ಋತುಚಕ್ರವು (periods) ನೈಸರ್ಗಿಕ ಪ್ರಕ್ರಿಯೆಯಾಗಿರಬಹುದು, ಆದರೆ ಇದನ್ನ ಮೂಢನಂಬಿಕೆ ಮತ್ತು ದುರಾದೃಷ್ಟದೊಂದಿಗೆ ಹೆಚ್ಚಾಗಿ ಕನೆಕ್ಟ್ ಮಾಡಲಾಗುತ್ತೆ. ಇದಕ್ಕೆ ಸಂಬಂಧಿಸಿದ ಅನೇಕ ಪದ್ಧತಿಗಳನ್ನು (traditions)ಪ್ರಪಂಚದಾದ್ಯಂತ ನಾವು ಕಾಣಬಹುದು. ನಮ್ಮ ದೇಶದಲ್ಲೇ ನೋಡಿದ್ರೆ, ಕೆಲವೆಡೆ ಋತುಮತಿಯಾದವರನ್ನು ಮನೆಯಿಂದ, ಕಾರ್ಯಕ್ರಮಗಳಿಂದ ದೂರ ಇಟ್ಟರೆ, ಇನ್ನೂ ಕೆಲವೆಡೆ ಇದನ್ನು ಹಬ್ಬವಾಗಿ ಆಚರಿಸಲಾಗುತ್ತೆ. ಇನ್ನು ವಿದೇಶದಲ್ಲೂ ಈ ರೀತಿ ಇದೆಯೇ? ತಿಳಿಯೋಣ.
ನಮ್ಮ ನೆರೆ ದೇಶ ನೇಪಾಳದಲ್ಲಿ (Nepal) ಋತುಚಕ್ರದ ಬಗ್ಗೆ ವಿಭಿನ್ನ ಸಂಪ್ರದಾಯವಿದೆ. ನಾವು 21ನೇ ಶತಮಾನವನ್ನು ತಲುಪಿದ್ದರೂ, ತಂತ್ರಜ್ಞಾನ ಮತ್ತು ವಿಜ್ಞಾನವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದರೂ, ನಾವು ಇನ್ನೂ ಸಂಪ್ರದಾಯವಾದಿ ಚಿಂತನೆಯನ್ನು ಉತ್ತೇಜಿಸುತ್ತೇವೆ. ನೇಪಾಳದಲ್ಲಿಯೂ ಸಹ, ಋತುಚಕ್ರಕ್ಕೆ ಸಂಬಂಧಿಸಿದ ಚೌಪದಿ ಅಭ್ಯಾಸವನ್ನು ನಡೆಸಲಾಗುತ್ತದೆ. ಈ ಅಭ್ಯಾಸವು ಯಾವುದರ ಬಗ್ಗೆ ಎಂದು ತಿಳಿಯೋಣ.
ಚೌಪದಿ ಅಭ್ಯಾಸ
ನೇಪಾಳದಲ್ಲಿ ಕೆಲವು ಪ್ರದೇಶದಲ್ಲಿ ಋತುಮತಿಯಾಗಿರುವ ಮಹಿಳೆಯರ ಗೋಳು ಹೇಳ ತೀರದು. ಯಾಕಂದ್ರೆ ಮುಟ್ಟಿನ ಸಮಯದಲ್ಲಿ ಹುಡುಗಿಯರನ್ನು ಇಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಅವರನ್ನು ಪ್ರಾಣಿಗಳಂತೆ ಮನೆಯ ಹೊರಗಿನ ಗುಡಿಸಲು ಅಥವಾ ಆವರಣದಲ್ಲಿ ಕೂರಿಸಲಾಗುತ್ತದೆ.
ಈ ಸಮಯದಲ್ಲಿ, ಅವರು ಯಾರನ್ನೂ ಭೇಟಿಯಾಗುವುದನ್ನು ನಿಷೇಧಿಸಲಾಗಿದೆ. ವಿಶೇಷವಾಗಿ ಮನುಷ್ಯರನ್ನು ಮತ್ತು ದೇವರ ವಿಗ್ರಹಗಳನ್ನು ಅವರು ಸ್ಪರ್ಶಿಸಲು ಅನುಮತಿಸಲಾಗುವುದಿಲ್ಲ. ನೇಪಾಳದ ಹಲವೆಡೆ ಇದನ್ನು 'ಚೌಪಾರಿ' ಎಂದೂ ಕರೆಯಲಾಗುತ್ತದೆ, ನೇಪಾಳಾದ ಅಚಮ್ ನಲ್ಲಿ 'ಚೌಪಾರಿ' ಮತ್ತು ಬಜಾಂಗ್ ಜಿಲ್ಲೆಯಲ್ಲಿ 'ಚೌಕುಲ್ಲಾ' ಅಥವಾ 'ಚೌಕುಡಿ'. ಇದಲ್ಲದೆ, ಇದನ್ನು ದಡೆಲ್ಧುರಾ, ಬೈತಾಡಿ ಮತ್ತು ದಾರ್ಚುಲಾದಲ್ಲಿ ಚುಯೆ ಮತ್ತು ಬಹಿರ್ಹುನು ಎಂದೂ ಕರೆಯಲಾಗುತ್ತದೆ.
