ಅತ್ಯಾಧುನಿಕ ಫೀಚರ್ಸ್ ಇರೋದ್ರಿಂದ ಸಾಮಾನ್ಯವಾಗಿ ಇದರ ಬೆಲೆಯೂ ತುಸು ದುಬಾರಿ ಎನಿಸಬಹುದು. 26,900 ರೂಪಾಯಿ ಬೆಲೆಯ ಈ Barracuda V2 Pro, 40mm TriForce Bio-Cellulose ಡ್ರೈವರ್ಗಳನ್ನು ಹೊಂದಿದ್ದು, PC ಯಲ್ಲಿ 'THX Spatial Audio+' ಸಪೋರ್ಟ್ ಇದೆ. ಇದರ ವೈಶಿಷ್ಟ್ಯತೆ ಏನೆಂದರೆ ಇದನ್ನ ಬೇರೆ ಬೇರೆ ಸಾಧನಗಳಿಗೆ ಬದಲಾಯಿಸುವ ಅಗತ್ಯವಿಲ್ಲದೆಯೇ, ಗೇಮಿಂಗ್ ಸೆಟಪ್ಗಳು ಮತ್ತು ಮೊಬೈಲ್ ಬಳಕೆಯ ನಡುವೆ ಸುಲಭವಾಗಿ ಬದಲಾಯಿಸಿಕೊಳ್ಳಲು ಅನುಕೂಲವಾಗುವಂತೆ ಇದನ್ನು ಡಿಸೈನ್ ಮಾಡಲಾಗಿದೆ ಎಂದು Razer ತಿಳಿಸಿದೆ.
Razer Barracuda V2 Pro: ಬೆಲೆ ಎಷ್ಟು? ಫೀಚರ್ಸ್ ಏನು?
Razer Barracuda V2 Pro ನ ಬೆಲೆ 26,900 ರೂಪಾಯಿಗಳು. ಇದರ ಪ್ರಮುಖ ವೈಶಿಷ್ಟ್ಯಗಳಲ್ಲಿ Razer HyperSpeed Wireless, ಬ್ಲೂಟೂತ್ ಕನೆಕ್ಟ್, ಹೈಬ್ರಿಡ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಮತ್ತು AI- ಪವರ್ಡ್ ಮೈಕ್ರೊಫೋನ್ ನಾಯ್ಸ್ ಕ್ಯಾನ್ಸಲೇಷನ್ ಸೇರಿವೆ.
ಈ ಹೆಡ್ಸೆಟ್ ನಿಂದ ಒಂದೇ ಸಮಯಕ್ಕೆ 2.4GHz ವೈರ್ಲೆಸ್ ಮತ್ತು ಬ್ಲೂಟೂತ್ ಆಡಿಯೊ ಬಳಸಬಹುದು. ಅಂದರೆ ಮತ್ತೊಂದಲ್ಲಿ ಕರೆಗಳು, ಸಂದೇಶಗಳು ಅಥವಾ ಮ್ಯೂಸಿಕ್ ಪ್ಲೇ ಆಡಿಯೋ ಕೇಳಬಹುದು. ಮೀಸಲಾದ ರೇಜರ್ ಸ್ಮಾರ್ಟ್ಸ್ವಿಚ್ ಬಟನ್ ಇದೆ ಇದು ಎರಡು ವೈರ್ಲೆಸ್ ಕನೆಕ್ಟ್ ನಡುವೆ ಬದಲಾಯಿಸುವ ಆಯ್ಕೆ ನೀಡಿದೆ. ಇದರೊಂದಿಗೆ ಪಿಸಿ, ಮೊಬೈಲ್, ಕನ್ಸೋಲ್ ಮತ್ತು ಹ್ಯಾಂಡ್ಹೆಲ್ಡ್ ಸಾಧನಗಳಲ್ಲಿ ಗೇಮಿಂಗ್ಗಾಗಿ ಕಡಿಮೆ-ಲೇಟೆನ್ಸಿ ಆಡಿಯೊವನ್ನು ನೀಡಲು ರೇಜರ್ ಹೈಪರ್ಸ್ಪೀಡ್ ವೈರ್ಲೆಸ್ ಅನ್ನು ವಿನ್ಯಾಸಗೊಳಿಸಲಾಗಿದೆ.