ವ್ಯಾಟ್ಸಾಪ್‌ನಿಂದ ಮಾತ್ರ ಅನ್‌ವಾಂಟೆಡ್ ನಂಬರ್ ಬ್ಲಾಕ್ ಮಾಡುವುದು ಹೇಗೆ? ಸಿಂಪಲ್ ಟಿಪ್ಸ್ , ಎಲ್ಲೇ ಇರಲಿ, ಎಷ್ಟೇ ದೂರವಿರಲಿ, ವ್ಯಾಟ್ಸಾಪ್ ಎಲ್ಲರನ್ನೂ ಕನೆಕ್ಟ್ ಮಾಡುತ್ತದೆ. ಕೆಲವು ಬಾರಿ ಮೆಸೇಜ್ ಕಿರಿಕಿರಿಯಾಗುತ್ತದೆ. ಈ ವೇಳೆ ಕೇವಲ ವ್ಯಾಟ್ಸಾಪ್‌ನಿಂದ ನಂಬರ್ ಬ್ಲಾಕ್ ಮಾಡುವುದು ಹೇಗೆ
ವ್ಯಾಟ್ಸಾಪ್ ಎಲ್ಲರನ್ನು ಸಂಪರ್ಕದಲ್ಲಿಡುವ ಪ್ರಮುಖ ವೇದಿಕೆ. ಕುಟುಂಬಸ್ಥರು, ಆಪ್ತರು ಗೆಳೆಯರು, ಸಹೋದ್ಯೋಗಿಗಳು ಎಲ್ಲರನ್ನೂ ವ್ಯಾಟ್ಸಾಪ್ ಕನೆಕ್ಟ್ ಮಾಡಲಾಗಿದೆ.ಸ್ಮಾರ್ಟ್‌ಫೋನ್ ಬಳಕೆ ಮಾಡುವ ಬಹುತೇಕರು ವ್ಯಾಟ್ಸಾಪ್ ಬಳಕೆ ಮಾಡುತ್ತಾರೆ. ಭಾರತದಲ್ಲಿ ಗರಿಷ್ಠ ಮಂದಿ ವ್ಯಾಟ್ಸಾಪ್ ಬಳಕೆ ಮಾಡುತ್ತಾರೆ. ಹಲವು ಬಾರಿ ಕೆಲವರ ವ್ಯಾಟ್ಸಾಪ್ ಮೆಸೇಜ್, ಫಾರ್ವರ್ಡ್, ಕಾಲ್, ವಿಡಿಯೋ ಕಾಲ್ ಕಿರಿಕಿರಿ ಸೃಷ್ಟಿಸುತ್ತದೆ. ಇಂತಹ ಸಂದರ್ಭದಲ್ಲಿ ವ್ಯಾಟ್ಸಾಪ್ ಕಿರಿಕಿರಿ ತಪ್ಪಿಸಲು ಉಪಾಯವಿದೆ.
25
ಬಳಕೆದಾರರ ಸುರಕ್ಷತೆಗೂ ಮುಖ್ಯ
ವ್ಯಾಟ್ಸಾಪ್ ಮೂಲಕ ಹೂಡಿಕೆ ಸಲಹೆ, ಲೋನ್ ಸೇರಿದಂತೆ ಹಲಲವು ಸ್ಕ್ಯಾಮ್ ಸೇರಿದಂತೆ ಕಿರಿಕಿರಿಯಾಗುವ ಮೆಸೇಜ್‌ಗಳು ಪ್ರತಿ ದಿನ ನಿಮ್ಮ ವ್ಯಾಟ್ಸಾಪ್ ಖಾತೆಗೆ ಬರುತ್ತಲೇ ಇರುತ್ತದೆ. ಇಂತಹ ನಂಬರ್, ಅಥವಾ ನಿಮಗೆ ಸಮಸ್ಯೆಯಾಗಬಲ್ಲ ವ್ಯಕ್ತಿಗಳ ನಂಬರ್ ಬ್ಲಾಕ್ ಮಾಡಲು ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಸಾಕು
35
ವ್ಯಾಟ್ಸಾಪ್‌ನಿಂದ ನಂಬರ್ ಬ್ಲಾಕ್
ವ್ಯಾಟ್ಸಾಪ್‌ನಿಂದ ಅನ್‌ವಾಂಟೆಡ್ ನಂಬರ್ ಬ್ಲಾಕ್ ಮಾಡಲು ಸುಲಭ ಮಾರ್ಗ ಇಲ್ಲಿದೆ
ನಿಮ್ಮ ಫೋನ್‌ನಲ್ಲಿ ವ್ಯಾಟ್ಸಾಪ್ ತೆರೆಯಿರಿ
ಚಾಟ್ ಸೆಕ್ಷನ್‌ಗೆ ತೆರಳಿ ಯಾವ ನಂಬರ್ ಅಥವಾ ಯಾರ ನಂಬರ್ ಬ್ಲಾಕ್ ಮಾಡಬೇಕು, ಅವರ ಮೆಸೇಜ್ ಓಪನ್ ಮಾಡಿ
ವ್ಯಾಟ್ಸಾಪ್‌ನಲ್ಲಿ ಅಪರಿಚಿತರ, ಗೊತ್ತಿಲ್ಲದೆ ಇರುವವರ ಕರೆಗಳನ್ನು ಸೈಲೆಂಟ್ ಮಾಡುವ ವಿಶೇಷ ಫೀಚರ್ ನೀಡಲಾಗಿದೆ. ಈ ಫೀಚರ್ ಮೂಲಕ ನೀವು ಅಪರಿಚರ ಕಾಲ್‌ಗಳನ್ನು ಸೈಲೆಟ್ ಮಾಡಲು ಸಾಧ್ಯವಿದೆ. ಈ ಫೀಚರ್ ಆ್ಯಕ್ಟೀವೇಟ್ ಮಾಡಿದರೆ ಸಾಕು, ಅಪರಿಚಿತ ಕಾಲ್ ಸೈಲೆಂಟ್ ಆಗಲಿದೆ.
ಅನ್‌ನೋನ್ ಕಾಲರ್ ಫೀಚರ್
55
ವ್ಯಾಟ್ಸಾಪ್ ಸುರಕ್ಷತಾ ಫೀಚರ್
ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ಸುರಕ್ಷತಾ ಫೀಚರ್ ನೀಡುತ್ತಿದೆ. ಈ ಪೈಕಿ ಚಾಟ್ ಲಾಕ್ ಮಾಡುವ ಫೀಚರ್ ಕೂಡ ನೀಡಿದೆ. ಯಾರದೇ ಚಾಟ್ ಲಾಕ್ ಮಾಡಬೇಕಿದ್ದರೂ ಈ ಫೀಚರ್ ವ್ಯಾಟ್ಸಾಪ್‌ನಲ್ಲಿ ಲಭ್ಯವಿದೆ. ಈ ಮೂಲಕ ಒಬ್ಬರ ಅಥವಾ ಅದಕ್ಕಿಂತ ಹೆಚ್ಚು ಚಾಟ್‌ಗಳನ್ನು ಲಾಕ್ ಮಾಡಬಹುದು. ಇದರಿಂದ ವ್ಯಾಟ್ಸಾಪ್ ತೆರೆದರೂ ಲಾಕ್ ಮಾಡಿದ ಚಾಟ್ ಬೇರೊಬ್ಬರಿಗೆ ತೆರೆಯಲು ಸಾಧ್ಯವಾಗುವುದಿಲ್ಲ.