ಭಾರತದ ಅತೀ ವೇಗದ ಇಂಟರ್ನೆಟ್ ನೀಡುತ್ತಿರುವ ಟೆಲಿಕಾಂ ಪಟ್ಟಿ ಪ್ರಕಟ, ಯಾರು ನಂ.1?

ಭಾರತದಲ್ಲಿ ಟೆಲಿಕಾಂ ಸಂಸ್ಥೆಗಳಲ್ಲಿ ಪೈಪೋಟಿ ಜೋರಾಗಿದೆ. ಇದರ ನಡುವೆ ಅತೀ ವೇಗದ ಇಂಟರ್ನೆಟ್ ನೀಡುವ ಸಂಸ್ಥೆ ಯಾವುದು? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಜಿಯೋ, ಬಿಎಸ್ಎನ್ಎಲ್, ಏರ್ಟೆಲ್, ವಿಐ ಸೇರಿದಂತೆ ಭಾರತದ ಟೆಲಿಕಾಂ ಸಂಸ್ಥಗಳು ತೀವ್ರ ಪೈಪೋಟಿ ಎದುರಿಸುತ್ತಿದೆ. ಇದರ ನಡುವೆ ಗ್ರಾಹಕರಿಗೆ ಭರ್ಜರಿ ಆಫರ್ ಸೇರಿದಂತೆ ಹಲವು ಕೊಡುಗಳನ್ನು ನೀಡಲಾಗುತ್ತಿದೆ. ಇದೀಗ 2024 ರ ದ್ವಿತೀಯಾರ್ಧದಲ್ಲಿ ಭಾರತದಲ್ಲಿ ಅತೀ ವೇಗದ ಇಂಟರ್ನೆಟ್ ನೀಡುತ್ತಿರುವುದು ಯಾರು ಅನ್ನೋ ಪಟ್ಟಿ ಬಹಿರಂಗವಾಗಿದೆ. ಒಕ್ಲಾ ನೀಡಿದ ವರದಿ ಪ್ರಕರಾ ರಿಲಯನ್ಸ್ ಜಿಯೋ ಭಾರತದಲ್ಲಿ 5ಜಿ ಮೂಲಕ ಅತೀ ವೇಗದ ಮೊಬೈಲ್ ಇಂಟರ್ನೆಟ್ ಪೂರೈಕದಾರ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ನೆಟ್ವರ್ಕ್ ಗುಪ್ತಚರ ಮತ್ತು ಸಂಪರ್ಕ ವೇದಿಕೆಯಾದ ಓಕ್ಲಾ ಈ ವರದಿ ಬಹಿರಂಗಪಡಿಸಿದೆ. ಜಿಯೋ ಸರಾಸರಿ 5 ಜಿ ಡೌನ್ಲೋಡ್ ವೇಗವನ್ನು 258.54 ಎಂಬಿಪಿಎಸ್ ಮತ್ತು ಅಪ್ಲೋಡ್ ವೇಗವನ್ನು 14.54 ಎಂಬಿಪಿಎಸ್ ದಾಖಲಿಸಿದೆ. ಅಂತೆಯೇ, ವೇಗದ ಮೊಬೈಲ್ ನೆಟ್ವರ್ಕ್ ಮತ್ತು ಅತ್ಯುತ್ತಮ ಮೊಬೈಲ್ ವ್ಯಾಪ್ತಿ ಎರಡರಲ್ಲೂ ಮುಂಚೂಣಿಯಲ್ಲಿದ್ದ ಜಿಯೋ ಈ ಅವಧಿಯಲ್ಲಿ ಭಾರತದ ಅತ್ಯುತ್ತಮ ಮೊಬೈಲ್ ನೆಟ್ವರ್ಕ್ ಆಗಿದೆ ಎಂದಿದೆ. 
 


ಓಕ್ಲಾ ವೆಬ್ಸೈಟ್ ಪ್ರಕಾರ, ವೇಗದ ನೆಟ್ವರ್ಕ್‌ನ ವಿಧಾನವನ್ನು ಸ್ಪೀಡ್ ಸ್ಕೋರ್ ನಿರ್ಧರಿಸುತ್ತದೆ. ಇದು ಡೌನ್ಲೋಡ್ ಮತ್ತು ಅಪ್ಲೋಡ್ ಕಾರ್ಯಕ್ಷಮತೆಯನ್ನು ಸಂಯೋಜಿಸುತ್ತದೆ ಮತ್ತು ಆಧುನಿಕ ಚಿಪ್‌ಸೆಟ್‌ಗಳನ್ನು ಆಧರಿಸಿದೆ. ನಗರವಾರು ಜೈಪುರ ಹೊರತುಪಡಿಸಿ ಒಂಬತ್ತು ನಗರಗಳಲ್ಲಿ ಜಿಯೋ ಅತ್ಯಂತ ವೇಗದ ಪೂರೈಕೆದಾರ" ಎಂದು ಓಕ್ಲಾ ತನ್ನ 'ಸ್ಪೀಡ್ಟೆಸ್ಟ್ ಕನೆಕ್ಟಿವಿಟಿ ರಿಪೋರ್ಟ್' ನಲ್ಲಿ ತಿಳಿಸಿದೆ.  ಪಟ್ಟಿಯಲ್ಲಿ ಬೆಂಗಳೂರು ನಗರವೂ ಸೇರಿದೆ. ಬೆಂಗಳೂರು ನಗರವು ಡೌನ್ಲೋಡ್ ವೇಗದಲ್ಲಿ 5 ಮತ್ತು ಅಪ್ಲೋಡ್ ವೇಗದಲ್ಲಿ 4 ನೇ ಸ್ಥಾನದಲ್ಲಿದೆ.
 

ಜೈಪುರವು ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಅತಿ ವೇಗದ ಸರಾಸರಿ ಮೊಬೈಲ್ ಡೌನ್ಲೋಡ್ ವೇಗವನ್ನು ಹೊಂದಿದೆ, 181.68 ಎಂಬಿಪಿಎಸ್ ಅನ್ನು ದಾಖಲಿಸಿದೆ. ಕೋಲ್ಕತಾ ಎರಡನೇ ಸ್ಥಾನದಲ್ಲಿದ್ದರೆ, ಅಹಮದಾಬಾದ್ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಮುಂಬೈ 75.75 ಎಂಬಿಪಿಎಸ್‌ನೊಂದಿಗೆ ನಿಧಾನಗತಿಯ ಸರಾಸರಿ ಮೊಬೈಲ್ ಡೌನ್ಲೋಡ್ ವೇಗವನ್ನು ಹೊಂದಿದ್ದು, ಪುಣೆ ಮತ್ತು ಚೆನ್ನೈ ನಂತರದ ಸ್ಥಾನಗಳಲ್ಲಿವೆ.

Latest Videos

click me!