ಪಾಕಿಸ್ತಾನದಲ್ಲಿ ಬಸ್ ಸ್ಫೋಟ: ಚೀನೀ ಪ್ರಜೆಗಳು ಸೇರಿ ಕನಿಷ್ಠ 13 ಸಾವು!

First Published Jul 14, 2021, 3:55 PM IST

ವಾಯುವ್ಯ ಪಾಕಿಸ್ತಾನದ ಬಸ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ 9 ಮಂದಿ ಚೀನಾದ ಕಾರ್ಮಿಕರು ಮತ್ತು ಪಾಕಿಸ್ತಾನ ಇಬ್ಬರು ಸೈನಿಕರು ಸೇರಿ 13 ಮಂದಿ ಮೃತಪಟ್ಟಿದ್ದಾರೆ.
 

ಪಾಕಿಸ್ತಾನದ ಉತ್ತರ ಭಾಗದಲ್ಲಿ ಬುಧವಾರ ಬಸ್ ಒಂದನ್ನು ಗುರಿಯಾಗಿರಿಸಿಕೊಂಡು ನಡೆಸಿದ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 9 ಮಂದಿ ಚೀನೀ ಪ್ರಜೆಗಳು ಮತ್ತು ಒಬ್ಬ ಪಾಕಿಸ್ತಾನಿ ಸೈನಿಕ ಸೇರಿದ್ದಾರೆ.
undefined
'ಸ್ಫೋಟದಿಂದ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ವಾಹನದಲ್ಲಿ ಆವರಿಸಿದ ಜ್ವಾಲೆ, ಆರು ಚೀನಾ ಪ್ರಜೆಗಳು ಸೇರಿದಂತೆ 13 ಮಂದಿಯ ಜೀವಹಾನಿಗೆ ಕಾರಣವಾಗಿದೆ' ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಹಿಸ್ತಾನ್ ಜಿಲ್ಲೆಯಲ್ಲಿ ನಡೆದ ಈ ಸ್ಫೋಟದಲ್ಲಿ ಇನ್ನೂ 31 ಚೀನೀ ಪ್ರಜೆಗಳು ಗಾಯಗೊಂಡಿದ್ದಾರೆ.
undefined
ಚೀನಾದ ಎಂಜಿನಿಯರ್‌ಗಳು, ಸರ್ವೇಯರ್‌ಗಳು ಮತ್ತು ಮೆಕ್ಯಾನಿಕಲ್ ಸಿಬ್ಬಂದಿ ಸೇರಿದಂತೆ ಒಟ್ಟು 30 ಮಂದಿಯನ್ನು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ದಸು ಅಣೆಕಟ್ಟು ನಿರ್ಮಾಣ ಸ್ಥಳಕ್ಕೆ ಬಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
undefined
ಈ ಸ್ಫೋಟವು ರಸ್ತೆ ಬದಿ ಇರಿಸಲಾಗಿದ್ದ ಸಾಧನದಿಂದ ಸಂಭವಿಸಿದ್ದೇ, ಅಥವಾ ಯೋಜಿತ ದಾಳಿಯೇ ಎನ್ನುವುದು ಸ್ಪಷ್ಟವಾಗಿಲ್ಲ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ.
undefined
ಸ್ಫೋಟದ ಬಳಿಕ ರಸ್ತೆ ಪಕ್ಕದ ಕಲ್ಲಿನ ದಿಬ್ಬಕ್ಕೆ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಅಪಾರ ಸಾವು ನೋವು ಸಂಭವಿಸಿದೆ. ಬಸ್‌ನಲ್ಲಿದ್ದ ಒಬ್ಬ ಚೀನೀ ಎಂಜಿನಿಯರ್ ಮತ್ತು ಒಬ್ಬ ಸೈನಿಕ ನಾಪತ್ತೆಯಾಗಿದ್ದಾರೆ.ಪಾಕಿಸ್ತಾನದ ದಕ್ಷಿಣ ಭಾಗದಲ್ಲಿರುವ ಗ್ವಾದರ್ ಬಂದರಿಗೆ ಪಶ್ಚಿಮ ಚೀನಾವನ್ನು ಸಂಪರ್ಕಿಸುವ ಗುರಿ ಹೊಂದಿರುವ ದಸು ಹೈಡ್ರೋ ಎಲೆಕ್ಟ್ರಿಕ್ ಯೋಜನೆ ನಡೆಯುತ್ತಿದೆ. ಇದು ಚೀನಾ- ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಯ ಭಾಗವಾಗಿದೆ.
undefined
ಚೀನಾದ ಎಂಜಿನಿಯರ್‌ಗಳು ಪಾಕಿಸ್ತಾನದ ನಿರ್ಮಾಣ ಕಾರ್ಮಿಕರೊಂದಿಗೆ ಸೇರಿ ಹಲವು ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ.
undefined
click me!