apple watch SE: ಪ್ರತಿಯೊಬ್ಬರಿಗೂ ಆಪಲ್ ಕಂಪನಿಯ ಮೊಬೈಲ್, ವಾಚ್ ಖರೀದಿಸಬೇಕು ಎಂಬ ಆಸೆ ಕನಸುಗಳಿರುತ್ತವೆ. ಆದರೆ ದುಬಾರಿ ಬೆಲೆಯಿಂದ ಕೈಗೆಟುಕದ ದ್ರಾಕ್ಷಿಯಾಗಿದೆ. ನೀವು ಆಪಲ್ ವಾಚ್ ಖರೀದಿಸಬೇಕೆಂದಿದ್ದರೆ ಈ ಎಡಿಷನ್ ಗಳನ್ನ ಖರೀದಿಸಿ ಬೆಲೆ ಕಮ್ಮಿ, ಫೀಚರ್ಸ್ ದುಬಾರಿ ಪ್ರಾಡಕ್ಟ್‌ಗಳಂತೆಯೇ ಇರಲಿವೆ.
ಇಂದಿನ ಯುವಕರು ಕನಸುಗಳು ಯಾವಾಗಲೂ ದೊಡ್ಡವು. ಇಂಜಿನಿಯರ್ ಆಗಬೇಕು, ವಿದೇಶದಲ್ಲಿ ನೆಲೆಸಬೇಕು, ಜೇಬು ತುಂಬಾ ಸಂಬಳ, ಐಫೋನ್, ಕೈಗೆ ದುಬಾರಿ ವಾಚ್ ಅದೂ ಆಪಲ್ ಕಂಪನಿಯದ್ದೇ ಆಗಬೇಕು ಅನ್ನೋದು. ಆದರೆ ಆಪಲ್ ವಾಚ್, ಮೊಬೈಲ್‌ಗಳು ಸಾಮಾನ್ಯರ ಕೈಗೆ ನಿಲುಕದ ದ್ರಾಕ್ಷಿ. ನೀವು ಎಲೆಕ್ಟ್ರಿಕ್ ಮಳಿಗೆಗಳಿಗೆ ಹೋದಾಗ ನಿಮಗೂ ಆಪಲ್ ವಾಚ್ ಖರೀದಿಸೋ ಆಸೆ ಆಗಿರುತ್ತಲ್ಲವೇ? ಖಂಡಿತ ಆಗಿರುತ್ತೆ. ಆದರೆ ಆಪಲ್ ವಾಚ್‌ಗಳೆಂದರೆ ಎಲ್ಲ ವಾಚ್‌ಗಳಂತಲ್ಲ. ಅವುಗಳ ಬೆಲೆಯೂ ದುಬಾರಿ, ಫೀಚರ್ಸ್ ಕೂಡ ವಿಶೇಷವಾಗಿರುತ್ತೆ.
26
ಆಪಲ್ ವಾಚ್ SE ಏನನ್ನು ಸೂಚಿಸುತ್ತೆ?
ಆಪಲ್‌ನಲ್ಲಿ ಹಲವು ಮಾಡೆಲ್‌ಗಳಿವೆ. ಆಪಲ್ ವಾಚ್ SE ಬಗ್ಗೆ ನೀವು ಈಗಾಗಲೇ ಕೇಳಿರಬಹುದು. ಆದರೆ ಈ ಮಾಡೆಲ್ ವಾಚ್‌ಗಳಲ್ಲಿ SE ಎಂದರೇನು? ಏನನ್ನು ಸೂಚಿಸುತ್ತೆ? ಬಹಳಷ್ಟು ಜನರು ಇದೊಂದು ವಿಶೇಷ ತಂತ್ರಜ್ಞಾನದ ಹೆಸರಿರಬಹುದು ಎಂದುಕೊಳ್ತಾರೆ, ಅದಲ್ಲ.. ಇದರ ಹಿಂದಿದೆ ನೀವು ತಿಳಿಯಲಾರದ ಸತ್ಯ. ಅದೇನೆಂದು ನಾವಿಲ್ಲಿ ತಿಳಿಸುತ್ತೇವೆ.
36
Apple watch: SE ಎಂದರೆ ಏನು
ಆಪಲ್ ತನ್ನ ಪ್ರೀಮಿಯಂ ವಾಚ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಫಿಚರ್ಸ್ ನೀಡುವ ವಾಚ್‌ಗಳಿಗೆ SE ಹೆಸರನ್ನು ಬಳಸುತ್ತದೆ. ಆದರೆ ಆಪಲ್ SE ಗಾಗಿ ಅಧಿಕೃತ ಪೂರ್ಣ ರೂಪವನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಇದರರ್ಥ SE ಎಂಬುದು ಅಧಿಕೃತ ಪದವಲ್ಲ. ಇದು ಆಪಲ್ ವಾಚ್ ಕಡಿಮೆ ಬೆಲೆಯಲ್ಲಿ ನೀಡಲು ವಿನ್ಯಾಸಗೊಳಿಸಲಾದ ಒಂದು ರೇಂಜ್ ಮಾಡೆಲ್.
