ಇನ್ನೊಂದು ವಾರದಲ್ಲಿ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಪ್ರಾರಂಭ: ಅತ್ಯುತ್ತಮ ಕೊಡುಗೆಗಳ ವಿವರ ಹೀಗಿದೆ..

First Published | Sep 30, 2023, 3:22 PM IST

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 ಸೇಲ್‌ ಅಕ್ಟೋಬರ್ 8 ರಿಂದ ಪ್ರಾರಂಭವಾಗುತ್ತದೆ. ಪ್ರಮುಖ ಸ್ಮಾರ್ಟ್‌ಫೋನ್‌ ಮತ್ತು ಗ್ಯಾಜೆಟ್‌ ಡೀಲ್‌ಗಳ ಬಗ್ಗೆ ಈಗಲೇ ಮಾಹಿತಿ ಹೊರಬರುತ್ತಿದೆ. 

ಫ್ಲಿಪ್‌ಕಾರ್ಟ್‌ನ ವರ್ಷದ ಅತಿದೊಡ್ಡ ಮಾರಾಟ ಅಂದರೆ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 ಸೇಲ್‌ ಅಕ್ಟೋಬರ್ 8 ರಿಂದ ಪ್ರಾರಂಭವಾಗುತ್ತದೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಿಗೆ, ಮಾರಾಟವು 24 ಗಂಟೆಗಳ ಮುಂಚಿತವಾಗಿ ಅಂದರೆ ಅಕ್ಟೋಬರ್ 7 ರಂದೇ (ಮಧ್ಯರಾತ್ರಿ 12) ಪ್ರಾರಂಭವಾಗುತ್ತದೆ. ಆದರೂ, ಪ್ರಮುಖ ಸ್ಮಾರ್ಟ್‌ಫೋನ್‌ ಮತ್ತು ಗ್ಯಾಜೆಟ್‌ ಡೀಲ್‌ಗಳ ಬಗ್ಗೆ ಈಗಲೇ ಮಾಹಿತಿ ಹೊರಬರುತ್ತಿದೆ. 
 

Realme 11x 5G, Infinix Zero 30 5G, Moto G84 5G ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಸ್ಮಾರ್ಟ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಳ್ಳಲಿದೆ.

Tap to resize

iPhone 14, iPhone 13, ಮತ್ತು Galaxy S23 Ultra ಗಾಗಿಯೂ ಸಂಭಾವ್ಯ ಬೆಲೆ ಇಳಿಕೆಗಳನ್ನು ಸಹ ಬಿಗ್‌ ಬಿಲಿಯನ್ ಡೇಸ್‌ ಸೇಲ್‌ನಲ್ಲಿ ನಿರೀಕ್ಷಿಸಿ.

ಫ್ಲಿಪ್‌ಕಾರ್ಟ್ ಈ ಹಿಂದೆ ಸೆಪ್ಟೆಂಬರ್ 28 ರಂದು Motorola, ಸೆಪ್ಟೆಂಬರ್ 29 ರಂದು Vivo, ಸೆಪ್ಟೆಂಬರ್ 30 ರಂದು Infinix, ಅಕ್ಟೋಬರ್ 1 ರಂದು Apple, ಅಕ್ಟೋಬರ್ 2 ರಂದು ಯಾವುದೇ ಪ್ರಕಟಣೆಗಳಿಲ್ಲ, ಅಕ್ಟೋಬರ್ 3 ರಂದು Samsung, ಅಕ್ಟೋಬರ್ 5 ರಂದು Pixel, ಅಕ್ಟೋಬರ್ 7 ರಂದು Xiaomi ಮತ್ತು ಅಕ್ಟೋಬರ್ 8 ರಂದು Oppo ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ ಘೋಷಣೆ ಬಗ್ಗೆ ವೇಳಾಪಟ್ಟಿಯನ್ನು ಘೋಷಿಸಿದೆ. 