ಅಭ್ಯಾಸದ ಹಿಂದಿನ ಕಥೆ
ಚೌಪಾಡಿ ಎಂಬ ಪದವು ನೇಪಾಳದ ಪಶ್ಚಿಮ ಭಾಗದಿಂದ ಹುಟ್ಟಿಕೊಂಡಿತು. ಈ ಆಚರಣೆಯು ಮೂಢನಂಬಿಕೆಗೆ ಪ್ರಮುಖ ಉದಾಹರಣೆಯಾಗಿದೆ, ಈ ಪ್ರದೇಶದಲ್ಲಿ ಇಂದ್ರನು ಋತುಚಕ್ರವನ್ನು ಶಾಪವಾಗಿ ಸೃಷ್ಟಿಸಿದನು ಎಂಬ ಮೂಢ ನಂಬಿಕೆ ಇದೆ. ಆದ್ದರಿಂದ, ನೇಪಾಳದಲ್ಲಿ ಈ ಋತುಮತಿಯರಾದ ಮಹಿಳೆಯರನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ.
ಮುಟ್ಟಿನ ಸಮಯದಲ್ಲಿ, ಮಹಿಳೆ ಮರವನ್ನು ಮುಟ್ಟಿದಾಗ, (touch tree) ಮರವು ಹಣ್ಣು ನೀಡುವುದನ್ನು ನಿಲ್ಲಿಸುತ್ತದೆ ಎಂದು ನಂಬಲಾಗಿದೆ. ಮನುಷ್ಯನನ್ನು ಸ್ಪರ್ಶಿಸುವುದು ಅವರಿಗೆ ರೋಗವನ್ನು (health issues) ಉಂಟುಮಾಡಬಹುದು ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಸಮಯದಲ್ಲಿ ಮಹಿಳೆ ಏನನ್ನು ಮುಟ್ಟೋದು ಇಲ್ಲ.
ಇದು ದುರಾದೃಷ್ಟಕ್ಕೆ ಸಂಬಂಧಿಸಿದೆ ಎಂಬ ನಂಬಿಕೆ
ಈ ಸಮಯದಲ್ಲಿ ಮಹಿಳೆಯರನ್ನು ಪ್ರತ್ಯೇಕವಾಗಿಡಲು ಒಂದು ಕಾರಣವೆಂದರೆ ಋತುಮತಿ ಮಹಿಳೆ ಮನೆಯಲ್ಲಿದ್ದರೆ ಕುಟುಂಬಕ್ಕೆ ದುರಾದೃಷ್ಟವನ್ನು (bad luck) ಉಂಟು ಮಾಡುತ್ತಾರೆ ಮತ್ತು ಇದು ಅವರಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಸಮಯದಲ್ಲಿ ಮಹಿಳೆಯರನ್ನು ದೂರವೇ ಇಡುತ್ತಾರೆ.
ಈ ಅಭ್ಯಾಸವನ್ನು ನಿಷೇಧಿಸಲಾಗಿದೆ
ಈ ಪದ್ಧತಿಯನ್ನು ನೇಪಾಳದ ಸುಪ್ರೀಂ ಕೋರ್ಟ್ (Nepal Supreme Court) 2005 ರಲ್ಲಿ ನಿಷೇಧಿಸಿತು. ಇದರ ನಂತರ, 2017 ರಲ್ಲಿ, ಮುಟ್ಟಿನ ಸಮಯದಲ್ಲಿ ಯಾರಾದರೂ ಮಹಿಳೆಯನ್ನು ಈ ರೀತಿ ಮಾಡಲು ಒತ್ತಾಯಿಸಿದರೆ, ಅವಳು 3000 ನೇಪಾಳಿ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಕಾನೂನನ್ನು ಅಂಗೀಕರಿಸಲಾಯಿತು.