ಬೆಂಗಳೂರು ಪೊಲೀಸರಿಗೆ 50 ಸಾವಿರ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಿದ ಜಿಯೋ!

First Published | Aug 28, 2020, 6:28 PM IST

ಕೊರೋನಾ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ ಪೈಕಿ ಪೊಲೀಸರು ಕಳೆದ ಮಾರ್ಚ್‌ನಿಂದ ಬಿಡುವಿಲ್ಲದೆ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇದರ ನಡುವೆ ಹಲವು ಪೊಲೀಸರು ಕೊರೋನಾ ತಗುಲಿಸಿಕೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ನಿಭಾಯಿಸುತ್ತಿರುವ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ರಿಲಯನ್ಸ್ ಜಿಯೋ 50,000 ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಚಿತವಾಗಿ ನೀಡಿದೆ.

ರಿಲಯನ್ಸ್ ಫೌಂಡೇಷನ್ ಹಾಗೂ ರಿಲಯನ್ಸ್ ಇನ್ಫೋಕಾಮ್ ನಿಂದ ಬೆಂಗಳೂರು ಸಂಚಾರ ಪೊಲೀಸರನ್ನು ಗೌರವಿಸಲಾಯಿತು. ಬೆಂಗಳೂರು ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ರಿಲಯನ್ಸ್ ಗ್ರೂಪ್ ನಿಂದ 50,000 N95 ಮಾಸ್ಕ್ ಹಾಗೂ ಅಷ್ಟೇ ಸಂಖ್ಯೆಯ ಸ್ಯಾನಿಟೈಸರ್ ದೇಣಿಗೆ ನೀಡಲಾಯಿತು.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ದಣಿವರಿಯದೆ ಕೆಲಸ ಮಾಡುತ್ತಿರುವ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ಶ್ಲಾಘಿಸಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಕಮಿಷನರ್ ರವಿಕಾಂತೇಗೌಡ ಇದ್ದರು.
Tap to resize

ರಿಲಯನ್ಸ್ ಸಮೂಹದ ಪ್ರತಿನಿಧಿಯಾಗಿ ರಿಲಯನ್ಸ್ ಜಿಯೋ ಕರ್ನಾಟಕದ ಸಿಇಒ ಅಮಿತಾಬ್ ಭಾಟಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಉಪಾಧ್ಯಕ್ಷರಾದ ಜಿಮ್ಮಿ ಅಮ್ರೋಲಿಯಾ ಹಾಜರಿದ್ದರು.
ಕೋವಿಡ್- 19 ವಿರುದ್ಧದ ಹೋರಾಟದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಹಗಲಿರುಳು ಶ್ರಮಿಸುತ್ತಿದೆ. ಕೊರೊನಾ ನಿಯಂತ್ರಣಕ್ಕೆ, ತಡೆಗೆ ಈಗಾಗಲೇ ಹಲವು ಬಗೆಯಲ್ಲಿ ನೆರವು ಸಹ ನೀಡುತ್ತಿದೆ. ದೇಶದ ಅಗತ್ಯಕ್ಕೆ ತಕ್ಕಂತೆ ಈ ಬಗೆಯ ಶ್ರಮವನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುತ್ತಲೇ ಇದೆ.
ರಿಲಯನ್ಸ್ ಜಿಯೋ ಕರ್ನಾಟಕದ ಸಿಇಒ ಅಮಿತಾಬ್ ಭಾಟಿಯಾ, ರಿಲಯನ್ಸ್ ಇಂಡಸ್ಟ್ರೀಸ್ ಉಪಾಧ್ಯಕ್ಷರಾದ ಜಿಮ್ಮಿ ಅಮ್ರೋಲಿಯಾ ಅವರು ಬೆಂಗಳೂರು ನಗರ ಕಮಿಷನರ್ ಕಮಲ್ ಪಂತ್ ಹಾಗೂ ಬೆಂಗಳೂರು ಸಂಚಾರ ಪೊಲೀಸ್ ಜಂಟಿ ಕಮಿಷನರ್ ರವಿಕಾಂತೇಗೌಡ ಅವರಿಗೆ N95 ಮಾಸ್ಕ್, ಸ್ಯಾನಿಟೈಸರ್ ಗಳನ್ನು ಹಸ್ತಾಂತರಿಸಿದರು.

Latest Videos

click me!