ನಿಮ್ಮ ವ್ಯಾಟ್ಸಾಪ್‌ಗೆ ವಾಹನದ RTO ಚಲನ್ ಬಂದಿದೆಯಾ? ಅಪ್ಪಿ ತಪ್ಪಿಯೂ ಓಪನ್ ಮಾಡಬೇಡಿ, ಕಾರಣ ಹೊಸ ಸ್ಕ್ಯಾಮ್ ಶುರುವಾಗಿದ್ದು, ಡೌನ್ಲೋಡ್ ಮಾಡಿದರೆ, ಓಪನ್ ಮಾಡಿದರೆ ನಿಮ್ಮ ಫೋನ್ ಹ್ಯಾಕ್ ಆಗಲಿದೆ.
ಸ್ಕೂಟರ್, ಬೈಕ್ ಅಥವಾ ಕಾರು ಸೇರದಂತೆ ಬಹುತೇಕರಲ್ಲಿ ವಾಹನ ಇದ್ದೇ ಇದೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಬಹುತೇಕರಲ್ಲಿ ವಾಹನ ಇದ್ದೇ ಇದೆ. ಇಷ್ಟೇ ಅಲ್ಲ ಒಂದಲ್ಲಾ ಒಂದು ಟ್ರಾಫಿಕ್ ನಿಯಮ ಉಲ್ಲಂಘನೆ, ದಂಡ ಬಾಕಿ ಇರುತ್ತದೆ. ಇದೀಗ ವ್ಯಾಟ್ಸಾಪ್‌ಗೆ ಆರ್‌ಟಿಒ ಅಧಿಕಾರಿಗಳು, ಆರ್‌ಟಿಒ ಕಚೇರಿಗಳ ಹೆಸರಿನಲ್ಲಿ ಚಲನ್ ಬರುತ್ತಿದೆ. ಅಪ್ಪಿ ತಪ್ಪಿ ಇದನ್ನು ಡೌನ್ಲೋಡ್ ಅಥವಾ ಓಪನ್ ಮಾಡಬೇಡಿ.
25
ನಕಲಿ ಚಲನ್ ಮೂಲಕ ಫೋನ್ ಹ್ಯಾಕ್
ನಿಮ್ಮ ವಾಹನದ ಆರ್‌ಟಿಒ (ರೀಜನಲ್ ಟ್ರಾನ್ಸ್‌ಫೋರ್ಟ್ ಆಫೀಸ್) ಚಲನ್ ಎಂದು ವ್ಯಾಟ್ಸಾಪ್‌ಗೆ ಎಪಿಕೆ ಫೈಲ್ (APK) ಫೈಲ್ ಕಳುಹಿಸಲಾಗುತ್ತದೆ. ನದು ನಕಲಿ ಫೈಲ್. ಸೈಬರ್ ವಂಚಕರು ಇದೀಗ ಹೊಸ ಮಾರ್ಗ ಕಂಡುಕೊಂಡಿದ್ದು, ಚಲನ್ ರೂಪದಲ್ಲಿ ಅಮಾಯಕನ್ನು ಮೋಸ ಮಾಡುತ್ತಿದ್ದಾರೆ.
35
ಸೈಬರ್ ಪೊಲೀಸ್ ಗಮನಕ್ಕೆ ತಂದ ಸಾರ್ವಜನಿಕರು
ಮುಂಬೈನಲ್ಲಿ ಈ ರೀತಿಯ ಎಪಿಕೆ ನಕಲಿ ಆರ್‌ಟಿಒ ಚಲನ್ ಹರಿದಾಡುತ್ತಿದೆ.ಗಾಬರಿಯಿಂದ ಡೌನ್ಲೋಡ್ ಮಾಡಿದವರ ಮೊಬೈಲ್ ಹ್ಯಾಕ್ ಆಗಿದೆ. ವ್ಯಾಟ್ಸಾಪ್ ಖಾತೆ ಕೂಡ ಕಾರ್ಯನಿರ್ವಹಿಸುತ್ತಿಲ್ಲ. ಕೆಲವರ ವ್ಯಾಟ್ಸಾಪ್ ಖಾತೆ ಬ್ಯಾನ್ ಆಗಿದೆ. ಒಟಿಪಿ, ಜಿಮೇಲ್ ಸೇರಿದಂತೆ ಇತರ ವೈಯುಕ್ತಿಕ ದಾಖಲೆಗಳನ್ನು ಹ್ಯಾಕರ್ಸ್ ಕದಿಯುತ್ತಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಹಲವರು ದೂರು ನೀಡಿದ್ದಾರೆ.
