ಒಂದೇ ಅಕೌಂಟ್‌ನಿಂದ ಫೇಸ್‌ಬುಕ್‌ನಲ್ಲಿ ಹಲವು ಪ್ರೊಫೈಲ್‌ಗಳನ್ನು ರಚಿಸೋದು ಹೇಗೆ ನೋಡಿ..

First Published | Sep 25, 2023, 6:34 PM IST

ಈಗ ಫೇಸ್‌ಬುಕ್ ಬಳಕೆದಾರರಿಗಾಗಿ ಮೆಟಾ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಇದು ಹಲವು ವೈಯಕ್ತಿಕ ಪ್ರೊಫೈಲ್‌ಗಳನ್ನು ರಚಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. 

ಫೇಸ್‌ಬುಕ್ ಜಗತ್ತಿನ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲೊಂದು. ಈಗ ಫೇಸ್‌ಬುಕ್ ಬಳಕೆದಾರರಿಗಾಗಿ ಮೆಟಾ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಅದೇನಪ್ಪಾ ಅಂತೀರಾ..? ಇದು ಹಲವು ವೈಯಕ್ತಿಕ ಪ್ರೊಫೈಲ್‌ಗಳನ್ನು ರಚಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. 

ಹೌದು, ಫೇಸ್‌ಬುಕ್ ಈಗ ಒಂದೇ ಖಾತೆಯ ಅಥವಾ ಅಕೌಂಟ್‌ ಅಡಿಯಲ್ಲಿ 4 ಹೆಚ್ಚುವರಿ ಪ್ರೊಫೈಲ್‌ಗಳನ್ನು ರಚಿಸಲು ನಿಮಗೆ ಅನುಮತಿಸುತ್ತದೆ. ಪ್ರತಿಯೊಂದೂ ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.
 

Latest Videos


Facebook ನಲ್ಲಿ ಹಲವು ಪ್ರೊಫೈಲ್‌ಗಳು
ಈ ಹೆಚ್ಚುವರಿ ಪ್ರೊಫೈಲ್‌ಗಳು ನಿಮ್ಮ ಆಸಕ್ತಿಗಳು, ಸಮುದಾಯಗಳು ಅಥವಾ ವ್ಯಕ್ತಿಗಳ ವಿವಿಧ ಅಂಶಗಳನ್ನು ಪ್ರತಿನಿಧಿಸಬಹುದು. ಈ ಪ್ರತಿಯೊಂದು ಪ್ರೊಫೈಲ್ ತನ್ನದೇ ಆದ ಸ್ನೇಹಿತರ ಲಿಸ್ಟ್ ಮತ್ತು ಫೀಡ್ ಅನ್ನು ಹೊಂದಿರುತ್ತದೆ. ಮತ್ತು ನೀವು ಪ್ರತಿಯೊಂದು ಅಕೌಂಟ್‌ ಮೂಲಕವೂ ವಿಭಿನ್ನ ಗುಂಪುಗಳು ಮತ್ತು ಪುಟಗಳನ್ನು ಅನುಸರಿಸಬಹುದು. ಆದರೂ, ನೀವು ಫೇಸ್‌ಬುಕ್ ಖಾತೆಗೆ ಸೈನ್ ಅಪ್ ಮಾಡಿದಾಗ ರಚಿಸಲಾದ ನಿಮ್ಮ ಪ್ರಾಥಮಿಕ ಫೇಸ್‌ಬುಕ್ ಪ್ರೊಫೈಲ್ ಕಡ್ಡಾಯವಾಗಿದ್ದು, ಮತ್ತು ಇತರೆ ಪ್ರೊಫೈಲ್‌ಗಳನ್ನು ರಚಿಸಿದ ಬಳಿಕ ಪ್ರಾಥಮಿಕ ಅಕೌಂಟ್‌ ಒಂದನ್ನು ಮಾತ್ರ ಡಿಲೀಟ್‌ ಮಾಡಲಾಗಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಆದರೆ ನಿಮ್ಮ ಸಂಪೂರ್ಣ Facebook ಖಾತೆಯನ್ನು ಡಿಲೀಟ್‌ ಮಾಡುವ ಮೂಲಕ ಮಾತ್ರ ನೀವು ಅದನ್ನು ತೆಗೆದುಹಾಕಬಹುದು.

ಒಂದೇ Facebook ಖಾತೆಯಲ್ಲಿ ಹಲವು ಪ್ರೊಫೈಲ್‌ಗಳನ್ನು ರಚಿಸಲು ಮತ್ತು ಬದಲಾಯಿಸಲು ನಿಮಗೆ ಸಹಾಯ ಮಾಡಲು ಹಂತ-ಹಂತದ ಮಾರ್ಗದರ್ಶಿ ಇಲ್ಲಿದೆ.

