ChatGPT ಅಂದ್ರೇನು?
ಓಪನ್ ಎಐ ಅಭಿವೃದ್ಧಿ ಪಡಿಸಿರುವ ಎಐ ಚಾಟ್‌ಬಾಟ್ ಅನ್ನು ಚಾಟ್ ಜಿಪಿಟಿ ಎಂದು ಕರೆಯಲಾಗುತ್ತದೆ. ಇದು ಬಳಕೆದಾರರಿಗೆ ಮಾಹಿತಿಗಳನ್ನು ನೀಡುತ್ತದೆ. ಇದರಿಂದ ನಾನಾ ಪ್ರಯೋಜನಗಳಿದ್ದರೂ, ಇದನ್ನು ಹಲವು ದೇಶಗಳು ಬ್ಯಾನ್ ಮಾಡಿವೆ. ಯಾಕೆ ಅಂತೀರಾ..? ಇಲ್ಲಿದೆ ಮಾಹಿತಿ..
ಇಟಲಿ
ಇಟಲಿಯ ಡೇಟಾ ರಕ್ಷಣಾ ಪ್ರಾಧಿಕಾರ ಚಾಟ್‌ಜಿಪಿಟಿಯನ್ನು ದೇಶದಲ್ಲಿ ಬ್ಯಾನ್ ಮಾಡಿದೆ. ಗೌಪ್ಯತೆಯ ಆತಂಕ ಹಿನ್ನೆಲೆ ಇದನ್ನು ನಿಷೇಧಿಸಿದೆ.
ರಷ್ಯಾ
ಎಐ ಪ್ಲಾಟ್‌ಫಾರ್ಮ್‌ನ ದುರ್ಬಳಕೆ ಆತಂಕದಿಂದ ಹಾಗೂ, ಇದರಿಂದ ದೇಶದ ಮೇಲಾಗುವ ಪ್ರಭಾವದಿಂದ ರಷ್ಯಾ ಸಹ ಚಾಟ್ ಜಿಟಿಪಿಯನ್ನು ಬ್ಯಾನ್ ಮಾಡಿದೆ.
ಚೀನಾ
ಚೀನಾ ವಿದೇಶಿ ವೆಬ್‌ಸೈಟ್‌ಗಳ ಮೇಲೆ ಕಠಿಣ ನೀತಿಯನ್ನು ಹೊಂದಿದೆ. ಹಾಗೂ, ಯಾವುದೇ ನಿರೂಪಣೆಯನ್ನು ಹರಡುವ ಭಯದಿಂದ ಚೀನಾ ಚಾಟ್ ಜಿಪಿಟಿಯನ್ನು ಬ್ಯಾನ್ ಮಾಡಿದೆ.
ಇರಾನ್
ಇರಾನ್ ಸಹ ತನ್ನ ದೇಶದಲ್ಲಿ ಚಾಟ್ ಜಿಪಿಟಿಯನ್ನು ಬ್ಯಾನ್ ಮಾಡಿದೆ. ಕಟ್ಟುನಿಟ್ಟಾದ ನಿಯಮಗಳು ಜಾರಿಯಲ್ಲಿ ಇರುವುದರಿಂದ ಹಾಗೂ ಅಮೆರಿಕದೊಂದಿಗೆ ಸಂಬಂಧ ಹದಗೆಟ್ಟಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
ಕ್ಯೂಬಾ
ಕ್ಯೂಬಾ ದೇಶದ ನಾಗರಿಕರ ಮೇಲೆ ಅಲ್ಲಿನ ಸರ್ಕಾರ ಇಂಟರ್ನೆಟ್ ಬಳಕೆಯ ಮೇಲೆ ನಿರ್ಬಂಧ ಹೊಂದಿದೆ. ಈ ಹಿನ್ನೆಲೆ ಚಾಟ್‌ಜಿಪಿಟಿ ಸೇರಿ ನಾನಾ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಿದೆ.
ಸಿರಿಯಾ
ಸಿರಿಯಾದಲ್ಲಿ ಇಂಟರ್ನೆಟ್ ಮೇಲೆ ಭಾರಿ ಸೆನ್ಸಾರ್ ಹಾಕಲಾಗಿದೆ. ಹಾಗೂ, ಅಲ್ಲಿನ ಜನರಿಗೆ ತಪ್ಪು ಮಾಹಿತಿಯನ್ನು ತಲುಪಲು ಸಿರಿಯಾ ದೇಶ ಬಯಸದ ಕಾರಣ ಚಾಟ್ ಜಿಪಿಟಿಯನ್ನು ಬ್ಯಾನ್ ಮಾಡಿದೆ.
ಉತ್ತರ ಕೊರಿಯಾ
ಉತ್ತರ ಕೊರಿಯಾ ಸಹ ತನ್ನ ನಾಗರಿಕರಿಗೆ ಇಂಟರ್ನೆಟ್ ಬಳಕೆ ಮೇಲೆ ನಿಯಂತ್ರಣ ಹೊಂದಿದೆ. ಈ ಹಿನ್ನೆಲೆ ತನ್ನ ದೇಶದಲ್ಲಿ ಚಾಟ್‌ಜಿಪಿಟಿಯನ್ನು ಬ್ಯಾನ್ ಮಾಡಿದೆ.
ಈಜಿಪ್ಟ್
ತನ್ನ ದೇಶದ ನಾಗರಿಕರ ಭದ್ರತೆ ಹಾಗೂ ಸುರಕ್ಷತೆಯ ರಕ್ಷಣೆ ಮಾಡುವ ಉದ್ದೇಶದಿಂದ ಈಜಿಪ್ಟ್ ಚಾಟ್‌ಜಿಪಿಟಿಯನ್ನು ಬ್ಯಾನ್ ಮಾಡಿದೆ.