ಇನ್‌ಸ್ಟಾಗ್ರಾಂ ರೀಲ್ಸ್ ಪ್ರೀಯರಿಗೆ ಗುಡ್ ನ್ಯೂಸ್, 10 ನಿಮಿಷ ವಿಡಿಯೋಗೆ ಅವಕಾಶ!

First Published | Aug 31, 2023, 1:30 PM IST

ಇನ್‌ಸ್ಟಾಗ್ರಾಂ ರೀಲ್ಸ್ ಇದೀಗ ಬಹುತೇಕರ ಜೀವನದೊಳಗೆ ಹಾಸೊಹೊಕ್ಕಾಗಿದೆ. ರೀಲ್ಸ್ ಇಲ್ಲದ ಜೀವನವೇ ಇಲ್ಲದಾಗಿದೆ. ರೀಲ್ಸ್ ಮಾಡುವವರಿಗೆ ಹಾಗೂ ವೀಕ್ಷಿಸುವರಿಗೆ ಇದೀಗ ಗುಡ್ ನ್ಯೂಸ್. ಇನ್‌ಸ್ಟಾ ರೀಲ್ಸ್ ಮಿತಿಯನ್ನು 10 ನಿಮಿಷಕ್ಕೆ ಏರಿಸಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡವರ ಸಂಖ್ಯೆ ಅಥವಾ ನೋಡದವರ ಸಂಖ್ಯೆ ತೀರಾ ಕಡಿಮೆ. ಅಷ್ಟರ ಮಟ್ಟಿಗೆ  ಇನ್‌ಸ್ಟಾ ರೀಲ್ಸ್ ಪ್ರತಿಯೊಬ್ಬರನ್ನು ಮೋಡಿ ಮಾಡಿದೆ.  ಇದೀಗ ಇನ್‌ಸ್ಟಾಗ್ರಾಂ ರೀಲ್ಸ್ ಅಪ್‌ಗ್ರೇಡ್ ಮಾಡುತ್ತಿದೆ.

ಸದ್ಯ ಇನ್‌ಸ್ಟಾ ರೀಲ್ಸ್ ವಿಡಿಯೋ ಮಿತಿ ಗರಿಷ್ಠ 90 ಸೆಕೆಂಡ್ಸ್ ಮಾತ್ರ.  ಇದೇ ವಿಡಿಯೋ ಮಿತಿಯನ್ನು ಇದೀಗ ಬರೋಬ್ಬರಿ 10 ನಿಮಿಷಕ್ಕೆ ಏರಿಸಲಾಗುತ್ತಿದೆ. ಶೀಘ್ರದಲ್ಲೇ ಹೊಸ ಅಪ್‌ಡೇಟ್  ಜಾರಿಯಾಗಲಿದೆ.

Latest Videos


ಗೂಗಲ್ ಒಡೆತನ ಯೂಟ್ಯೂಬ್‌ಗೆ  ಸೆಡ್ಡು ಹೊಡೆಯಲು ಸಜ್ಜಾಗಿರುವ ಇನ್‌ಸ್ಟಾಗ್ರಾಂ ಇದೀಗ ರೀಲ್ಸ್ ವಿಡಿಯೋ ಮಿತಿಯನ್ನು 10  ನಿಮಿಷಕ್ಕೆ ಏರಿಸುವ ಮೂಲಕ ಹೊಸ ಕ್ರಾಂತಿ ಮಾಡಲು ಮುಂದಾಗಿದೆ.

ಇತ್ತ ಮೆಟಾ ತನ್ನ ರೀಲ್ಸ್ ವಿಡಿಯೋ ಕುರಿತು  ಯಾವುದೇ ಅಪ್‌ಡೇಟ್ ಮಾಡಿಲ್ಲ. ಆದರೆ ಕೆಲವೇ ದಿನಗಳಲ್ಲಿ ಇನ್‌ಸ್ಟಾ ರೀಲ್ಸ್ ಮಿತಿಯನ್ನು10ನಿಮಿಷಕ್ಕೆ ಏರಿಸಲಾಗುತ್ತಿದೆ. ಈಗಾಗಲೇ ಟೆಸ್ಟಿಂಗ್ ವಿಡಿಯೋ ಪಕ್ರಿಯೆನಡೆಯುತ್ತಿದೆ.

ಟಿಕ್‌ಟಾಕ್ ಈಗಾಗಲೇ ತನ್ನ ಗ್ರಾಹಕರಿಗೆ 10 ನಿಮಿಷದ ರೀಲ್ಸ್ ವಿಡಿಯೋಗೆ ಅವಕಾಶ ಮಾಡಿದೆ. ಇನ್ನು ಹೆಚ್ಚುವರಿ ಹಣ ಪಾವತಿ ಮಾಡಿದ ಗ್ರಾಹಕರಿಗೆ 20 ನಿಮಿಷದ ರೀಲ್ಸ್ ವಿಡಿಯೋಗೆ ಟಿಕ್‌ಟಾಕ್ ಅವಕಾಶ ನೀಡಿದೆ.
 

ಇನ್‌ಸ್ಟಾ ರೀಲ್ಸ್ ವಿಡಿಯೋ ಮಿತಿ ಕುರಿತ ಟೆಸ್ಟಿಂಗ್ ನಡೆಯುತ್ತಿದೆ. ಬಹುತೇಕ ಪ್ರಕ್ರಿಯ ಪೂರ್ಣಗೊಂಡಿದೆ.   ಈ ಕುರಿತು ಗ್ರಾಹಕರಿಗೆ ನೋಟಿಫಿಕೇಶನ್ ನೀಡಲಾಗುತ್ತದೆ ಎಂದು ಇನ್‌ಸ್ಟಾಗ್ರಾಂ ಬ್ರಾಡ್‌ಕಾಸ್ಟ್ ಚಾನೆಲ್ ಆ್ಯಡಮ್ ಮೊಸೆರಿ ಹೇಳಿದ್ದಾರೆ.

ಇನ್‌ಸ್ಟಾ ರೀಲ್ಸ್ ವಿಡಿಯೋ ಮಿತಿ ಹೆಚ್ಚಿಸುವ ಮೂಲಕ ಇದೀಗ ಮತ್ತೊಂದು ಅಧ್ಯಾಯವನ್ನು ಮೆಟಾ ತೆರೆಯುತ್ತಿದೆ. ಆದಾಯದಲ್ಲಿ ವಿಡಿಯೋ ಪ್ರಮುಖ ಪ್ಲಾಟ್‌ಫಾರ್ಮ್ ಆಗಿದೆ.  ಈ ನಿಟ್ಟಿನಲ್ಲಿ ಇನ್‌ಸ್ಟಾ ಮಹತ್ವದ ಹೆಜ್ಜೆ ಇಟ್ಟಿದೆ.

click me!