ಹೆಚ್ಚುವರಿ ಪ್ರೊಫೈಲ್‌ಗಳಿಗೆ ಲಾಗ್ ಇನ್ ಆಗೋದೇಗೆ?
ನಿಮ್ಮ ಎಲ್ಲಾ ಪ್ರೊಫೈಲ್‌ಗಳನ್ನು ಆಕ್ಸೆಸ್‌ ಮಾಡಲು ನಿಮ್ಮ ಅಸ್ತಿತ್ವದಲ್ಲಿರುವ ಲಾಗಿನ್ ಮಾಹಿತಿಯನ್ನು ನೀವು ಬಳಸಬಹುದು. ಲಾಗ್ ಇನ್ ಮಾಡಿದ ನಂತರ, ನೀವು ಆರಂಭದಲ್ಲಿ ನಿಮ್ಮ ಮುಖ್ಯ ಪ್ರೊಫೈಲ್‌ಗೆ ಹೋಗುತ್ತೀರಿ ಮತ್ತು ನಂತರ ಬಯಸಿದ ಹೆಚ್ಚುವರಿ ಪ್ರೊಫೈಲ್‌ಗೆ ಬದಲಾಯಿಸುತ್ತೀರಿ. ನಿಮ್ಮ ಮುಖ್ಯ ಖಾತೆಯ ಮೂಲಕ ರಚಿಸಲಾದ ಫೇಸ್‌ಬುಕ್‌ ಪ್ರೊಫೈಲ್‌ಗಳನ್ನು ಹೆಚ್ಚುವರಿ ಪ್ರೊಫೈಲ್‌ಗಳಾಗಿ ಪರಿಗಣಿಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆದರೆ, ನೀವು ಸಂಪೂರ್ಣವಾಗಿ ಹೊಸ ಫೇಸ್‌ಬುಕ್‌ ಖಾತೆಯನ್ನು ರಚಿಸಿದ್ದರೆ, ಅದು ನಿಮ್ಮ ಪ್ರಾಥಮಿಕ ಖಾತೆಯಿಂದ ಪ್ರತ್ಯೇಕವಾಗಿರುತ್ತದೆ.

ಇನ್ನೊಂದು ಪ್ರೊಫೈಲ್ ರಚಿಸಿ
ಮೆನು ಆಯ್ಕೆಗಳಲ್ಲಿ, "Create another profile." ("ಮತ್ತೊಂದು ಪ್ರೊಫೈಲ್ ರಚಿಸಿ") ಎಂದು ಹೇಳುವ ಆಯ್ಕೆಯನ್ನು ನೀವು ನೋಡಿ. ನೀವು ಈಗಾಗಲೇ ಹೆಚ್ಚುವರಿ ಪ್ರೊಫೈಲ್ ಹೊಂದಿದ್ದರೆ ಅಥವಾ ಹೊಸ ಪೇಜ್‌ಗಳ ಅನುಭವವನ್ನು ಬಳಸುತ್ತಿದ್ದರೆ, ನಿಮ್ಮ ಪ್ರೊಫೈಲ್ ಹೆಸರಿನ ಮುಂದೆ "Create Facebook profile" ( "ಫೇಸ್‌ಬುಕ್ ಪ್ರೊಫೈಲ್ ರಚಿಸಿ") ಅನ್ನು ನೀವು ನೋಡಬಹುದು. ಈ ಆಯ್ಕೆಯನ್ನು ಕ್ಲಿಕ್ ಮಾಡಿ.

ಪ್ರಾರಂಭಿಸಿ
"ಮತ್ತೊಂದು ಪ್ರೊಫೈಲ್ ರಚಿಸಿ" ಅಥವಾ "ಫೇಸ್‌ಬುಕ್ ಪ್ರೊಫೈಲ್ ರಚಿಸಿ" ಆಯ್ಕೆ ಮಾಡಿದ ನಂತರ, ರಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿಮ್ಮನ್ನು ಕೇಳಲಾಗುತ್ತದೆ. ಮುಂದುವರೆಯಲು "Get started" ("ಪ್ರಾರಂಭಿಸಿ") ಅನ್ನು ಕ್ಲಿಕ್ ಮಾಡಿ.

ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ
ಹೊಸ ಪ್ರೊಫೈಲ್ ರಚಿಸಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ಈ ಹೆಚ್ಚುವರಿ ಪ್ರೊಫೈಲ್‌ಗಾಗಿ ನೀವು ಪ್ರೊಫೈಲ್ ಹೆಸರು ಮತ್ತು @username ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಈ ಹೆಸರುಗಳು Facebook ನ ಕಮ್ಯುನಿಟಿ ಮಾನದಂಡಗಳು ಮತ್ತು ಹೆಚ್ಚುವರಿ ಪ್ರೊಫೈಲ್‌ಗಳ ನೀತಿಗಳಿಗೆ ಬದ್ಧವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.

