾಸ್ ನೀಡುವ ಕುರಿತು ಬೈಡೆನ್ ಪತ್ನಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗಿದೆ.

click me!