ಆಪಲ್ ವಾಚ್ SE ಅನ್ನು ಆಪಲ್ ವಾಚ್‌ನ ಸ್ಮಾರ್ಟ್ ಫೀಚರ್ಸ್ ಮೆಚ್ಚುವ ಆದರೆ ದುಬಾರಿಯಾಗಿರುವ ಅದನ್ನು ಪಡೆಯಲಾಗದ ಸಾಮಾನ್ಯ ಜನರನ್ನ ಉದ್ದೇಶದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಆಪಲ್ ದುಬಾರಿ ವಾಚ್‌ಗಳಲ್ಲಿರುವಂತೆಯೇ ಇದರಲ್ಲೂ ನೋಟಿಫಿಕೇಷನ್, ಫಿಟ್‌ನೆಸ್ ಟ್ರ್ಯಾಕಿಂಗ್, ವರ್ಕೌಟ್ ರೆಕಾರ್ಡಿಂಗ್, ಹೃದಯ ಬಡಿತ ಚೆಕಿಂಗ್ ಎಲ್ಲವೂ ಇದರಲ್ಲಿದೆ. ಆದರೆ ಪ್ರೀಮಿಯಂ ಆಪಲ್ ವಾಚ್‌ಗೆ ಹೋಲಿಸಿದರೆ SE ಮಾದರಿಯು ಕೆಲವು ಹೆಚ್ಚು Advanced features ಮತ್ತು ಹಾರ್ಡ್‌ವೇರ್ ಮಿತಿಗಳನ್ನು ಹೊಂದಿರಬಹುದು, ಅದಕ್ಕಾಗಿಯೇ ಇದರ ಬೆಲೆ ಹೆಚ್ಚಾಗಿ ಕಡಿಮೆ ಇರುತ್ತದೆ.
56
SE ಎಂದರೆ ಸ್ಪೆಷನ್ ಎಡಿಶನ್? (SE Special Edition?)
ಆಪಲ್ ವಾಚ್ ಖರೀಸಲು ಹೋಗುವ, ಖರೀದಿಸುವ ಬಹಳಷ್ಟು ಜನರು ಆಪಲ್ ವಾಚ್ SE ಅನ್ನು ಸ್ಪೆಷಲ್ ಎಡಿಷನ್ ಎಂದೇ ಭಾವಿಸಿದ್ದಾರೆ. ಆದರೆ ಆಪಲ್ ಅಧಿಕೃತವಾಗಿ SE ಎಂದರೆ ಸ್ಪೆಷಲ್ ಎಡಿಷನ್ ಎಂದು ಹೇಳಿಲ್ಲ. ಇನ್ನೊಂದು ಅಚ್ಚರಿ ಎಂದರೆ SE ಹೆಸರು ಕೇವಲ ಆಪಲ್ ವಾಚ್‌ಗೆ ಸೀಮಿತವಾಗಿಲ್ಲ. ಆಪಲ್ ಐಫೋನ್‌ನಂತಹ ಇತರ ಪ್ರಾಡಕ್ಟ್‌ಗಳಿಗೂ SE ಬ್ರ್ಯಾಂಡಿಂಗ್ ಅನ್ನು ಬಳಸಿದೆ. ಅಂದರೆ ಕಡಿಮೆ ಬಜೆಟ್‌ನಲ್ಲಿ ಆಪಲ್ ಕಂಪನಿಯ ವಾಚ್, ಮೊಬೈಲ್ ಖರೀದಿಸಬೇಕೆನ್ನುವ ಸಾಮಾನ್ಯ ಜನರ ದೃಷ್ಟಿಯಲ್ಲಿಟ್ಟುಕೊಂಡು ತಯಾರಿಲಾದ ಪ್ರಾಡಕ್ಟ್‌ಗಳಿವು.
66
ಆಪಲ್ ವಾಚ್ SE ಖರೀದಿಸಬಹುದೇ?
ನೀವು ಕಡಿಮೆ ಬಜೆಟ್‌ನಲ್ಲಿ ಫಿಟ್‌ನೆಸ್ ಟ್ರ್ಯಾಕಿಂಗ್, ನೋಟಿಫಿಕೇಶನ್ ಇರುವ ಆಪಲ್ ಖರೀದಿಸಬೇಕು ಎನ್ನುವವರಾಗಿದ್ರೆ ಇದು ನಿಮಗೆ ಉತ್ತಮ. ನೀವು ಅತ್ಯಾಧುನಿಕ ಹೆಲ್ತ್ ಫೀಚರ್ಸ್, ಪ್ರೀಮಿಯಂ ಡಿಸ್ಪ್ಲೇ ಅಥವಾ ಇತರ ಉನ್ನತ-ಮಟ್ಟದ ಫೀಚರ್ಸ್ ಬೇಕೆಂದರೆ ಆಪಲ್ ವಾಚ್‌ನ ಪ್ರೀಮಿಯಂ ಖರೀದಿಸುವುದು ಉತ್ತಮ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.