ಕೆನಾಡದಲ್ಲಿನ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ಹತ್ಯೆಯಲ್ಲಿ ಭಾರತದ ಕೈವಾಡವನ್ನು ಕೇಂದ್ರ ಸರ್ಕಾರ ಸಾರಸಗಟಾಗಿ ತಳ್ಳಿ ಹಾಕಿದೆ. ಇಷ್ಟೇ ಅಲ್ಲ ತನಿಖೆ ನಡೆಸುವಂತೆ ಕೆನಾಡಾಗೆ ಸೂಚಿಸಿದೆ. ಇದೀಗ ತನಿಖೆ ನಡೆಸುತ್ತಿರುವ ಕೆನಾಡ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ.
ಕೆನಡಾದ ಬ್ರಟಿಷ್ ಕೊಲಂಬಿಯಾ ಬಳಿ ಇರುವ ಗುರು ನಾನಕ್ ಸಿಖ್ ಗುರುದ್ವಾರ ಬಳಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿತ್ತು. ಗುರುದ್ವಾರದ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ.
ಜೂನ್ 18 ರಂದು ಗುರುದ್ವಾರದ ಪಕ್ಕದಲ್ಲಿನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಗ್ರೇ ಕಲರ್ ಬಣ್ಣದ ಪಿಕಪ್ ಟ್ರಕ್ ಹತ್ತಿ ವಾಹನ ರಿವರ್ಸ್ ತೆಗೆದಿದ್ದಾರೆ. ಇದೇ ವೇಳೆ ಪಕ್ಕದಲ್ಲೇ ನಿಲ್ಲಿಸಿದ್ದ ಬಿಳಿ ಬಣ್ಣದ ಸೆಡಾನ್ ಕಾರು ಟ್ರಕ್‌ಗಿಂತ ವೇಗವಾಗಿ ಸಾಗಿದೆ.
ಪಾರ್ಕಿಂಗ್‌ನ ಹೊರಹೋಗುವ ಗೇಟ್ ಬಳಿ ಬಂದ ಸೆಡಾನ್ ಕಾರು ತಕ್ಷಣ ಬ್ರೇಕ್ ಹಾಕಿ ದಾರಿ ಬಿಟ್ಟುಕೊಡದೆ ನಿಲ್ಲಿಸಲಾಗಿದೆ. ಇತ್ತ ಹರ್ದೀಪ್ ಸಿಂಗ್ ನಿಜ್ಜರ್ ವೇಗವಾಗಿ ಬಂದರೂ ಮೊದಲೇ ಪ್ಲಾನ್ ಮಾಡಿದ್ದ ಹಂತಕರು ಉಗ್ರ ಹರ್ದೀಪ್ ಸಿಂಗ್ ದಾರಿ ಬ್ಲಾಕ್ ಮಾಡಿದ್ದಾರೆ.
ಏನಾಗುತ್ತಿದೆ ಎಂದು ನೋಡುವ ಮೊದಲೇ ಅವಿತುಕುಳಿತಿದ್ದ ಇಬ್ಬರು ಪಿಕಪ್ ಟ್ರಕ್ ಒಳಗಿದ್ದ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಗುಂಡಿನ ಸುರಿಮಳೆ ಗೈದಿದ್ದಾರೆ. ಹರ್ದೀಪ್ ಸಿಂಗ್ ನಿಜ್ಜರ್‌ಗೆ ಅಲುಗಾಡಲು ಸಮಯ ನೀಡಿಲ್ಲ.
ಆರಂಭಿಕ ಗುಂಡುಗಳು ಪಿಕಪ್ ಟ್ರಾಕ್ ಗಾಜು ಸೀಳಿ ಹರ್ದೀಪ್ ಸಿಂಗ್ ದೇಹ ಹೊಕ್ಕಿತ್ತು. ಇಬ್ಬರು ಒಟ್ಟು 50 ಬುಲೆಟ್ ಹಾರಿಸಿದ್ದಾರೆ. ಇದರಲ್ಲಿ 34 ಗುಂಡುಗಳು ನಿಜ್ಜರ್ ದೇಹ ಹೊಕ್ಕಿದೆ.
ಗುಂಡಿನ ಚಕಮಕಿ ಆರಂಭಗೊಳ್ಳುತ್ತಿದ್ದಂತೆ ಸೆಡಾನ್ ಕಾರು ವೇಗವಾಗಿ ಮುಂದಕ್ಕೆ ಸಾಗಿದೆ. ಇತ್ತ ಗುಂಡು ಹಾರಿಸಿದ ಇಬ್ಬರು ಅಪರಿಚಿತರು ಒಂದೇ ಸಮನೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಗುಂಡಿನ ಸದ್ದು ಕೇಳಿ ಗುರುದ್ವಾರದ ಸ್ವಯಂ ಸೇವಕ ಭೂಪಿಂದ್ರಜಿತ್ ಸಿಂಗ್ ಓಡೋಡಿ ಸ್ಥಳಕ್ಕೆ ಬಂದಿದ್ದಾನೆ. ಈ ವೇಳೆ ದಾಳಿಕೋರರು ಪರಾರಿಯಾಗಿದ್ದಾರೆ. ಇತ್ತ ಕಾರಿನ ಡೋರ್ ತೆಗೆದಾಗ ರಕ್ತ ಮಡುವಿನಲ್ಲಿದ್ದ ನಿಜ್ಜರ್ ದೇಹ ನೋಡಿ ಸ್ವಯಂ ಸೇವಕ ಬೆಚ್ಚಿ ಬಿದ್ದಿದ್ದಾನೆ.
ಮೇಲ್ನೋಟಕ್ಕೆ ಇದು ಗ್ಯಾಂಗ್‌ವಾರ್ ಹತ್ಯೆ ಎಂದು ಎನಿಸುತ್ತಿದೆ. ಭಾರತದ ಕೈವಾಡದ ಕುರಿತು ಇದುವರೆಗೂ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೆ ಕೆನಾಡಾ ಮಾತ್ರ ಇದೇ ಆರೋಪದ ಮೇಲೆ ರಾಜಕೀಯ ಮಾಡುತ್ತಿದೆ.