ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್, ಕೇವಲ 10 ಸಾವಿರ ರೂಗೆ HP ಲ್ಯಾಪ್‌ಟಾಪ್!

First Published | Oct 2, 2024, 2:53 PM IST

ಹೊಸ ಲ್ಯಾಪ್‌ಟಾಪ್‌ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ ಈ ಆಫರ್ ಬಗ್ಗೆ ತಿಳಿದುಕೊಳ್ಳಲೇಬೇಕು. ಫ್ಲಿಪ್‌ಕಾರ್ಟ್‌ನಲ್ಲಿ ಒಂದು ಅದ್ಭುತವಾದ ಆಫರ್ ಲಭ್ಯವಿದೆ. ಹೌದು, ನೀವು ರೂ.10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಹೊಸ ಲ್ಯಾಪ್‌ಟಾಪ್ ಪಡೆಯಬಹುದು. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.

HP ಟಚ್ Chromebook (HP Touch Chromebook MediaTek MT8183 11 MK G9) ಲ್ಯಾಪ್‌ಟಾಪ್ ಫ್ಲಿಪ್‌ಕಾರ್ಟ್‌ನಲ್ಲಿ ಶೇ.70 ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಇದು 4 GB RAM ಮತ್ತು 32 GB ಸ್ಟೋರೇಜ್ ಹೊಂದಿದೆ. Chrome OS ಮೂಲಕ ಕಾರ್ಯನಿರ್ವಹಿಸುತ್ತದೆ. 11.6 ಇಂಚಿನ ಸ್ಕ್ರೀನ್ ಹೊಂದಿರುವ ಈ ಲ್ಯಾಪ್‌ಟಾಪ್‌ನ ಮೂಲ ಬೆಲೆ ರೂ. 37,241. ಆದರೆ ಬಿಗ್ ಬಿಲಿಯನ್ ಡೇಸ್ ಮೂಲಕ ಅತೀ ಕಡಿಮೆ ಬೆಲೆಗೆ ಈ ಲ್ಯಾಪ್‌ಟಾಪ್ ಲಭ್ಯವಿದೆ.

ಆದರೆ ಈಗ ಕೇವಲ ರೂ.10,990 ಕ್ಕೆ ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ನಡೆಯುತ್ತಿರುವ ಹಬ್ಬದ ಸೀಸನ್ ಸೇಲ್‌ನಲ್ಲಿ ಭಾರಿ ರಿಯಾಯಿತಿ ಬೆಲೆಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಗರಿಷ್ಠ ಡಿಸ್ಕೌಂಟ್ ನೀಡಿದ ಉತ್ಪನ್ನಗಳ ಪೈಕಿ ಹೆಚ್‌ಪಿ ಲ್ಯಾಪ್‌ಟಾಪ್ ಲಭ್ಯವಿದೆ. ಹೆಚ್‌ಪಿ ಲ್ಯಾಪ್‌ಟಾಪ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಆಫರ್ ಘೋಷಿಸಿರುವುದು ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ.

Tap to resize

ಇದಲ್ಲದೆ, ಇನ್ನೂ ಅನೇಕ ಆಫರ್‌ಗಳು ಲಭ್ಯವಿದೆ. ಆಯ್ದ ಕೆಲವು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಈ ಲ್ಯಾಪ್‌ಟಾಪ್ ಅನ್ನು ಖರೀದಿಸಿದರೆ ಬ್ಯಾಂಕ್ ರಿಯಾಯಿತಿಯನ್ನು ಸಹ ಪಡೆಯಬಹುದು. ಈ ರೀತಿಯಲ್ಲಿ ನೀವು ಸುಮಾರು ರೂ.1100 ವರೆಗೆ ಹೆಚ್ಚುವರಿಯಾಗಿ ಉಳಿಸಬಹುದು. ಅಂದರೆ ಈ ಲ್ಯಾಪ್‌ಟಾಪ್ ಅನ್ನು ಕೇವಲ ರೂ. 9,800 ಕ್ಕೆ ಖರೀದಿಸಬಹುದು.

ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಇದು ಒಂದು ದೊಡ್ಡ ಡೀಲ್ ಆಗಿದೆ. ಹೊಸದಾಗಿ ಬಜೆಟ್ ಲ್ಯಾಪ್‌ಟಾಪ್ ಖರೀದಿಸಲು ಯೋಜಿಸುತ್ತಿರುವವರು ಈ ಆಫರ್ ಮೂಲಕ ಹೆಚ್‌ಪಿ ಲ್ಯಾಪ್‌ಟಾಪ್ ಕೈಗೆಟುಕುವ ಬೆಲೆಯಲ್ಲಿ ಖರೀದಿಸಲು ಸಾಧ್ಯ. ಫ್ಲಿಪ್‌ಕಾರ್ಟ್ ಈಗಾಗಲೇ ಬಿಗ್ ಬಿಲಿಯನ್ ಡೇಸ್ ಸೇಲ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದೆ. 

ಈ ಲ್ಯಾಪ್‌ಟಾಪ್‌ನಲ್ಲಿ USB 2.0 ಟೈಪ್ A ಪೋರ್ಟ್, ಸೂಪರ್ ಸ್ಪೀಡ್ USB ಟೈಪ್ C 5 Gbps ಸಿಗ್ನಲಿಂಗ್ ದರ ಪೋರ್ಟ್ ಮುಂತಾದ ವೈಶಿಷ್ಟ್ಯಗಳಿವೆ. ಇದು ಟಚ್ ಸ್ಕ್ರೀನ್ ಲ್ಯಾಪ್‌ಟಾಪ್ ಎಂಬುದು ಹೆಚ್ಚುವರಿ ವಿಶೇಷ. 11.6 ಇಂಚಿನ ಸ್ಕ್ರೀನ್ 1366 x 768 ರೆಸಲ್ಯೂಶನ್‌ನೊಂದಿಗೆ HD, IPS, ಆಂಟಿ ಗ್ಲೇರ್ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಪೀಕರ್‌ಗಳು ಮತ್ತು ಮೈಕ್ರೊಫೋನ್‌ಗಳನ್ನು ಸಹ ಒಳಗೊಂಡಿದೆ.

ವೆಬ್‌ಕ್ಯಾಮ್ ಅನ್ನು ಸಹ ಹೊಂದಿದೆ. HP ಈ ಲ್ಯಾಪ್‌ಟಾಪ್‌ಗೆ ಒಂದು ವರ್ಷದ ವಾರಂಟಿಯನ್ನು ನೀಡುತ್ತದೆ. ಆನ್‌ಲೈನ್ ತರಗತಿಗಳಲ್ಲಿ ಅಧ್ಯಯನ ಮಾಡುವವರಿಗೆ ಮತ್ತು ಮೂಲಭೂತ ಬಳಕೆಗೆ ಸೂಕ್ತವಾಗಿದೆ. ಈ ಲ್ಯಾಪ್‌ಟಾಪ್ ವಿದ್ಯಾರ್ಥಿಗಳಿಗೆ ಸೂಕ್ತವಾಗಿದೆ.

Latest Videos

click me!