ಗ್ರಾಹಕರೇ ಸಾಮಾನ್ಯ ಸಿಮ್ ಕಾರ್ಡ್ ಬದಲು ಇ-ಸಿಮ್ ಬಳಸಿ, ಏರ್‌ಟೆಲ್ CEO ಮಹತ್ವದ ಸಲಹೆ !

First Published | Nov 22, 2023, 5:43 PM IST

ಏರ್‌ಟೆಲ್ ಗ್ರಾಹಕರಿಗೆ ಸಿಇಒ ಗೋಪಾಲ್ ವಿಠಲ್ ಮಹತ್ವದ ಸಲಹೆ ನೀಡಿದ್ದಾರೆ. ಸಾಮಾನ್ಯ ಸಿಮ್ ಕಾರ್ಡ್ ಬದಲು ಇ ಸಿಮ್ ಬಳಕೆಗೆ ಮನವಿ ಮಾಡಿದ್ದಾರೆ. ಅಷ್ಟಕ್ಕೂ ಇ ಸಿಮ್ ಬಳಕೆಯಿಂದ ಅನುಕೂಲಗಳೇನು?

ಫೋನ್ ಇದೀಗ ಜನರ ಅವಿಭಾಜ್ಯ ಅಂಗವಾಗಿದೆ.  ಫೋನ್ ಕಳೆದುಹೋದಾಗ ಸಮಸ್ಯೆಗಳ ಪರಿಹಾರ ಸುಲಭವಲ್ಲ. ಇದೀಗ ಎಲ್ಲಾ ಸಮಸ್ಯೆಗಳಿಗೆ ಉತ್ತರ ಇ ಸಿಮ್ ಕಾರ್ಡ್.

ಏರ್‌ಟೆಲ್ ಸಿಇಒ ಗೋಪಾಲ್ ವಿಠಲ್ ಇಮೇಲ್ ಮೂಲಕ ಎಲ್ಲಾ ಏರ್‌ಟೆಲ್ ಗ್ರಾಹಕರಿಗೆ ಸಲಹೆ ನೀಡಿದ್ದಾರೆ. ಸಾಮಾನ್ಯ ಸಿಮ್ ಕಾರ್ಡ್ ಬದಲು ಇ ಸಿಮ್ ಕಾರ್ಡ್ ಬಳಸುವಂತೆ ಮನವಿ ಮಾಡಿದ್ದಾರೆ. ಇ ಸಿಮ್ ಕಾರ್ಡ್‌ನಿಂದ ಹಲವು ಪ್ರಯೋಜನಗಳಿವೆ. ಸಾಮಾನ್ಯ ಸಿಮ್‌ಕಾರ್ಡ್‌ಗಿಂತ ಹೆಚ್ಚಿನ ಸುರಕ್ಷತೆಯೂ ಇದರಲ್ಲಿದೆ.

Latest Videos


ಇಸಿಮ್ ತಂತ್ರಜ್ಞಾನದಲ್ಲಿ ಕಾರ್ಡ್ ಇರುವುದಿಲ್ಲ, ನಿಮ್ಮ ಮೊಬೈಲ್‌ಗೆ ಸ್ಪೆಷಲ್ ಸಾಫ್ಟ್‌ವೇರ್ ಡಿವೈಸ್ ಹಾಕಲಾಗುತ್ತದೆ. ಹೀಗಾಗಿ ಸಿಮ್ ಸ್ಲಾಟ್‌ನಲ್ಲಿ ಯಾವುದೇ ಕಾರ್ಡ್ ಇನ್ಸರ್ಟ್ ಮಾಡಲು ಇಲ್ಲ. ಸಾಫ್ಟ್‌ವೇರ್ ಮೂಲಕ ಇ ಸಿಮ್ ಕಾರ್ಡ್ ಕೆಲಸ ನಿರ್ವಹಿಸುತ್ತದೆ.
 

ಫೋನ್ ಕಳ್ಳತನವಾದಾಗ ಕಳ್ಳರು ಮೊದಲು ಸಿಮ್ ಹೊರಗೆಸೆಯುತ್ತಾರೆ. ಆದರೆ ಇ ಸಿಮ್‌ ಕಾರ್ಡ್‌ನಲ್ಲಿ ಹೊರಗೆಸೆಯಲು ಏನೂ ಇಲ್ಲ. ಇದರಿಂದ ಕಳ್ಳತನವಾಗಿರುವ ಫೋನ್ ಟ್ರೇಸ್ ಮಾಡಲು ಸುಲಭ. 

ಹಳೇ ಫೋನ್‌ನಿಂದ ಡೇಟಾ ಟ್ರಾನ್ಸ್‌ಫರ್, ಕಾಂಟಾಕ್ಟ್ ಸೇರಿದಂತೆ ಇತರ ದಾಖಲೆಗಳ ಟ್ರಾನ್ಸ್‌ಫರ್ ಅತ್ಯಂತ ಸುಲಭ. ಜೊತೆಗೆ ಇಸಿಮ್ ಕಾರ್ಡ್ ಹೆಚ್ಚು ಸುರಕ್ಷಿತ ಅನ್ನೋದು ಸಾಬೀತಾಗಿದೆ.
 

ಏರ್‌ಟೆಲ್ ಗ್ರಾಹಕರು ಸಾಮಾನ್ಯ ಸಿಮ್ ಕಾರ್ಡ್‌ನಿಂದ ಇಸಿಮ್‌ಗೆ ಬದಲಾಯಿಸಿಕೊಳ್ಳಿ ಎಂದು ಗೋಪಾಲ್ ವಿಠಲ್ ಮನವಿ ಮಾಡಿದ್ದಾರೆ. ಸುಲಭ ಸಂಪರ್ಕ, ಹೆಚ್ಚು ಸುರಕ್ಷಿತ ಎಂದು ವಿಠಲ್ ಹೇಳಿದ್ದಾರೆ.
 

ಏರ್‌ಟೆಲ್ ಆ್ಯಪ್ ಮೂಲಕ ಸುಲಭವಾಗಿ ಸಿಮ್ ಕಾರ್ಡ್‌ನಿಂದ ಇಸಿಮ್‌ಗೆ ಬದಲಾಗಬಹುದು. ಏರ್‌ಟೆಲ್ ಗ್ರಾಹಕರು ಈ ಅವಕಾಶವನ್ನು ಬಳಸಿಕೊಂಡು ಸುಲಭವಾಗಿ ಇಸಿಮ್ ಮಾಡಿಕೊಳ್ಳಿ ಎಂದು ಗೋಪಾಲ್ ವಿಠಲ್ ಇಮೇಲ್ ಮೂಲಕ ಗ್ರಾಹಕರಿಗೆ ಸಲಹೆ ನೀಡಿದ್ದಾರೆ.

ಎಲ್ಲಾ ದಾಖಲೆ, ಔದ್ಯೋಗಿಕ, ಖಾಸಗಿ, ಬ್ಯಾಂಕ್ ಖಾತೆ ನಿರ್ವಹಣೆ, ಹಣ ಪಾವತಿ ಎಲ್ಲವೂ ಇದರಿಂದಲೇ ನಡೆಯುತ್ತಿದೆ. ಆದರೆ ಫೋನ್ ಕಳೆದು ಹೋದಾಗ, ಒಡೆದು ಹೋದಾಗ ಡೇಟಾ ಟ್ರಾನ್ಸ್‌ಫರ್ ಸವಾಲಿನ ಕೆಲಸ. ಆದರೆ ಇ ಸಿಮ್ ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡಿದೆ.

click me!