ಡಿ.31ಕ್ಕೆ ಡೆಡ್‌ಲೈನ್ ಎಚ್ಚರಿಕೆ, ಗೂಗಲ್ ಡಿಲೀಟ್ ಮಾಡಲಿದೆ ನಿಮ್ಮ ಅಮೂಲ್ಯ ಫೋಟೋಸ್!

First Published | Dec 28, 2023, 12:32 PM IST

2023ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷ ಬರಮಾಡಿಕೊಳ್ಳಲು ಎಲ್ಲರು ಕಾತರರಾಗಿದ್ದಾರೆ. ಹೊಸ ವರ್ಷದಲ್ಲಿ ಕೆಲ ಹೊಸ ನಿಯಮಗಳು ಜಾರಿಯಾಗುತ್ತಿದೆ. ಈ ಪೈಕಿ ನಿಮ್ಮ ಗೂಗಲ್ ಖಾತೆಯಲ್ಲಿರುವ ಫೋಟೋಗಳು ಡಿಲೀಟ್ ಆಗುವ ಸಾಧ್ಯತೆ ಇದೆ. ಡಿಸೆಂಬರ್ 31, 2023ರ ಡೆಡ್‌ಲೈನ್ ಸಮೀಪಿಸುತ್ತಿದೆ. ಹೀಗಾಗಿ ನಿಮ್ಮ ಅಮೂಲ್ಯ ಫೋಟೋಗಳು ಫೋನ್‌ನ ಗೂಗಲ್ ಫೋಟೋಸ್‌ನಿಂದ ಡಿಲೀಟ್ ಆಗುವ ಮುನ್ನ ಎಚ್ಚೆತ್ತುಕೊಳ್ಳಿ.
 

ಪ್ರತಿಯೊಬ್ಬರ ಫೋನ್‌ನಲ್ಲಿ ಗೂಗಲ್ ಫೋಟೋ ಆ್ಯಪ್, ಗೂಗಲ್ ಕ್ಯಾಲೆಂಡರ್, ಜಿಮೇಲ್, ಡ್ರೈವ್, ಮೀಟ್ ಸೇರಿದಂತೆ ಹಲವು ಗೂಗಲ್ ಆ್ಯಪ್‌ಗಳಿವೆ. ಇವೆಲ್ಲವೂ ಅತ್ಯಂತ ಮುಖ್ಯವಾಗಿದೆ. ಈ ಪೈಕಿ ಗೂಗಲ್ ಫೋಟೋ ಆ್ಯಪ್ ಹಲವು ಸ್ಮರಣೀಯ ಹಾಗೂ ಅತೀ ಮುಖ್ಯ ಪೋಟೋಗಳ ಸಂಗ್ರಹವಾಗಿದೆ.
 

ನಿಮ್ಮ ಫೋನ್ ಮೂಲಕ ತೆಗೆದು ಫೋಟೋ, ವ್ಯಾಟ್ಸ್ಆ್ಯಪ್ ಮೂಲಕ ಬಂದ ಫೋಟೋಗಳನ್ನು ಗೂಗಲ್ ಫೋಟೋ ಆ್ಯಪ್‌ನಲ್ಲಿ ಲಾಗಿನ್ ಆಗುವ ಮೂಲಕ ಭದ್ರವಾಗಿ ಸಂಗ್ರಹಿಸಿ ಇಟ್ಟುಕೊಳ್ಳಬಹದು. ಫೋನ್ ಬದಲಾಯಿಸಿದರೂ ಹಳೇ ಫೋಟೋಗಳು ಖಾತೆಯಲ್ಲಿ ಹಾಗೇ ಇರಲಿದೆ. 

Latest Videos


ಇದೀಗ ಡಿಸೆಂಬರ್ 31, 2023ಕ್ಕೆ ಗೂಗಲ್ ನೀಡಿರುವ ಡೆಡ್‌ಲೈನ್ ಅಂತ್ಯಗೊಳ್ಳುತ್ತಿದೆ. ಹೀಗಾಗಿ ಹೊಸ ವರ್ಷದಿಂದ ಗೂಗಲ್ ನಿಮ್ಮ ಅಮೂಲ್ಯ ಫೋಟೋಗಳನ್ನು ಡಿಲೀಟ್ ಮಾಡುವ ಸಾಧ್ಯತೆ ಇದೆ.

