ಭಾರತ ಸೇರಿ ಎಲ್ಲೆಡೆ ಗೂಗಲ್‌ನಿಂದ ಉಚಿತ 5 ಎಐ ಟ್ರೈನಿಂಗ್ ಪ್ರೋಗ್ರಾಂ, ಎಲ್ಲರಿಗೂ ಮುಕ್ತ ಅವಕಾಶ

Published : Oct 24, 2025, 03:33 PM IST

ಭಾರತ ಸೇರಿ ಎಲ್ಲೆಡೆ ಗೂಗಲ್‌ನಿಂದ ಉಚಿತ 5 ಎಐ ಟ್ರೈನಿಂಗ್ ಪ್ರೋಗ್ರಾಂ, ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗಿದೆ. ಇದು ಕಲಿಕಾ ಹಂತದಲ್ಲಿರುವವರಿಗೆ, ವೃತ್ತಿಪರರು, ಶಿಕ್ಷಕರು, ಉದ್ಯಮಿಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವ ಪ್ರೋಗ್ರಾಂ ಆರಂಭಿಸಿದೆ.

PREV
16
ಗೂಗಲ್‌ನಿಂದ ಉಚಿತ ಎಐ ಟ್ರೈನಿಂಗ್

ಎಲ್ಲಾ ಕ್ಷೇತ್ರದಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ (ಎಐ) ಹಾಸು ಹೊಕ್ಕಿದೆ. ಹಲೆವು ಕ್ಷೇತ್ರಗಳು ಸಂಪೂರ್ಣವಾಗಿ ಎಐ ಅವಲಂಬಿತವಾಗಿದೆ. ಎಐ ಪ್ರತಿಯೊಬ್ಬರ ಕೆಲಸದ ವಿಧಾನ ಬದಲಿಸುತ್ತಿದೆ, ಇದಕ್ಕೆ ತಕ್ಕಂತೆ ಎಲ್ಲರೂ ಅಪ್‌ಡೇಟ್ ಆಗಬೇಕಾದ ಅನಿವಾರ್ಯತೆ ಎದುರಾಗಿದೆ. ಹಲವರು ಸ್ವ ಆಸಕ್ತಿಯಿಂದ ಕಲಿಯುತ್ತದ್ದರೆ, ಮತ್ತೆ ಕೆಲವರು ಕೋರ್ಸ್ ಮುಖಾಂತರ ಕಲಿಯುತ್ತಿದ್ದಾರೆ. ಇದರ ನಡುವೆ ಕೆಲವರಿಗೆ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪದ ಕೇಳಿ ಬೆಚ್ಚಿ ಬೀಳುತ್ತಿದ್ದಾರೆ. ಹೀಗಾಗಿ ಇದೀಗ ಗೂಗಲ್ ಮಹತ್ವದ ಎಐ ಟ್ರೈನಿಂಗ್ ಪ್ರೋಗ್ರಾಂ ಆರಂಭಿಸಿದೆ. ಇದು ಸಂಪೂರ್ಣ ಉಚಿತ ಪ್ರೋಗ್ರಾಂ.

26
ಐದು ಎಐ ಟ್ರೈನಿಂಗ್ ಪ್ರೋಗ್ರಾಂ ಲಾಂಚ್

ಗೂಗಲ್ ಇದೀಗ ಒಟ್ಟು ಐದು ಎಐ ಟ್ರೈನಿಂಗ್ ಪ್ರೋಗಾಂ ಆರಂಭಿಸಿದೆ. ಎಲ್ಲಾ ಐದು ಪ್ರೋಗ್ರಾಂ ಉಚಿತವಾಗಿ ಆರಂಭಿಸಿದೆ. ಈ ಮೂಲಕ ವಿದ್ಯಾರ್ಥಿಗಳು, ವೃತ್ತಿಪರರು ಸೇರಿದಂತೆ ಎಲ್ಲಾ ಕ್ಷೇತ್ರದ ಜನರಿಗೆ ಉಚಿತವಾಗಿ ಎಐ ತರಬೇತಿ ನೀಡಲು ಗೂಗಲ್ ಮುಂದಾಗಿದೆ. ಈ ಉಚಿತ ತರಬೇಟಿ ಪ್ರೂಗ್ರಾಂ ಪ್ರತಿಯೊಬ್ಬರು ಅವರ ಕ್ಷೇತ್ರದಲ್ಲಿ ದೈನಂದಿನ ಬಳಕೆಗೆ, ಅವರ ಕೆಲಸಕ್ಕೆ ಉಪಯೋಗಾಗಲಿದೆ ಎಂದಿದೆ.