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023 ಬ್ಯಾಂಕ್ ಆಫರ್‌ಗಳು
ಬಿಗ್ ಬಿಲಿಯನ್‌ ಡೇಸ್ ಸೇಲ್‌ ಸಮಯದಲ್ಲಿ, ಫ್ಲಿಪ್‌ಕಾರ್ಟ್ ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್‌ನಿಂದ ಆಯ್ದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ. 10 ತ್ವರಿತ ರಿಯಾಯಿತಿಯನ್ನು ನೀಡುತ್ತದೆ. ಪೇಟಿಎಂ ಬಳಕೆದಾರರು Paytm, UPI ಮತ್ತು ವ್ಯಾಲೆಟ್ ವಹಿವಾಟುಗಳಲ್ಲಿ ಖಚಿತವಾದ ಉಳಿತಾಯ ಗಳಿಸಬಹುದು. ಇದಲ್ಲದೆ, ಗ್ರಾಹಕರು ಫ್ಲಿಪ್‌ಕಾರ್ಟ್ ಪೇ ಲೇಟರ್ ಅನ್ನು ಬಳಸಿಕೊಳ್ಳಬಹುದು ಅಥವಾ ನೋ-ಕಾಸ್ಟ್ ಇಎಂಐ ಆಯ್ಕೆ ಮಾಡಬಹುದು.
 

Apple iPhone 14 ಮತ್ತು iPhone 14 Plusಗೆ ದೊಡ್ಡ ರಿಯಾಯಿತಿ!
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 ಪೋಸ್ಟರ್ ಆ್ಯಪಲ್ ಕಂಪನಿಯ ಐಫೋನ್‌ಗಳ ಬಗ್ಗೆ ಮಾಹಿತಿ ನೀಡಿದ್ದು, ಪೋಸ್ಟರ್‌ನಲ್ಲಿ, "ಐಫೋನ್‌ನಲ್ಲಿ ಕ್ರೇಜಿಯೆಸ್ಟ್ ಎವರ್ ಪ್ರೈಸ್" ಎಂದು ಬರೆಯಲಾಗಿದೆ. ಸಾಮಾನ್ಯವಾಗಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ ಐಫೋನ್ ಖರೀದಿಸಲು ಬಯಸುವ ಎಲ್ಲರಿಗೂ ಸರಿಯಾದ ಸ್ಥಳವಾದ್ದು, ಪ್ರತಿ ವರ್ಷವೂ ಭಾರೀ ರಿಯಾಯಿತಿ ಸಿಗುತ್ತದೆ. ಹಿಂದಿನ ವರ್ಷದ ಮಾರಾಟದ ಸಮಯದಲ್ಲಿ, iPhone 13 ಅನ್ನು 49,900 ರೂ.ಗೆ ಮಾರಾಟ ಮಾಡಲಾಗಿತ್ತು.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 ಪ್ರಾರಂಭ ದಿನಾಂಕ ಮತ್ತು ಅಂತಿಮ ದಿನಾಂಕ
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 ಮಾರಾಟವು ಅಕ್ಟೋಬರ್ 8 ರಂದು ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 15 ರವರೆಗೆ ನಡೆಯುತ್ತದೆ. ಇದು 8-ದಿನಗಳ ಹಬ್ಬದ ಸೇಲ್‌ ಆಗಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 ಅತ್ಯುತ್ತಮ ಕೊಡುಗೆ
ಬಿಗ್ ಬಿಲಿಯನ್ ಡೇಸ್ ಸೇಲ್ 2023 ರ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಕಡಿಮೆ ಬೆಲೆಯನ್ನು ಒದಗಿಸುವ ತನ್ನ ಬದ್ಧತೆಯನ್ನು ಫ್ಲಿಪ್‌ಕಾರ್ಟ್ ಘೋಷಿಸಿದೆ. ನಿರ್ದಿಷ್ಟ ಐಫೋನ್ ಕೊಡುಗೆಗಳು ಇನ್ನೂ ಬಹಿರಂಗವಾಗದಿದ್ದರೂ, Samsung, Infinix, Realme, Redmi, Moto, Oppo, Vivo ಮತ್ತು ಬ್ರ್ಯಾಂಡ್‌ಗಳ ಕೆಲವು ಉನ್ನತ ಡೀಲ್‌ಗಳು ಈಗಾಗಲೇ ಬಹಿರಂಗವಾಗಿದೆ.

Latest Videos

click me!