ಹೌದು, ಗೂಗಲ್ ಕ್ಲೌಡ್ ಸ್ಪೇಸ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಲು ಗೂಗಲ್ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಪೈಕಿ 2 ವರ್ಷದಿಂದ ನಿಷ್ಕ್ರೀಯದಿಂದ ಇರುವ ಗೂಗಲ್ ಫೋಟೋ ಆ್ಯಪ್‌ಗಳನ್ನು ಗೂಗಲ್ ಡಿಲೀಟ್ ಮಾಡಲಿದೆ.
 

ಕೇವಲ ಗೂಗಲ್ ಫೋಟೋ ಆ್ಯಪ್ ಮಾತ್ರವಲ್ಲ, ನಿಷ್ಕ್ರೀಯ ಜಿಮೇಲ್ ಕೂಡ ಡಿಲೀಟ್ ಆಗಲಿದೆ. ಕನಿಷ್ಠ 2 ವರ್ಷದಿಂದ ಗೂಗಲ್ ಫೋಟೋ ಆ್ಯಪ್ ಅಥವಾ ಜಿಮೇಲ್ ನಿಷ್ಕ್ರೀಯ ಗೊಂಡಿದ್ದರೆ ಅಂತಹ ಖಾತೆಗಳನ್ನು ಗೂಗಲ್ ಆಟೋಮ್ಯಾಟಿಕ್ ಆಗಿ ಡಿಲೀಟ್ ಮಾಡಲಿದೆ.

ಗೂಗಲ್ ಫೋಟೋಸ್ ಆಟೋಮ್ಯಾಟಿಕ್ ಡಿಲೀಟ್ ಆದರೆ ನಿಮ್ಮ ಎಲ್ಲಾ ಫೋಟೋಗಳು ಮತ್ತೆ ಸಿಗುವುದಿಲ್ಲ. ಹೀಗಾಗಿ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈಗಲೇ ನಿಷ್ಕ್ರೀಯಗೊಂಡಿರುವ ಗೂಗಲ್ ಖಾತೆ, ಆ್ಯಪ್‌ಗಳನ್ನು ಸಕ್ರೀಯ ಮಾಡಿ. 2 ಸ್ಟೆಪ್ ವೆರಿಫಿಕೇಶನ್ ಮೂಲಕ ಮತ್ತೆ ಸಕ್ರೀಯ ಮಾಡಲು ಸಾಧ್ಯವಿದೆ. ಖಾತೆ ಐಡಿ, ಒಟಿಪಿ ಮೂಲಕ ಮತ್ತೆ ಸಕ್ರಿಯ ಮಾಡಿಕೊಳ್ಳಿ.

ನಿಮ್ಮ ಗೂಗಲ್ ಫೋಟೋ ಆ್ಯಪ್ ಕನಿಷ್ಠ 2 ವರ್ಷದಿಂದ ನಿಷ್ಕ್ರೀಯವಾಗಿದೆಯಾ? ಒಮ್ಮೆ ಚೆಕ್ ಮಾಡಿಕೊಳ್ಳಿ. ಗೂಗಲ್ ಫೋಟೋ ಆ್ಯಪ್ ಕ್ಲಿಕ್ ಮಾಡಿ ಖಾತೆ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಿ. ಈಗಾಗಲೇ ನಿಷ್ಕ್ರೀಯ ಖಾತೆಗಳಿಗೆ ನೋಟಿಫಿಕೇಶನ್ ಕಳುಹಿಸುತ್ತಿದೆ. ನಿಷ್ಕ್ರೀಯ ಖಾತೆ ಹಾಗೂ ರಿಕವರಿ ಇಮೇಲ್ ಐಡಿಗೆ ನೋಟಿಫಿಕೇಶನ್ ಕಳುಹಿಸುತ್ತಿದೆ.

ಇತ್ತ ಜಿಮೇಲ್ ಸೇರಿದಂತೆ ಗೂಗಲ್ ಅತೀ ಮುಖ್ಯ ಆ್ಯಪ್‌ಗಳನ್ನು ಪರಿಶೀಲನೆ ಮಾಡಿಕೊಳ್ಳಿ. ಇದರಿಂದ ಅನಗತ್ಯವಾಗಿ ಡಿಲೀಟ್ ಆಗುವ ಪ್ರಕ್ರಿಯೆಯಿಂದ ನಿಮ್ಮ ಖಾತೆ ದೂರ ಉಳಿಯಲಿದೆ.

click me!