ವ್ಯಾಟ್ಸ್ಆ್ಯಪ್ ಚಾಟ್‌ನಲ್ಲಿ ವಾಯ್ಸ್ ರೀತಿ ವಿಡಿಯೋ ಮೆಸೇಜ್ ಕಳುಹಿಸಿ, ಹೊಸ ಫೀಚರ್ ಬಳಕೆ ಹೇಗೆ?

First Published | Aug 22, 2023, 5:06 PM IST

ವ್ಯಾಟ್ಸ್ಆ್ಯಪ್ ಹೊಸ ಹೊಸ ಫೀಚರ್ ಬಿಡುಗಡೆ ಮಾಡುವ ಮೂಲಕ ಬಳಕೆದಾರರ ಬೇಡಿಕೆಗಳನ್ನು ಪೂರೈಸುತ್ತಿದೆ. ಇದೀಗ ಮತ್ತೊಂದು ಹೊಸ ಫೀಚರ್ ಆರಂಭಿಸಿದೆ. ವ್ಯಾಟ್ಸ್ಆ್ಯಪ್ ಚಾಟ್‌ನಲ್ಲಿ ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸುವಂತೆ ಇನ್ನು ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಲು ಸಾಧ್ಯ.
 

ವ್ಯಾಟ್ಸ್ಆ್ಯಪ್ ಕಳೆದ ಹಲವು ತಿಂಗಳುಗಳಿಂದ ಹೊಸ ಹೊಸ ಫೀಚರ್ ಲಾಂಚ್ ಮಾಡುತ್ತಿದೆ. ಬಳಕೆದಾರರ ದೂರು, ಬೇಡಿಕೆಗಳನ್ನು ಆಲಿಸಿ ಅದಕ್ಕೆ ತಕ್ಕಂತೆ ಫೀಚರ್ಸ್ ಲಾಂಚ್ ಮಾಡುತ್ತಿದೆ.
 

ಇದೀಗ ವ್ಯಾಟ್ಸ್ಆ್ಯಪ್ ವಿಡಿಯೋ ಚಾಟ್ ಫೀಚರ್ ಆರಂಭಿಸಿದೆ. ಈಗಾಗಲೇ ಸುಲಭವಾಗಿ ವಿಡಿಯೋ ಕಳುಹಿಸಬಹುದು. ಇದರಲ್ಲೇನಿದೆ ಹೊಸ ಫೀಚರ್ ಅಂತಾ ಗೊಂದಲಕ್ಕೀಡಾದಬೇಡಿ

Latest Videos


ನೀವು ಈಗಾಲೇ ವ್ಯಾಟ್ಸ್ಆ್ಯಪ್ ಚಾಟ್‌ನಲ್ಲಿ ವಾಯ್ಸ್ ರೆಕಾರ್ಡ್ ಮೂಲಕ ಚಾಟ್ ಮಾಡಿರುತ್ತೀರಿ. ಮೈಕ್ ಬಟನ್ ಹಿಡಿದು ಧ್ವನಿ ರೆಕಾರ್ಡ್ ಮಾಡಿ ಚಾಟಿಂಗ್ ಮಾಡುವುದು ಸುಲಭ. ಇದೇ ರೀತಿ, ವಿಡಿಯೋ ಬಟನ್ ಹಿಡಿದು ವಿಡಿಯೋ ರೆಕಾರ್ಡ್ ಮಾಡಿ ಚಾಟಿಂಗ್ ಮಾಡಲು ಸಾಧ್ಯ

ವಾಯ್ಸ್ ರೆಕಾರ್ಡ್ ಮೈಕ್ ಬಟನ್ ಕ್ಲಿಕ್ ಮಾಡಿದರೆ ಎರಡು ಆಯ್ಕೆ ಲಭ್ಯವಾಗಲಿದೆ. ಒಂದು ವಾಯ್ಸ್ ರೆಕಾರ್ಡ್, ಮತ್ತೊಂದು ವಿಡಿಯೋ ರೆಕಾರ್ಡ್. ವಿಡಿಯೋ ರೆಕಾರ್ಡ್ ಆಯ್ಕೆ ಕ್ಲಿಕ್ ಮಾಡಿ ವಿಡಿಯೋ ಚಾಟಿಂಗ್ ಮಾಡಲು ಸಾಧ್ಯವಿದೆ.

ವಾಯ್ಸ್ ರೆಕಾರ್ಡ್ ಧ್ವನಿ ರೀತಿಯಲ್ಲೇ ವಿಡಿಯೋಗಳು ಚಾಟ್‌ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದೆ. ಇಷ್ಟೇ ಅಲ್ಲ ಡೌನ್ಲೋಡ್, ವಿಡಿಯೋ ನೋಡಲು ಹೆಚ್ಚು ಹೊತ್ತು ಕಾಯಬೇಕಿಲ್ಲ. ಇತರ ಸಮಸ್ಯೆಗಳು ಎದುರಾಗುವುದಿಲ್ಲ. ಸದ್ಯ ಈ ಫೀಚರ್ iOS ಮೊಬೈಲ್‌ಗೆ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲೂ ಲಭ್ಯವಾಗಲಿದೆ.

ಇತ್ತೀಚೆಗೆ ವ್ಯಾಟ್ಸ್ಆ್ಯಪ್ ವಿಡಿಯೋ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಮೊಬೈಲ್‌ನ ಸ್ಕ್ರೀನ್‌ ಶೇರ್ ಮಾಡಿಕೊಳ್ಳುವ ಫೀಚರ್‌ ಪರಿಚಯಿಸಿದೆ. ಇದೀಗ ವಿಡಿಯೋ ಚಾಟ್ ಫೀಚರ್ ಪರಿಚಯಸಿದೆ.
 

ವಿಡಿಯೋ ಕಾಲ್‌ನಲ್ಲಿ ಫ್ರಂಟ್‌ ಕ್ಯಾಮರಾ ಅಥವಾ ಬ್ಯಾಕ್‌ ಕ್ಯಾಮರಾಗಳನ್ನು ಟರ್ನ್‌ ಆನ್‌ ಮಾಡಿಕೊಂಡು ನಮ್ಮೊಂದಿಗೆ ವಿಡಿಯೋ ಕಾಲ್‌ ಮಾಡಿದವರ ಜೊತೆ ಸಂವಹನ ನಡೆಸಬಹುದಾಗಿತ್ತು. ಆದರೆ ನಮ್ಮ ಮೊಬೈಲ್‌ನ ಪರದೆಯನ್ನು ಶೇರ್‌ ಮಾಡಬಹುದಾದ ಹೊಸ ಫೀಚರ್‌ ಅನ್ನು ವಾಟ್ಸಾಪ್‌ ನೀಡಲಿದೆ.

ಉದಾಹರಣೆಗೆ ಝೂಮ್‌ ಮೀಟಿಂಗ್‌ ಕಾಲ್‌ಗಳಲ್ಲಿ ಮೊಬೈಲ್‌ ಸ್ಕ್ರೀನ್‌ ಶೇರ್‌ ಮಾಡಿ ಹೇಗೆ ಮಾಹಿತಿಯನ್ನು ತೋರಿಸುತ್ತ ವಿವರಣೆ ನೀಡಬಹುದೋ ಅದೇ ಮಾದರಿಯಾಗಿದೆ. 

click me!