ಬಳಕೆದಾರರಿಗೆ ಸೇವೆಯ ನೆಪದಲ್ಲಿ ಹಲವು ಆ್ಯಪ್‌ಗಳು ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದೆ. ಇಂತಹ ಆ್ಯಪ್ ಪತ್ತೆ ಹಚ್ಚಿ ನಿಷೇಧಿಸುವ ಕಾರ್ಯಗಳು ನಿರಂತವಾಗಿ ನಡೆಯುತ್ತಿದೆ.
ಇದೀಗ ಭಾರತೀಯರ ಬಳಕೆದಾರರನ್ನು ಟಾರ್ಗೆಟ್ ಮಾಡಿ, ಮಾಹಿತಿ ಕದಿಯುವಿಕೆ, ಬಳಕೆದಾರರಿಗೆ ಮಾನಸಿಕ ಹಿಂಸೆ, ಅಪಾಯದ ಎಚ್ಚರಿಕೆ, ಬೆದರಿಕೆ ಹಾಕುತ್ತಿದ್ದ 17 ಆ್ಯಪ್‌ಗಳನ್ನು ಗೂಗಲ್ ನಿಷೇಧಿಸಿದೆ.
ಭಾರತದಲ್ಲಿ ಲೋನ್ ಆ್ಯಪ್ ಅತೀ ದೊಡ್ಡ ಜಾಲವಾಗಿದೆ. ಈ ಜಾಲದಲ್ಲೇ ಅಷ್ಟೇ ವಂಚನೆಗಳು ನಡೆಯುತ್ತಿದೆ. ಗ್ರಾಹಕರು, ಬಳಕೆದಾರರನ್ನು ವಂಚಿಸಿ, ಅಂತಿಮವಾಗಿ ಬೆದರಿಕೆ ಹಾಕಿ ಜೀವಕ್ಕೆ ಅಪಾಯ ಮಾಡಿದ ಉದಾಹರಣೆಗಳಿವೆ. ಇದೀಗ ಇಂತಹ 17 ಆ್ಯಪ್‌ಗಳನ್ನು ನಿಷೇಧಿಸಲಾಗಿದೆ.
ಎಎ ಕ್ರೆಡಿಟ್, ಅಮೊರ್ ಕ್ಯಾಶ್, ಗೊಯಬಾ ಕ್ಯಾಶ್, ಈಸೀ ಕ್ರೆಡಿಟ್, ಕ್ಯಾಶ್ ವಾವ್, ಕ್ರೆಡಿಸ್ ಬಸ್, ಕ್ಯಾಶ್ ಲೋನ್ ಸೇರಿದಂತೆ 17 ಆ್ಯಪ್‌ಗಳನ್ನು ಗೂಗಲ್ ನಿಷೇಧಿಸಿದೆ.
ಈ ಆ್ಯಪ್‌ಗಳು ಬಳಕೆದಾರರ ವೈಯುಕ್ತಿಕ ಡೇಟಾಗಳನ್ನು ಕದಿಯುತ್ತಿತ್ತು. ಬಳಕೆದಾರರಿಗೆ ವಂಚನೆ ಮಾಡುತ್ತಿತ್ತು. ಬಳಕೆದಾರರ ಎಸ್ಎಂಎಸ್, ಫೋಟೋ, ವೈಯುಕ್ತಿಕ ಮಾಹಿತಿ, ಬ್ರೌಸಿಂಗ್ ಹಿಸ್ಟರಿಯನ್ನೂ ಕದಿಯುತ್ತಿತ್ತು.
ಈ ಡೇಟಾವನ್ನು ಬಳಸಿ ಅದೇ ಬಳಕೆದಾರನಿಗೆ ಬೆದರಿಕೆ ಹಾಕುತ್ತಿತ್ತು. ಬ್ಲಾಕ್‌ಮೇಲ್, ಅತೀಯಾದ ಬಡ್ಡಿದರ, ಸಾಲ ಮರುಪಾವತಿಸಲು ಕಿರುಕುಳ, ಜೀವಕ್ಕೆ ಅಪಾಯ ಒಡ್ಡುವಂತ ಕೆಲಸ ಮಾಡಿದೆ.
ಬರೋಬ್ಬರಿ 12 ಮಿಲಿಯನ್ ಮಂದಿ ಈ ಆ್ಯಪ್‌ಗಳನ್ನು ಡನ್ಲೌಡ್ ಮಾಡಿದ್ದಾರೆ. ಭಾರತ, ಥಾಯ್ಲೆಂಡ್, ಮೆಕ್ಸಿತೋ, ಇಂಡೋನೇಷಿಯಾ, ಈಜಿಪ್ಟ್, ಫಿಲಿಪೈನ್ಸ್ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ ಈ ಆ್ಯಪ್ ಕಾರ್ಯನಿರ್ವಹಿಸುತ್ತಿತ್ತು.
ದೂರು ಬಂದ ಬೆನ್ನಲ್ಲೇ ಗೂಗಲ್ ಈ ಕುರಿತು ಪರಿಶೀಲನೆ ನಡೆಸಿ 12 ಆ್ಯಪ್ ನಿಷೇಧಿಸಿದೆ. ಈಗಗಾಗಲೇ ಗೂಗಲ್ ತನ್ನ ಪ್ಲೇಸ್ಟೋರ್‌ನಿಂದ 200ಕ್ಕೂ ಹೆಚ್ಚು ಲೋನ್ ಆ್ಯಪ್‌ಗಳನ್ನು ನಿಷೇಧಿಸಿದೆ.