36
ಗೂಗಲ್ ಉಚಿತ ಐದು ಎಐ ಟ್ರೈನಿಂಗ್ ಪ್ರೋಗ್ರಾಂ
  1. ಪ್ರಾಂಪ್ಟ್ ಎಸೆನ್ಶಿಯಲ್ (6 ಗಂಟೆ -ಉಚಿತ ಆನ್‌ಲೈನ್ ಕೋರ್ಸ್)
  2. ಎಐ ಎಸೆನ್ಶಿಯಲ್ (5 ಗಂಟೆ )
  3. ಸಣ್ಣ ಉದ್ಯಮಕ್ಕೆ ಎಐ
  4. ಶಿಕ್ಷಕರಿಗಾಗಿ ಎಐ ತರಬೇತಿ (ಜಿಮಿನಿ ಸೇರಿ )
  5. ವಿದ್ಯಾರ್ಥಿಗಳಿಗೆ ಎಐ ತರಬೇತಿ
46
ಎಐ ಆ್ಯಪ್‌ಗೆ ಸೂಚನೆ

ಯಾವುದೇ ಎಐ ಆ್ಯಪ್ ಬಳಕೆ ಮಾಡಲು ಸ್ಪಷ್ಟನೆ ಸೂಚನೆ ನೀಡಬೇಕು. ಅಂದರೆ ಪ್ರಾಂಪ್ಟ್‌ಗಳನ್ನು ಸ್ಪಷ್ಟವಾಗಿ ನೀಡಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ.ಎಐಗೆ ಪ್ರಾಂಪ್ಟ್ ನೀಡುವುದು ಹೇಗೆ? ಇದು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದೆ. ಪ್ರಾಂಪ್ಟ್ ಬಳಕೆ ಹೇಗೆ, ಸುಲಭವಾಗಿ ಅತೀ ವೇಗವಾಗಿ ಫಲಿತಾಂಶ ಪಡೆಯುವುದು ಸೇರಿದಂತೇ ಬೆಸಿಕ್ ಕೋರ್ಸ್ ಇದಾಗಿದೆ.

ಎಐ ಆ್ಯಪ್‌ಗೆ ಸೂಚನೆ

56
ಉದ್ಯಮದಿಂದ ಶಿಕ್ಷಣ

ಉದ್ಯಮ ಕ್ಷೇತ್ರದಿಂದ ಶಿಕ್ಷಣ ಕ್ಷೇತ್ರದವರಿಗೆ ಎಲ್ಲರಿಗೂ ಎಐ ಅತ್ಯವಶ್ಯಕವಾಗಿದೆ. ಸಣ್ಣ ಸಣ್ಣ ಉದ್ಯಮಗಳಲ್ಲಿ ಎಐ ಬಳಸಿಕೊಂಡು ಉತ್ಪಾದನೆ ಅಥವಾ ವ್ಯವಹಾರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಸಾದ್ಯವಿದೆ? ಎಐ ಬಳಕೆ ಹೇಗೆ ಅನ್ನೋದ ಕುರಿತು ತರಬೇತಿ ನೀಡಲಾಗತ್ತದೆ. ಇತ್ತ ವಿದ್ಯಾರ್ಥಿಗಳಿಗೆ ಎಐ ಕುರಿತು ಕಲಿಸುವ ಶಿಕ್ಷಕರು ಅಷ್ಟೇ ಅಪ್‌ಡೇಟ್ ಆಗಿರಬೇಕು. ಹೀಗಾಗಿ ಶಿಕ್ಷಕರಿಗೆ ತಕ್ಕ ಪ್ರೋಗ್ರಾಂ ನೀಡಲಾಗುತ್ತದೆ.

ಉದ್ಯಮದಿಂದ ಶಿಕ್ಷಣ

66
ಎಲ್ಲರಿಗೂ ಎಐ ತಲುಪಿಸಲು ಗೂಗಲ್ ಪ್ರಯತ್ನ

ಗೂಗಲ್ ಈಗಾಗಲೇ ಎಐ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದೆ. ಗೂಗಲ್ ಸರ್ಚ್‌ನಲ್ಲೂ ಎಐ ಆಯ್ಕೆ ನೀಡಿದೆ. ಇದೀಗ ಎಲ್ಲರಿಗೂ ಎಐ ಬೇಸಿಕ್ ಮಾಹಿತಿ ಹಾಗೂ ಬಳಕೆ ಕುರಿತು ಅರಿವು ಮೂಡಿಸಲು ಗೂಗಲ್ ಈ ತರಬೇತಿ ಪ್ರೋಗ್ರಾಂ ಮಾಡುತ್ತಿದೆ. ಆಸಕ್ತರು ಉಚಿತವಾಗಿ ರಿಜಿಸ್ಟ್ರೇಶನ್ ಮಾಡಿಕೊಂಡು ಕೋರ್ಸ್‌ ಕಲಿಯಬಹುದು.

ಎಲ್ಲರಿಗೂ ಎಐ ತಲುಪಿಸಲು ಗೂಗಲ್ ಪ್ರಯತ್ನ

Read more Photos on
click me!

Recommended Stories