2023 ರ ಅತಿದೊಡ್ಡ ಸೇಲ್ ಇಲ್ಲಿದೆ.. ದಸರಾ, ದೀಪಾವಳಿ ಹೀಗೆ ಸಾಲು ಸಾಲು ಹಬ್ಬಗಳ ಹಿನ್ನೆಲೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ - ಎರಡೂ ಪ್ರಮುಖ ಇಕಾಮರ್ಸ್ ತಾಣಗಳು ಮ್ಮ ವರ್ಷದ ದೊಡ್ಡ ಮಾರಾಟದ ದಿನಾಂಕಗಳನ್ನು ಪ್ರಕಟಿಸಿದೆ. ವಾರ್ಷಿಕ ಹಬ್ಬದ ಮಾರಾಟವು ಪ್ರತಿ ವರ್ಷ ದೀಪಾವಳಿಯ ಕೆಲವೇ ದಿನಗಳ ಮೊದಲು ಪ್ರಾರಂಭವಾಗುತ್ತದೆ.
Amazon ಮತ್ತು Flipkart ಎರಡೂ ಸಹ Amazon Great Indian Festival ಮತ್ತು Flipkart ನ ಬಿಗ್ ಬಿಲಿಯನ್ ಡೇಸ್ ಸೇಲ್ ಅನ್ನು ಆರಂಭಿಸುತ್ತಿದೆ. ಕೆಲವು ವರ್ಷಗಳ ಹಿಂದೆ ನವರಾತ್ರಿಯ ಮೊದಲ ದಿನದಂದು ಪ್ರಾರಂಭವಾಗ್ತಿದ್ದ ಸೇಲ್ 2021 ರಿಂದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್, ತಮ್ಮ ಮಾರಾಟದ ದಿನಗಳನ್ನು ಹಬ್ಬಕ್ಕೂ ಮೊದಲೇ ಮಾಡ್ತಿದೆ. ದಸರಾ, ದೀಪಾವಳಿಯು ಭಾರತದ ಅತಿದೊಡ್ಡ ಹಬ್ಬಗಳಲ್ಲಿ ಒಂದಾಗಿರುವುದರಿಂದ ಈ ಸೇಲ್ ದೊಡ್ಡದಾಗಿದೆ.
ಸೇಲ್ ದಿನಾಂಕ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮತ್ತು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟವು ಅಕ್ಟೋಬರ್ 8 ರಂದು ಪ್ರಾರಂಭವಾಗುತ್ತದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವನ್ನು ಆರಂಭದಲ್ಲಿ ಅಕ್ಟೋಬರ್ 10 ರಂದು ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ಫ್ಲಿಪ್‌ಕಾರ್ಟ್ ಸೇಲ್ ಆರಂಭವಾಗುತ್ತಿರೋ ಹಿನ್ನೆಲೆ ತನ್ನ ದಿನಾಂಕಗಳನ್ನು ಪ್ರೀಪೋನ್ ಮಾಡಿದೆ. ಪ್ರತಿಸ್ಪರ್ಧಿ ಫ್ಲಿಪ್‌ಕಾರ್ಟ್ ತನ್ನ ಪ್ರಮುಖ ಹಬ್ಬದ ಮಾರಾಟವಾದ ಬಿಗ್ ಬಿಲಿಯನ್ ಡೇಸ್ ಅಕ್ಟೋಬರ್ 8 ರಂದು ಪ್ರಾರಂಭವಾಗಲಿದೆ ಎಂದು ಹೇಳಿದ ಕೆಲವೇ ಗಂಟೆಗಳ ನಂತರ ಈ ಪ್ರಕಟಣೆ ಬಂದಿದೆ.
ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್, ಜಿಯೋ ಮತ್ತು ಇನ್ನಷ್ಟು
ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಇಂಡಿಯಾ ಮಾತ್ರವಲ್ಲ; JioMart, Ajio ಮತ್ತು Tata Neu ಎಲ್ಲಾ ವರ್ಗಗಳಾದ್ಯಂತ ಆಕರ್ಷಕ ಕೊಡುಗೆಗಳನ್ನು ಹೊರತರುವ ನಿರೀಕ್ಷೆಯಿದೆ. ಜತೆಗೆ ತನ್ನ 'ಮೆಗಾ ಬ್ಲಾಕ್‌ಬಸ್ಟರ್ ಸೇಲ್' ಅಕ್ಟೋಬರ್ 6 ರಂದು ಪ್ರಾರಂಭವಾಗಲಿದೆ ಎಂದು ಮೀಶೋ ಹೇಳಿದೆ.
ಈ ಸೇಲ್ ಪ್ರಮುಖವಾಗಿರೋದು ಯಾಕೆ?
ಹಬ್ಬದ ಋತುವಿನ ಮಾರಾಟವು ಎರಡೂ ಕಂಪನಿಗಳಿಗೆ ಒಂದು ಪ್ರಮುಖ ಘಟನೆಯಾಗಿದೆ. ಏಕೆಂದರೆ ಇದು ಅವರ ವಾರ್ಷಿಕ ಮಾರಾಟದ ಗಮನಾರ್ಹ ಭಾಗವನ್ನು ಹೊಂದಿದೆ. ಈ ಎರಡು ಕಂಪನಿಗಳಿಗೆ ಮಾತ್ರವಲ್ಲದೆ ಇವರ ಪ್ರತಿಸ್ಪರ್ಧಿ ಹಾಗೂ ಎಲ್ಲ ಕಂಪನಿಗಳಿಗೂ ಇದು ಪ್ರಮುಖ ಸಮಯ. ದೀಪಾವಳಿ ಸಮಯವು ಸಾಮಾನ್ಯವಾಗಿ ಭಾರತದಲ್ಲಿ ದೊಡ್ಡ ಖರೀದಿಯ ಸಮಯವಾಗಿದೆ.
