ಬೆತ್ತಲೆ ಸೆಲ್ಫಿ, ಫೋಟೋ ಪ್ರಿಯರಿಗೆ ಬ್ಯಾಡ್ ನ್ಯೂಸ್! ಇದು ಅಂತಿಂತಹ ಫೋನ್ ಅಲ್ಲ...

First Published | Feb 19, 2020, 8:49 PM IST

ಬೆತ್ತಲೆ ಸೆಲ್ಫಿ ತೆಗೆಯುವವರಿಗೆ ಶಾಕಿಂಗ್ ನ್ಯೂಸ್‌ ಇಲ್ಲಿದೆ. ಫೋನ್‌ನೊಳಗೆ ನೈತಿಕ ಪೊಲೀಸ್‌ಗಿರಿ ಎಂದೇ ಹೇಳಬಹುದಾದ ಫೀಚರ್ ಈಗ ರೆಡಿಯಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ ಸಿದ್ಧಪಡಿಸಲಾದ ಈ ಫೀಚರ್, ಬೆತ್ತಲೆ ಸೆಲ್ಫಿ,  ಫೋಟೋ ತೆಗೆಯುವವರಿಗೆ ನಿರಾಸೆ ಹುಟ್ಟಿಸಿದೆ.

ಬೆತ್ತಲೆ ಫೋಟೋ ತೆಗೆಯುವುದನ್ನು ತಡೆಯುತ್ತೆ ಸ್ಮಾರ್ಟ್‌ಫೋನ್ ಪ್ರೊಟೆಕ್ಷನ್‌ ಎಂಬ ಫೀಚರ್‌
ನಗ್ನ ಫೋಟೋ ತಗೆಯುವಾಗ ಕ್ಯಾಮೆರಾವನ್ನು ನಿಯಂತ್ರಿಸುವ AIಯು ಎರರ್ ಮೆಸೇಜನ್ನು ತೋರಿಸುತ್ತೆ!
Tap to resize

ಮಕ್ಕಳು, ವಿದ್ಯಾರ್ಥಿಗಳು ಮತ್ತು ಹದಿಹರೆಯದವರನ್ನು ಗಮನದಲ್ಲಿಟ್ಟು ತಯಾರಿಸಲಾದ ಫೋನ್ ಇದು
ಬೆತ್ತಲೆ ಫೋಟೋ ಬಂದರೆ ಹೆತ್ತವರುಪೋಷಕರಿಗೂ ಕೂಡಾ ಅಲರ್ಟ್ ಮೆಸೇಜ್ ಕಳುಹಿಸುವ ಸೌಲಭ್ಯ!
ಫೋಟೋ ದಿನಾಂಕ, ಸಮಯ, ಜಿಪಿಎಸ್ ಮತ್ತಿತರ ವಿವರವೂ ಕೂಡಾ ನೋಡಬಹುದು!
ವಯಸ್ಕರು ಈ ಫೀಚರ್‌ನ್ನು ಬೇಕಾದ್ರೆ ಆಫ್ ಮಾಡಿದರಾಯ್ತು
ಜಪಾನಿನ ಮೊಬೈಲ್ ಕಂಪನಿ ತಯಾರಿಸಿದೆ ವಿಶಿಷ್ಟ ಫೀಚರ್‌ವುಳ್ಳ ಸ್ಮಾರ್ಟ್‌ಫೋನ್
ಟೋನ್ ಮೊಬೈಲ್ ಕಂಪನಿ ತಯಾರಿಸಿರುವ Tone e20 ಸ್ಮಾರ್ಟ್‌ಫೋನ್
ಈ ಫೋನ್ ದುಬಾರಿಯೇನಲ್ಲ, ಇದರ ಬೆಲೆ 19800 ಯೆನ್ (ಭಾರತದ 12900 ರೂ. ಅಂದಾಜು) ಮಾತ್ರ
6.26 ಇಂಚಿನ ಎಚ್‌ಡಿ ಡಿಸ್ಪ್ಲೇ, 13 ಮೆಗಾ ಪಿಕ್ಸೆಲ್ ಕ್ಯಾಮೆರಾ ಸೆಟಪ್, Android 9.0 OS, ಆಕ್ಟಾ ಕೋರ್ ಪ್ರೊಸೆಸರ್, 64ಜಿಬಿ ಸ್ಟೋರೆಜ್, 3900mAh ಸಾಮರ್ಥ್ಯದ ಬ್ಯಾಟರಿಯನ್ನು ಇದು ಹೊಂದಿದೆ

Latest Videos

click me!