ಎಪಿಕೆ (ಆ್ಯಂಡ್ರಾಯ್ಡ್ ಪ್ಯಾಕೇಜ್ ಕಿಟ್) ಫೈಲ್‌ನಲ್ಲಿ ನಿಮ್ಮ ವಾಹನ ದಾಖಲೆ ಅಥವಾ ನಕಲಿ ದಾಖಲೆಯನ್ನು ನಮೂದಿಸಿ ನಿಮ್ಮ ಹೆಸರು ಕಾಣುವಂತೆ ಕಳುಹಿಸಲಾಗುತ್ತದೆ. ನೀವು ಆರ್‌ಟಿಒ ಚಲನ್ ಎಂದು ಡೌನ್ಲೋಡ್ ಮಾಡಿದಾಗ ಎಪಿಕೆ ನಿಮ್ಮ ಫೋನ್‌ನಲ್ಲಿ ಇನ್‌ಸ್ಟಾಲ್ ಆಗಲಿದೆ. ಬಳಿಕ ನಿಮ್ಮ ಫೋನ್ ಹ್ಯಾಕ್ ಆಗಲಿದೆ.
ಆರ್‌ಟಿಒ ದಾಖಲೆಯೊಂದಿಗೆ ಫೈಲ್ ರವಾನೆ
55
ಡೌನ್ಲೋಡ್ ಮಾಡಿದರೆ ಏನು ಮಾಡಬೇಕು?
ಎಪಿಕೆ ಫೈನಲ್ ಡೌನ್ಲೋಡ್ ಮಾಡುವುದು, ಇತರರಿಗೆ ಫಾರ್ವಡ್ ಮಾಡುವುದು ಎರಡೂ ಅಪಾಯ. ಹೀಗಾಗಿ ಅತೀವ ಎಚ್ಚರಿಕೆ ವಹಿಸಬೇಕು. ಸರ್ಕಾರದ ಅಧಿಕೃತ ಪರಿವಾಹನ ಅಥವಾ ವೆಬ್‌ಸೈಟ್ ಮೂಲಕ ನಿಮ್ಮ ವಾಹನದ ಚಲನ್ ಪರಿಶೀಲಿಸಿ. ಗೊತ್ತಿಲ್ಲದೆ, ಅತುರದಿಂದ ನೀವು ವಂಚಕರ ಎಪಿಕೆ ಫೈಲ್ ಡೌನ್ಲೋಡ್ ಮಾಡಿದರೆ ತಕ್ಷಣವೇ ನಿಮ್ಮ ಪೋನ್ ಇಂಟರ್ನೆಟ್ ಅಥವಾ ಡೇಟಾ ಆಫರ್ ಮಾಡಿ. ಆ್ಯಂಟಿ ವೈರಸ್ ಸಾಫ್ಟ್‌ವೇರ್ ಮೂಲಕ ನಿಮ್ಮ ಫೋನ್ ಸ್ಕ್ಯಾನ್ ಮಾಡಿ. ಫಾರ್ಮ್ಯಾಟ್ ಮಾಡಿದರೆ ನಿಮ್ಮ ಫೋನ್ ಡೇಟಾ ನಾಶವಾಗಲಿದೆ. ಫಾರ್ಮ್ಯಾಟ್ ಆಯ್ಕೆಯೂ ಇದೆ.