ವ್ಯಾಟ್ಸ್ಆ್ಯಪ್ ಅತೀ ಅವಶ್ಯಕ ಹಾಗೂ ಅತೀ ಮುಖ್ಯ ಸಂವಹನ ಆ್ಯಪ್ ಆಗಿ ಹೊರಹೊಮ್ಮಿದೆ. ಯಾವುದೇ ಕೆಲಸ, ಆರ್ಡರ್ ಸೇರಿದಂತೆ ಬಹುತೇಕ ಎಲ್ಲಾ ಕೆಲಸಗಳಿಗೂ ಇದೀಗ ವ್ಯಾಟ್ಸ್ಆ್ಯಪ್ ಅತೀ ಅವಶ್ಯಕತವಾಗಿದೆ.
ವ್ಯಾಟ್ಸ್ಆ್ಯಪ್ ಮೂಲಕ ಮೇಸೇಜ್, ಕಾಲ್ ಅಥವಾ ವಿಡಿಯೋ ಕಾಲ್ ಮಾಡಿದರೆ, ಅಥವಾ ಯಾವುದೇ ಗ್ರೂಪ್‌ನಲ್ಲಿ ಇದ್ದರೆ ನಿಮ್ಮ ಖಾಸಗಿ ನಂಬರ್ ಬಹಿರಂಗವಾಗುತ್ತದೆ. ಆದರೆ ಖಾಸಗಿ ನಂಬರ್ ಬಹಿರಂಗಾಗದ ರೀತಿಯಲ್ಲಿ ವ್ಯಾಟ್ಸ್ಆ್ಯಪ್ ಬಳಕೆ ಮಾಡಲು ಸಾಧ್ಯವಿದೆ.
ಖಾಸಗಿ ನಂಬರ್ ಬಹಿರಂಗವಾಗದಂತೆ ವ್ಯಾಟ್ಸ್ಆ್ಯಪ್ ಬಳಕೆ ಮಾಡುವ ಅವಕಾಶ ಸದ್ಯ ಬ್ಯೂಸಿನೆಸ್ ಅಕೌಂಟ್‌ಗೆ ಮಾತ್ರ ಲಭ್ಯವಿದೆ. ಬ್ಯೂಸಿನೆಸ್ ಖಾತೆಯ ವ್ಯವಹಾರ, ಹಾಗೂ ಇತರ ಕಾರಣಗಳಿಂದ ಖಾಸಗಿ ನಂಬರ್ ಬಹಿರಂಗವಾಗದಂತೆ ವ್ಯಾಟ್ಸಆ್ಯಪ್ ಬಳಕೆ ಮಾಡಲು ಸಾಧ್ಯವಿದೆ.
ಖಾಸಗಿ ನಂಬರ್ ಬದಲು ಬ್ಯೂಸಿನೆಸ್ ಖಾತೆ ಹೊಂದಿರು ವ್ಯಾಟ್ಸ್ಆ್ಯಪ್ ಖಾತೆಗಳು ತಮ್ಮ ಕಚೇರಿಯ ಅಥವಾ ತಮ್ಮ ಲ್ಯಾಂಡ್‌ಲೈನ್ ನಂಬರ್ ಬಳಕೆ ಮಾಡಿ ವ್ಯಾಟ್ಸ್ಆ್ಯಪ್ ಖಾತೆಯನ್ನು ನಿರ್ವಹಿಸಬಹುದು. ಇದಕ್ಕಾಗಿ ಕೆಲ ಸ್ಟೆಪ್ಸ್ ಇಲ್ಲಿದೆ.
ಮೊದಲಿಗೆ ನಿಮ್ಮ ಮೊಬೈಲ್‌ಗೆ ವ್ಯಾಟ್ಸ್ಆ್ಯಪ್ ಬ್ಯೂಸಿನೆಸ್ ಖಾತೆಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ರಿಜಿಸ್ಟ್ರೇಶನ್ ವೇಳೆ, ಖಾಸಗಿ ಮೊಬೈಲ್ ನಂಬರ್ ಬದಲು ಲ್ಯಾಂಡ್ ಲೈನ್ ನಂಬರ್ ದಾಖಲಿಸಬೇಕು. ಈ ವೇಳೆ ಆರಂಭಿಕ ಕೋಡ್ ಶೂನ್ಯ ಬಳಸಬಾರದು. ಇದರ ಬದಲು ಇಂಡಿಯಾ ಕೋಡ್ +91 ಬಳಕೆ ಮಾಡಬೇಕು.
ಉದಾಹರಣೆಗೆ ಲ್ಯಾಂಡ್ ಲೈನ್ ಕೋಡ್ 08 ಬದಲು +91 ಬಳಕೆ ಮಾಡಿದರೆ ಮಾತ್ರ ನೋಂದಣಿ ಸಾಧ್ಯ. ಇನ್ನುಳಿದಂತೆ ಲ್ಯಾಂಡ್‌ಲೈನ್ ನಂಬರ್ ದಾಖಲಿಸಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು. ಈ ವೇಳೆ ಒಟಿಪಿ ಕಳುಹಿಸಲಿದೆ. ಆದರೆ ಲ್ಯಾಂಡ್‌ಲೈನ್ ಕಾರಣ ಒಟಿಪಿ ಮೆಸೇಜ್ ಸ್ವೀಕರಿಸಲು ಸಾಧ್ಯವಿಲ್ಲ. ಹೀಗಾಗಿ ಒಟಿಪಿ ಟೈಮ್ ಎಕ್ಸ್‌ಪೈರ್ ಆಗುವವರೆಗೆ ಕಾಯಬೇಕು.
ಬಳಿಕ ಕಾಲ್ ಫಾರ್ ಒಟಿಪಿ ಆಯ್ಕೆ ಮಾಡಿಕೊಳ್ಳಿ. ಈ ವೇಳೆ ನಿಮ್ಮ ಲ್ಯಾಂಡ್‌ಲೈನ್ ನಂಬರ್‌ಗೆ ವ್ಯಾಟ್ಸ್ಆ್ಯಪ್ ಒಟಿಪಿ ಕರೆ ಬರಲಿದೆ. ಈ ಒಟಿಪಿಯನ್ನು ಮೊಬೈಲ್‌ನಲ್ಲಿ ನಮೂದಿಸಿ ವ್ಯಾಟ್ಸ್ಆ್ಯಪ್ ಖಾತೆ ಇನ್ಸ್‌ಸ್ಟಾಲ್ ಮಾಡಿಕೊಳ್ಳಿ
ಇದೀಗ ನಿಮ್ಮ ಮೊಬೈಲ್ ಫೋನ್ ಮೂಲಕ ನೀವು ವ್ಯಾಟ್ಸ್ಆ್ಯಪ್ ಬ್ಯೂಸಿನೆಸ್ ಖಾತೆಯನ್ನು ಬಳಕೆ ಮಾಡಲು ಸಾಧ್ಯವಿದೆ. ಈ ವೇಳೆ ನಿಮ್ಮ ಖಾಸಗಿ ನಂಬರ್ ಬದಲು ಲ್ಯಾಂಡ್‌ಲೈನ್ ನಂಬರ್ ಡಿಸ್‌ಪ್ಲೇ ಆಗಲಿದೆ.