ಈ ಪ್ರಕಾರ, ಹಬ್ಬದ ಋತುವಿನಲ್ಲಿ ಇ ಕಾಮರ್ಸ್ ಮಾರಾಟವು 18-20% ರಷ್ಟು ಇರುತ್ತದೆ. ಹಾಗೂ, ಸುಮಾರು 11 ಬಿಲಿಯನ್ ಡಾಲರ್‌ಗೆ ಬೆಳೆಯುವ ನಿರೀಕ್ಷೆಯಿದ್ದು, ಕನಿಷ್ಠ 14 ಕೋಟಿ ಜನರು ಆನ್‌ಲೈನ್‌ನಲ್ಲಿ ವಹಿವಾಟು ನಡೆಸುವ ನಿರೀಕ್ಷೆಯಿದೆ. 2021 ಕ್ಕೆ ಹೋಲಿಸಿದರೆ ಬಿಗ್ ಬಿಲಿಯನ್ ಡೇಸ್ 2022 ಮಾರಾಟದ ಸಮಯದಲ್ಲಿ ಫ್ಲಿಪ್‌ಕಾರ್ಟ್ ತನ್ನ ಮಾರಾಟವು 25% ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಂಡಿದೆ ಎಂದು ಕಳೆದ ವರ್ಷ ವರಿಯಾಗಿತ್ತು. ಅಮೆಜಾನ್ ಸಹ ದೃಢವಾದ ಬೆಳವಣಿಗೆಯನ್ನು ವರದಿ ಮಾಡಿದ್ದು, 2021 ಕ್ಕೆ ಹೋಲಿಸಿದರೆ 2022 ರ ಹಬ್ಬದ ಋತುವಿನಲ್ಲಿ ಹೆಚ್ಚಿನ ಆರ್ಡರ್‌ಗಳನ್ನು ಪಡೆದಿರೋದಾಗಿ ಹೇಳಿತ್ತು.
90% ವರೆಗೆ ರಿಯಾಯಿತಿ
ನಿಮ್ಮ ಸ್ಮಾರ್ಟ್‌ಫೋನ್ ಮತ್ತು ಇತರ ಖರೀದಿಗಳನ್ನು ಸದ್ಯಕ್ಕೆ ಮುಂದೂಡಿ. ಏಕೆಂದರೆ, ಹಲವು ಬ್ರ್ಯಾಂಡ್‌ಗಳ ಫೋನ್‌ಗಳಿಗೆ ಬ್ಲಾಕ್‌ಬಸ್ಟರ್ ಡೀಲ್‌ಗಳನ್ನು ನಿರೀಕ್ಷಿಸಬಹುದು. ಫ್ಲಿಪ್‌ಕಾರ್ಟ್ 30,000 ರೂ. ಒಳಗಿನ ನಥಿಂಗ್ ಫೋನ್ ಮತ್ತು 40,000 ರೂ. ಅಡಿಯಲ್ಲಿ ಗೂಗಲ್ ಪಿಕ್ಸೆಲ್ 7ಗೆ ಭರ್ಜರಿ ಡಿಸ್ಕೌಂಟ್ ನೀಡುವ ಸಾಧ್ಯತೆ ಇದೆ. ಪ್ರಮುಖವಾಗಿ ಕಳೆದ ವರ್ಷದಂತೆ ಈ ವರ್ಷವೂ Apple iPhoneಗೆ ದೊಡ್ಡ ಮಟ್ಟದ ಡಿಸ್ಕೌಂಟ್ ನೀಡೋ ಸಾಧ್ಯತೆ ಇದೆ.
2022 ರಲ್ಲಿ,ಆ್ಯಪಲ್ ಐಫೋನ್ 13ಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದಲ್ಲಿ 50,000 ರೂ. ಡಿಸ್ಕೌಂಟ್ ನೀಡಲಾಗಿತ್ತು. ಇದೇ ರೀತಿಯ ದೊಡ್ಡ ರಿಯಾಯಿತಿಗಳು ಈ ವರ್ಷವೂ ಇರುತ್ತದೆ. ಗ್ಯಾಜೆಟ್ ಪರಿಕರಗಳು, ವೇರೆಬಲ್ಸ್, ಸ್ಪೀಕರ್, ಸೌಂಡ್‌ಬಾರ್ ಮತ್ತು ಹೆಚ್ಚಿನ ಉತ್ಪನ್ನಗಳ ಹಲವು ಬ್ರ್ಯಾಂಡ್‌ಗಳಿಗೆ ದೊಡ್ಡ ಮಟ್ಟದ ಡಿಸ್ಕೌಂಟ್ ಇರಲಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಎರಡೂ ಪ್ರತಿದಿನ ಫ್ಲ್ಯಾಷ್ ಡೀಲ್‌ಗಳನ್ನು ನಡೆಸುತ್ತವೆ ಎಂದೂ ಹೇಳಲಾಗಿದೆ.