ಟೆಲಿಕಾಂ ಕಂಪನಿಗಳಿಗೆ 1 ತಿಂಗಳೆಂದರೆ 28 ದಿನ ಯಾಕೆ? ವ್ಯಾಲಿಟಿಡಿ ಪ್ಲಾನ್ ಸೀಕ್ರೆಟ್

Published : Mar 26, 2025, 12:49 PM ISTUpdated : Mar 26, 2025, 01:00 PM IST

ಬಿಎಸ್ಎನ್ಎಲ್, ಜಿಯೋ, ಎರ್ಟೆಲ್, ವಿಐ ಸೇರಿದಂತೆ ಯಾವುದೇ ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್ ಒಂದು ತಿಂಗಳು ಎಂದರೆ 28 ದಿನ ಮಾತ್ರ. ಟೆಲಿಕಾಂ ಕಂಪನಿಗಳು ಪ್ರತಿ ತಿಂಗಳನ್ನು ಫೆಬ್ರವರಿ ಎಂದುಕೊಳ್ಳುವುದೇಕೆ? 1 ತಿಂಗಳ ಪ್ಲಾನ್‌ನಲ್ಲಿ 30 ದಿನ ಬದಲು 28 ದಿನ ಮಾತ್ರ ನೀಡುವುದೇಕೆ? 

PREV
14
ಟೆಲಿಕಾಂ ಕಂಪನಿಗಳಿಗೆ 1 ತಿಂಗಳೆಂದರೆ 28 ದಿನ ಯಾಕೆ? ವ್ಯಾಲಿಟಿಡಿ ಪ್ಲಾನ್ ಸೀಕ್ರೆಟ್
ರೀಚಾರ್ಜ್ ಯೋಜನೆಗಳು

ಒಂದು ಕಾಲದಲ್ಲಿ ಸಿಮ್ ಕಾರ್ಡ್ ತೆಗೆದುಕೊಂಡರೆ ಲೈಫ್ ಟೈಮ್ ಇನ್‌ಕಮ್ ಉಚಿತವಾಗಿ ಇರುತ್ತಿತ್ತು. ಒಂದು ವೇಳೆ ಯಾರಿಗಾದರೂ ಕಾಲ್ ಮಾಡಬೇಕೆಂದರೆ ಮಾತ್ರ ರೀಚಾರ್ಜ್ ಮಾಡಿಕೊಳ್ಳುವವರು. ಇನ್‌ಕಮ್ ಕಾಲ್ಸ್ ಮಾತ್ರ ಉಚಿತವಾಗಿ ಬರುತ್ತಿದ್ದವು. ಆದರೆ ಪ್ರಸ್ತುತ ಟೆಲಿಕಾಂ ಕಂಪನಿಗಳು ನಿಯಮ ಬದಲಾಯಿಸಿವೆ. ಇನ್‌ಕಮ್ ಕಾಲ್ಸ್ ಬರಬೇಕೆಂದರೂ ಕಡ್ಡಾಯವಾಗಿ ಆಕ್ಟಿವ್ ರೀಚಾರ್ಜ್ ಪ್ಲಾನ್ ಇರುವಂತೆ ಬದಲಾವಣೆ ಮಾಡಿವೆ. ಆಕ್ಟಿವ್ ರೀಚಾರ್ಜ್ ಪ್ಲಾನ್ ಇಲ್ಲದಿದ್ದರೆ ಇನ್‌ಕಮ್ ಕಾಲ್ಸ್‌ನ್ನು ಕೂಡ ಸ್ಥಗಿತಗೊಳಿಸುತ್ತಿವೆ. 

