ವ್ಯಾಟ್ಸ್ಆ್ಯಪ್ ಬಹುತೇಕರ ಜೀವನದ ಪ್ರಮುಖ ಅಂಗವಾಗಿದೆ. ಕಚೇರಿ ಕೆಲಸ, ಸಂಬಂಧಿಕರ ಗ್ರೂಪ್, ಗೆಳೆಯರ ಬಳಗ ಸೇರಿದಂತೆ ಇಡೀ ಜಗತ್ತೆ ವ್ಯಾಟ್ಸ್ಆ್ಯಪ್ ಮೂಲಕ ಕನೆಕ್ಟ್ ಆಗಿದೆ. ವ್ಯಾಟ್ಸಾಪ್ ಕಾಲಕ್ಕೆ ತಕ್ಕಂತೆ ಹಲವು ಫೀಚರ್ಸ್ ಗ್ರಾಹಕರಿಗೆ ನೀಡಿದೆ. ಇದೀಗ ವ್ಯಾಟ್ಸಾಪ್ ನೀಡಿವು ವಿಶೇಷ ಫೀಚರ್ ಬಹುತೇಕರಿಗೆ ತಿಳಿದಿಲ್ಲ. ನೀವು ವ್ಯಾಟ್ಸಾಆಪ್ ಮೂಲಕ ಇನ್‌ಸ್ಟಾಗ್ರಾಂ ರೀಲ್ಸ್ ವೀಕ್ಷಿಸಲು ಸಾಧ್ಯವಿದೆ. ಇದಕ್ಕೆ ನಿಮ್ಮಲ್ಲಿ ಇನ್‌ಸ್ಟಾ ಆ್ಯಪ್ ಒಪನ್ ಅಥವಾ ಖಾತೆ ತೆರೆಯಬೇಕಿಲ್ಲ.
ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಅತ್ಯಂತ ಜನಪ್ರಿಯ. ಹಲವರು ರೀಲ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದರೆ, ಕೋಟ್ಯಾಂತರ ಮಂದಿ ಈ ರೀಲ್ಸ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಭಾರತದಲ್ಲಿ ರೀಲ್ಸ್ ವೀಕ್ಷಣೆ ಹೆಚ್ಚಾಗಿದೆ. ವ್ಯಾಟ್ಸಾಪ್ ಬಳಕೆದಾರರು ಕೂಡ ಇನ್‌ಸ್ಟಾಗ್ರಾಂನಲ್ಲಿನ ಯಾವುದೇ ರೀಲ್ಸ್ ಬೇಕಾದರೂ ವೀಕ್ಷಿಸ ಬಹುದು. ಇದಕ್ಕೆ ಈ ಟಿಪ್ಸ್ ಫಾಲೋ ಮಾಡಿ.
ವ್ಯಾಟ್ಸಾಪ್‌ನಲ್ಲಿ ನಿಮಗೆ ಎಐ ಫೀಚರ್ ಪರಿಚಯಿಸಿರಿವುದು ಗೊತ್ತಿದೆ. ಈ ಎಐ ಫೀಚರ್ ಮೂಲಕ ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲಿರುವ ರೀಲ್ಸ್ ವೀಕ್ಷಿಸಲು ಸಾಧ್ಯ. ವ್ಯಾಟ್ಸಾಆ್ಯಪ್‌ನಲ್ಲಿರುವ ಮೆಟಾ ಎಐ ಫೀಚರ್ ಕ್ಲಿಕ್ ಮಾಡಿ ನಿಮಗೆ ಯಾವ ರೀತಿಯ ರೀಲ್ಸ್ ಬೇಕಾದರೂ ಸರ್ಚ್ ಮಾಡಬಹುದು. ಉದಾಹರಣೆಗೆ ಶೋ ಮಿ ಇನ್‌ಸ್ಟಾಗ್ರಾಂ ರೀಲ್ಸ್( Show me instagram reels) ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ಸಾಕು, ನೀವು ಸರ್ಚ್ ಮಾಡುವ, ನಿಮ್ಮಿಷ್ಟದ ಇನ್‌ಸ್ಟಾಗ್ರಾಂ ರೀಲ್ಸ್‌ಗಳು ವ್ಯಾಟ್ಸಾಪ್‌ನಲ್ಲಿ ಕಾಣಲಿದೆ.
ಯಾವುದೇ ವಿಷಯದ ಕುರಿತ ರೀಲ್ಸ್ ಇಲ್ಲಿ ಸರ್ಚ್ ಮಾಡಿದರೆ ಸಾಕು, ಮೆಟಾ ಎಐ ಫೀಚರ್ ನಿಮಗೆ ಇನ್‌ಸ್ಟಾಗ್ರಾಂನಲ್ಲಿರುವ ಬೆಸ್ಟ್ ರೀಲ್ಸ್‌ಗಳನ್ನು ತೋರಿಸಲಿದೆ. ಹೀಗಾಗಿ ವ್ಯಾಟ್ಸಾಪ್ ಗ್ರಾಹಕರು ಸುಲಭವಾಗಿ ವ್ಯಾಟ್ಸಾಪ್ ಮೂಲಕ ರೀಲ್ಸ್ ವೀಕ್ಷಿಸಲು ಸಾಧ್ಯವಿದೆ. ವ್ಯಾಟ್ಸಾಪ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿದ್ದರೆ ಇತರ ಹಲವು ಸೇವೆಗಳನ್ನು ನೀಡುತ್ತಿದೆ. ಇದೀಗ ರೀಲ್ಸ್ ವೀಕ್ಷಣೆಗೂ ವ್ಯಾಟ್ಸಾಆ್ಯಪ್ ಅವಕಾಶ ನೀಡಿದೆ.
ವ್ಯಾಟ್ಸ್ಆ್ಯಪ್‌ನಲ್ಲಿರುವ ಮೆಟಾ ಎಐ ಮೂಲಕ ವೆಬ್ ಸರ್ಚ್ ಮಾಡಲು ಅವಕಾಶವಿದೆ. ಮೆಟಾ ಎಐ ಫೀಚರ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ವಿಶ್ವಾದ್ಯಂತ ವ್ಯಾಟ್ಸಾಪ್ ಬರೋಬ್ಬರಿ 3 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇನ್ನು ಭಾರತದಲ್ಲಿ ಪ್ರತಿತಿಂಗಳು 535.8 ಮಿಲಿಯನ್ ಸಕ್ರಿಯ ಬಳಕೆದಾರರಿದ್ದಾರೆ.
ವಿಶ್ವದ ಪೈಕಿ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ದೇಶ ಭಾರತ. ಭಾರತ ನಂತರ ಸ್ಥಾನದಲ್ಲಿ ಬ್ರಿಜೆಲ್ ವಿರಾಜಮಾನವಾಗಿದೆ. ಬ್ರೆಜಿಲ್‌ನಲ್ಲಿ ಪ್ರತಿ ತಿಂಗಳ ಸಕ್ರಿಯ ಬಳಕೆದಾರರ ಸಂಖ್ಯೆ 139.3 ಮಿಲಿಯನ್. ಇನ್ನು ಅಮೆರಿಕದಲ್ಲಿ ತಿಂಗಳ ಸಕ್ರಿಯ ಬಳಕೆದಾರರ ಸಂಖ್ಯೆ 91.3 ಮಿಲಿಯನ್.