ಅಪರೂಪದ ವಸ್ತುಗಳಿಗೆ ಇರುವ ಬೇಡಿಕೆ ಅಷ್ಟಿಷ್ಟಲ್ಲ. ಇತಿಹಾಸಕ್ಕೆ ಸಾಕ್ಷಿಯಾಗಿರುವ ವಸ್ತುಗಳನ್ನ ಲಕ್ಷ ಲಕ್ಷ ಕೊಟ್ಟು ಖರೀದಿ ಮಾಡ್ತಾರೆ. ಆದ್ರೆ ಕಾಂಡೋಮ್‌ಗೂ ಅಷ್ಟೇ ಕ್ರೇಜ್ ಇದೆ ಅಂದ್ರೆ ನಂಬ್ತೀರಾ?
ಪ್ರಪಂಚದಲ್ಲಿ ಅನೇಕ ವಿಭಿನ್ನ ರೀತಿಯ ಪುರಾತನ ವಸ್ತುಗಳಿವೆ. ಆದರೆ ಇತ್ತೀಚೆಗೆ ಸುದ್ದಿಯಲ್ಲಿರುವ ಒಂದು ವಿಶೇಷ ಕಾಂಡೋಮ್ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದೆ. ಸುಮಾರು 200 ವರ್ಷಗಳ ಹಿಂದೆ ತಯಾರಾದ ಕಾಂಡೋಮ್ ಈಗ ಜಗತ್ತಿನ ಗಮನ ಸೆಳೆದಿದೆ.
25
ಎಲ್ಲಿದೆ?
ಈ ಅದ್ಭುತ ಕಾಂಡೋಮ್ ನೆದರ್‌ಲ್ಯಾಂಡ್ಸ್‌ನ ಪ್ರಸಿದ್ಧ ಮ್ಯೂಸಿಯಂ ಆಮ್‌ಸ್ಟರ್‌ಡ್ಯಾಮ್ ರಿಜ್ಕ್ಸ್‌ಮ್ಯೂಸಿಯಂನಲ್ಲಿ (Rijksmuseum) ಪ್ರದರ್ಶನದಲ್ಲಿದೆ. ಸಾವಿರಾರು ಜನರು ಇದನ್ನು ನೋಡಲು ಅಲ್ಲಿಗೆ ಬರುತ್ತಿದ್ದಾರೆ.
35
ಕುರಿ ಕರುಳಿನಿಂದ ತಯಾರಿ
ಈ ಕಾಂಡೋಮ್ ತಯಾರಿಕೆಗೆ ಕುರಿಗಳ ಕರುಳನ್ನು ಬಳಸಲಾಗಿದೆ. ಆಗ ರಬ್ಬರ್ ಲಭ್ಯವಿಲ್ಲದ ಕಾರಣ, ಪ್ರಾಣಿಗಳ ಅಂಗಗಳನ್ನು ಬಳಸಿ ಕಾಂಡೋಮ್‌ಗಳನ್ನು ತಯಾರಿಸಲಾಗುತ್ತಿತ್ತು.