24

ಕೆಲವು ತಿಂಗಳ ಕಾಲ ಸಿಮ್ ಅನ್ನು ಹಾಗೆಯೇ ಪಕ್ಕಕ್ಕೆ ಇಟ್ಟರೆ ಸಿಮ್ ಡಿ ಆಕ್ಟಿವೇಟ್ ಕೂಡ ಮಾಡುತ್ತಿವೆ ಕಂಪನಿಗಳು. ಇದರಿಂದ ಕಡ್ಡಾಯವಾಗಿ ಯಾವುದೋ ಒಂದು ಪ್ಲಾನ್‌ನೊಂದಿಗೆ ರೀಚಾರ್ಜ್ ಮಾಡಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದು ಹೀಗಿರಲಿ, ರೀಚಾರ್ಜ್ ಪ್ಲಾನ್ ವ್ಯಾಲಿಡಿಟಿಗಳನ್ನು ಗಮನಿಸಿದರೆ 28 ದಿನಗಳು, 56 ದಿನಗಳೆಂದು ಇರುತ್ತವೆ. ಯಾವುದೇ ಕಂಪನಿಯೂ ಒಂದು ತಿಂಗಳ ಪ್ಲಾನ್ ನೀಡುವುದಿಲ್ಲ. ಇದರ ಹಿಂದಿರುವ ಲಾಜಿಕ್ ಏನು ಗೊತ್ತಾ.? 
 

34

ಉದಾಹರಣೆಗೆ ನೀವು 28 ದಿನಗಳ ವ್ಯಾಲಿಡಿಟಿ ಪ್ಲಾನ್‌ನೊಂದಿಗೆ ಪ್ರತಿ ತಿಂಗಳು ರೀಚಾರ್ಜ್ ಮಾಡುತ್ತಾ ಹೋಗುತ್ತಿದ್ದೀರಿ ಎಂದು ಅಂದುಕೊಳ್ಳೋಣ. ಈ ಲೆಕ್ಕದಲ್ಲಿ ನೋಡಿದರೆ ನೀವು ವರ್ಷಕ್ಕೆ 13 ಬಾರಿ ರೀಚಾರ್ಜ್ ಮಾಡಿಸಬೇಕಾಗುತ್ತದೆ ಎಂದರ್ಥ. ಅಂದರೆ ವರ್ಷಕ್ಕೆ 12 ತಿಂಗಳುಗಳಿದ್ದರೆ ನೀವು ಮಾತ್ರ 13 ತಿಂಗಳಿಗೆ ರೀಚಾರ್ಜ್ ಮಾಡುತ್ತಿದ್ದೀರಿ ಎಂದರ್ಥ. ಹೀಗೆ ವ್ಯಾಲಿಡಿಟಿಯನ್ನು ಕಡಿಮೆ ಮಾಡುವುದರಿಂದ ವರ್ಷಕ್ಕೆ 13 ತಿಂಗಳ ಕಾಲ ಹಣ ಪಾವತಿಸಬೇಕಾಗುತ್ತದೆ. ಟೆಲಿಕಾಂ ಕಂಪನಿಗಳು ಲಾಭಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ತಂದಿರುವ ಟ್ರಿಕ್ ಇದು. ಬಹುತೇಕ ಎಲ್ಲಾ ಕಂಪನಿಗಳು ಇದೇ ಫಾರ್ಮುಲಾವನ್ನು ಬಳಸುತ್ತವೆ. 
 

44

ಅದಕ್ಕಾಗಿಯೇ ಬಹಳಷ್ಟು ಜನರು ವರ್ಷದ ವ್ಯಾಲಿಡಿಟಿ ಇರುವ ಪ್ಲಾನ್ಸ್‌ಗಳ ಕಡೆಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಇದರ ಬೆಲೆ ಕೂಡ ಹೆಚ್ಚಾಗಿರುತ್ತದೆ. ಆದರೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಹೋಲಿಸಿದರೆ 365 ದಿನಗಳ ವ್ಯಾಲಿಡಿಟಿ ಪ್ಲಾನ್‌ನೊಂದಿಗೆ ಬಳಕೆದಾರರು ಸ್ವಲ್ಪ ಮಟ್ಟಿಗೆ ಲಾಭ ಪಡೆಯುತ್ತಾರೆ. ಇದಿಷ್ಟು ಟೆಲಿಕಾಂ ಕಂಪನಿಗಳು 28 ದಿನಗಳ ವ್ಯಾಲಿಡಿಟಿ ಹಿಂದಿರುವ ಅಸಲಿ ಉದ್ದೇಶ. 
 

Read more Photos on
click me!

Recommended Stories