2020ರ ಸ್ವಾಗತ ಸಂಭ್ರಮ ಶುರುವಾಗಿದೆ. ಎಲ್ಲರೂ 2020ಕ್ಕೆ ಎಂಟ್ರಿ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಈ ಸಂಭ್ರಮದ ನಡುವೆ ಜನಪ್ರಿಯ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಹೊಸ ಆಫರನ್ನು ಪ್ರಕಟಿಸಿದೆ.
2020 ಹ್ಯಾಪಿ ನ್ಯೂ ಇಯರ್ ಎಂಬ ಹೆಸರಿನ ಈ ಆಫರ್‌ನಲ್ಲಿ, ₹2020 ಪಾವತಿಸುವವರಿಗೆ ಅನ್ಲಿಮಿಟೆಡ್ ಸೇವೆಗಳನ್ನು ಕೊಡಲಿದೆ.
ಈ ಆಫರ್ 24 ಡಿಸೆಂಬರ್‌ನಿಂದಲೇ ಶುರುವಾಗಿದ್ದು, ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ.
ಸ್ಮಾರ್ಟ್‌ಫೋನ್ ಪ್ಲಾನ್: ಹ್ಯಾಪಿ ನ್ಯೂ ಇಯರ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ಅನ್ಲಿಮೆಟೆಡ್ ವಾಯ್ಸ್, ಪ್ರತಿದಿನ 1.5GB ಡೇಟಾ, ಎಸ್ಸೆಮ್ಮೆಸ್, ಹಾಗೂ ಕಂಪನಿಯ ಇತರ ಆ್ಯಪ್ ಗಳಿಗೆ ಆ್ಯಕ್ಸೆಸ್ ಸಿಗಲಿದೆ. ಈ ಪ್ಲಾನ್ ಬೇಕಾದ್ರೆ ₹2020 ಪಾವತಿಸಬೇಕು.
ಜಿಯೋ ಫೋನ್ ಪ್ಲಾನ್: ಜೀಯೋ ಫೋನ್ ಪ್ಲಾನ್‌ನಲ್ಲಿ ₹2020 ಕೊಟ್ಟರೆ ಜಿಯೋ ಸ್ಮಾರ್ಟ್ ಫೀಚರ್ ಫೋನ್ ಹಾಗೂ 12 ತಿಂಗಳವರೆಗೆ ಸೇವೆ ಲಭ್ಯವಿದೆ. ಪ್ರತಿದಿನ 0.5 GB ಡೇಟಾ, ಎಸ್ಸೆಮ್ಮೆಸ್, ಮತ್ತು ಜಿಯೋ ಆ್ಯಪ್ ಗಳಿಗೆ ಆ್ಯಕ್ಸೆಸ್ ಸಿಗಲಿದೆ.