ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್(X) ಖರೀದಿಸಿದ ಬಳಿಕ ಹತ್ತು ಹಲವು ಫೀಚರ್ಸ್ ನೀಡಿದ್ದಾರೆ. ಇದರ ಜೊತೆಗೆ ಬ್ಲೂಟಿಕ್ ಚಂದಾದಾರಿಕೆ, ಟ್ವೀಟ್ ಮೀತಿ ಸೇರಿದಂತೆ ಹಲವು ನಿರ್ಬಂಧಗಳನ್ನು ಹೇರಿದ್ದಾರೆ. ಇದೀಗ ಎಲಾನ್ ಮಸ್ಕ್ ಟ್ವಿಟರ್(X)ಗೆ ಮತ್ತೆ ಸಂಕಷ್ಟ ಎದುರಾಗಿದೆ.
ಎಲಾನ್ ಮಸ್ಕ್ ಟ್ವಿಟರ್ ಖರೀದಿ ಬಳಿಕ ದಿನದಿಂದ ದಿನಕ್ಕೆ ಸಕ್ರಿಯ ಬಳಕೆದಾರರ ಸಂಖ್ಯೆ ಕುಸಿಯುತ್ತಲೇ ಹೋಗಿದೆ. ಮಸ್ಕ್ ಮಾಲೀಕತ್ವದಲ್ಲಿ ಟ್ವಿಟರ್ ಶೇಕಡಾ 11.6ರಷ್ಟು ಸಕ್ರಿಯ ಬಳಕೆದಾರರನ್ನು ಕಳೆದುಕೊಂಡಿದೆ.
ಎಲಾನ್ ಮಸ್ಕ್ ಟ್ವಿಟರ್ ಮಾಲೀಕತ್ವ ವಹಿಸಿಕೊಂಡಾಗ 254.5 ಮಿಲಿಯನ್ ಸಕ್ರಿಯ ಬಳಕೆದಾರರಿದ್ದರು. ಆದರೆ ಈ ಸಂಖ್ಯೆ ಇದೀಗ 225ಕ್ಕೆ ಇಳಿಕೆಯಾಗಿದೆ ಎಂದು X ಸಿಇಒ ಲಿಂಡಾ ಯಕಾರಿನೋ ವರದಿ ನೀಡಿದ್ದಾರೆ.
ಟ್ವಿಟರ್ ಹಾಕಿರುವ ನಿರ್ಬಂಧ ಸೇರಿದಂತೆ ಹಲವು ಕಾರಣಗಳಿಂದ ಇದೀಗ ಜನರು ಟ್ವಿಟರ್‌ನಿಂದ ದೂರ ಸರಿಯುತ್ತಿರುವು ಕುರಿತು ಮಾಹಿತಿ ಬಹಿರಂಗವಾಗಿದೆ. ಇದು ಎಲಾನ್ ಮಸ್ಕ್ ಆತಂತಕಕ್ಕೆ ಕಾರಣವಾಗಿದೆ.
ಟ್ವೀಟರ್‌ನಲ್ಲಿರುವ ನಕಲಿ ಅಕೌಂಟ್‌ಗಳು ಮತ್ತು ಬಾಟ್‌ಗಳನ್ನು ನಿರ್ಮೂಲನೆ ಮಾಡಲು ಮುಂದಿನ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೂ ಮಾಸಿಕ ಶುಲ್ಕ ವಿಧಿಸಲು ಮಸ್ಕ್ ನಿರ್ಧರಿಸಿದ್ದಾರೆ.
ಇತ್ತೀಚೆಗೆ ಮಸ್ಕ್ ಆಡಿಯೋ ವಿಡಿಯೋ ಕಾಲ್ ಫೀಚರ್ ಘೋಷಿಸಿದ್ದರು. ಎಕ್ಸ್‌ನಲ್ಲಿ ವಿಡಿಯೋ ಮತ್ತು ಆಡಿಯೋ ಕರೆಗಳು ಬರಲಿವೆ. ಇದು ಐಒಎಸ್, ಆ್ಯಂಡ್ರಾಯ್ಡ್, ಮ್ಯಾಕ್ ಮತ್ತು ಕಂಪ್ಯೂಟರ್‌ಗಳಲ್ಲೂ ಸಹ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಯಾವುದೇ ಫೋನ್ ನಂಬರ್‌ನ ಅಗತ್ಯವಿರುವುದಿಲ್ಲ ಎಂದಿದ್ದರು.
ಕಳೆದ ವರ್ಷ 3.50 ಲಕ್ಷ ಕೋಟಿ ರು.ಗೆ ಟ್ವೀಟರ್ ಸಂಸ್ಥೆ ಖರೀದಿ ಬಳಿಕ ಒಂದಲ್ಲಾ ಒಂದು ವಿವಾದಿತ ವಿಷಯಕ್ಕೆ ಸುದ್ದಿಯಲ್ಲೇ ಇರುವ ಮಸ್ಕ್, ಟ್ವೀಟರ್ ಬಳಕೆದಾರರಿಗೆ ದೈನಂದಿನ ವೀಕ್ಷಣೆಯ ಮಿತಿ ಘೋಷಿಸಿದ್ದರು.