ಅಗತ್ಯವಿದ್ದರೆ ಪುನರಾವರ್ತಿಸಿ
ನೀವು ಹೆಚ್ಚು ಹೆಚ್ಚುವರಿ Facebook ಪ್ರೊಫೈಲ್‌ಗಳನ್ನು ರಚಿಸಲು ಬಯಸಿದರೆ, ಮೇಲಿನ ಹಂತಗಳನ್ನು ಪುನರಾವರ್ತಿಸಿ.
 

ಪ್ರೊಫೈಲ್‌ಗಳನ್ನು ಬದಲಾಯಿಸೋದು
ಮೆನು ಬಟನ್ ಅನ್ನು ಪ್ರವೇಶಿಸಿ
ನಿಮ್ಮ ಫೇಸ್‌ಬುಕ್‌ ಖಾತೆಗೆ ಲಾಗ್ ಇನ್ ಆಗಿರುವಾಗ, ಮೇಲಿನ ಬಲ ಮೂಲೆಯಲ್ಲಿರುವ ಮೆನು ಬಟನ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಪ್ರೊಫೈಲ್ ಆಯ್ಕೆಮಾಡಿ
ನಿಮ್ಮ ಹೆಸರಿನ ಮುಂದೆ, ನೀವು ಡ್ರಾಪ್‌ಡೌನ್ ಬಾಣವನ್ನು (▼) ನೋಡುತ್ತೀರಿ. ನೀವು ರಚಿಸಿದ ಪ್ರೊಫೈಲ್‌ಗಳ ಪಟ್ಟಿಯನ್ನು ರಿವೀಲ್‌ ಮಾಡಲು ಇದರ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಪ್ರೊಫೈಲ್ ಸೆಲೆಕ್ಟ್‌ ಮಾಡಿ
ಪಟ್ಟಿಯಿಂದ ನೀವು ಬಳಸಲು ಬಯಸುವ ಪ್ರೊಫೈಲ್ ಅನ್ನು ಆಯ್ಕೆಮಾಡಿ. ಅದರ ಅನನ್ಯ ಸ್ನೇಹಿತರ ಪಟ್ಟಿ, ಫೀಡ್ ಮತ್ತು ಸೆಟ್ಟಿಂಗ್‌ಗಳೊಂದಿಗೆ ಆ ಪ್ರೊಫೈಲ್‌ಗೆ ನಿಮ್ಮನ್ನು ಬದಲಾಯಿಸಲಾಗುತ್ತದೆ.

ಫೇಸ್‌ಬುಕ್‌ನ ಕಮ್ಯುನಿಟಿ ಮಾನದಂಡಗಳು ನೀವು ರಚಿಸುವ ಎಲ್ಲಾ ಪ್ರೊಫೈಲ್‌ಗಳಿಗೆ ಅನ್ವಯಿಸುತ್ತವೆ ಎಂಬುದನ್ನು ನೆನಪಿಡಿ. ನಿಮ್ಮ ಯಾವುದೇ ಪ್ರೊಫೈಲ್‌ಗಳಿಂದ ಈ ಮಾನದಂಡಗಳ ಯಾವುದೇ ಉಲ್ಲಂಘನೆಯು ನಿಮ್ಮ ಸಂಪೂರ್ಣ ಫೇಸ್‌ಬುಕ್‌ ಖಾತೆಯ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಪ್ರೊಫೈಲ್‌ಗಳನ್ನು ನೀವು ಜವಾಬ್ದಾರಿಯುತವಾಗಿ ಮತ್ತು ಫೇಸ್‌ಬುಕ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬಳಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ.

ಈ ಹಂತಗಳನ್ನು ಅನುಸರಿಸುವ ಮೂಲಕ, ನೀವು ಒಂದೇ ಫೇಸ್‌ಬುಕ್‌ ಖಾತೆಯಲ್ಲಿ ಹಲವು ಪ್ರೊಫೈಲ್‌ಗಳನ್ನು ರಚಿಸಬಹುದು ಮತ್ತು ನಿರ್ವಹಿಸಬಹುದು. ಪ್ರತಿಯೊಂದೂ ನಿಮ್ಮ ಆನ್‌ಲೈನ್ ಉಪಸ್ಥಿತಿ ಮತ್ತು ಆಸಕ್ತಿಗಳ ವಿಭಿನ್ನ ಅಂಶಗಳಿಗೆ ಅನುಗುಣವಾಗಿರುತ್ತದೆ.
 

click me!