ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023 ದಿನಾಂಕ ಪ್ರಕಟ: ಐಫೋನ್‌ 14 ಸೇರಿ ಹಲವು ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌!

First Published | Sep 28, 2023, 2:27 PM IST

ಇ ಕಾಮರ್ಸ್ ಪ್ರಮುಖ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ದಿನಾಂಕವನ್ನು ಪ್ರಕಟಿಸಿದ್ದು, ಹಲವು ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. 

ಗೌರಿ - ಗಣೇಶ ಹಬ್ಬ ಸೇಲ್‌ ಮುಗೀತಾ ಬಂತು ಅಂತ ಬೇಜಾರ್‌ ಮಾಡ್ಕೋಬೇಡಿ. ದಸರಾ ಹಬ್ಬ ಹತ್ತಿರ ಬರ್ತಿದೆ ಅಂತ ಫ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ ಬಿಗ್‌ ಬಿಲಿಯನ್‌ ಡೇಸ್‌ ತಮ್ಮ ಡಿಸ್ಕೌಂಟ್‌ ಹಬ್ಬವನ್ನು ಆರಂಭಿಸುತ್ತಿದೆ. ಈ ಪೈಕಿ ಇ ಕಾಮರ್ಸ್ ಪ್ರಮುಖ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಬಗ್ಗೆ ಇಲ್ಲಿದೆ ವಿವರ..

ಹಬ್ಬದ ಋತುವಿನ ಉತ್ಸಾಹವನ್ನು ಹೆಚ್ಚಿಸುವುದರೊಂದಿಗೆ, ಇಕಾಮರ್ಸ್ ಮೇಜರ್ ಫ್ಲಿಪ್‌ಕಾರ್ಟ್ ತನ್ನ ಬಹು ನಿರೀಕ್ಷಿತ ಸೇಲ್ ಈವೆಂಟ್ “ದಿ ಬಿಗ್ ಬಿಲಿಯನ್ ಡೇಸ್” ಅಕ್ಟೋಬರ್ 8 ರಂದು ಪ್ರಾರಂಭವಾಗಲಿದೆ ಎಂದು ಬಹಿರಂಗಪಡಿಸಿದೆ. ಇದರ ಮಾರಾಟವು ಅಕ್ಟೋಬರ್ 8 ರಿಂದ 15 ರವರೆಗೆ ನಡೆಯಲಿದೆ. 

Tap to resize

ಈ ವಾರದ ಆರಂಭದಲ್ಲಿ, ಅಮೆಜಾನ್ ತನ್ನ ಬಹು ನಿರೀಕ್ಷಿತ ಮಾರಾಟ ಕಾರ್ಯಕ್ರಮವಾದ ಗ್ರೇಟ್ ಇಂಡಿಯನ್ ಫೆಸ್ಟಿವಲ್ (ಜಿಐಎಫ್) ಅಕ್ಟೋಬರ್ 10 ರಂದು ಲೈವ್ ಆಗಲಿದೆ ಎಂದು ಬಹಿರಂಗಪಡಿಸಿದ್ದು, ಈಗ ಫ್ಲಿಪ್‌ಕಾರ್ಟ್ ಸಹ ತನ್ನ ದಿನಾಂಕ ಪ್ರಕಟಿಸಿದೆ. ಅಲ್ಲದೆ, ತನ್ನ ಪ್ಲಸ್ ಪ್ರೀಮಿಯಂ ಸದಸ್ಯತ್ವದ ವಿಸ್ತರಣೆಯನ್ನು ಹೊರತಂದಿದ್ದು, ಇದು ಆಯ್ದ ಉತ್ಪನ್ನಗಳ ಮೇಲೆ ಹೆಚ್ಚುವರಿ ರಿಯಾಯಿತಿ, ಮಾರಾಟಕ್ಕೆ ಆರಂಭಿಕ ಪ್ರವೇಶ ಮತ್ತು ಸೂಪರ್‌ಕಾಯಿನ್‌ ಕ್ಯಾಶ್‌ಬ್ಯಾಕ್ ಸೇರಿದಂತೆ ಹೆಚ್ಚುವರಿ ಪ್ರಯೋಜನಗಳನ್ನು ಬಳಕೆದಾರರಿಗೆ ನೀಡುತ್ತದೆ.
 

ಈ ವರ್ಷದ ಪ್ರಮುಖ ಋತುವಿನ ಮಾರಾಟದ ಸಮಯದಲ್ಲಿ ಗ್ರಾಹಕರ ಬೇಡಿಕೆ ಪೂರೈಸಲು ತನ್ನ ಪೂರೈಕೆ ಸರಪಳಿಯನ್ನು ಬಲಪಡಿಸಲು 1 ಲಕ್ಷ ನೇರ ಮತ್ತು ಪರೋಕ್ಷ ಕಾಲೋಚಿತ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಫ್ಲಿಪ್‌ಕಾರ್ಟ್ ಹೇಳಿದೆ. 

ಪ್ರಮುಖವಾಗಿ Apple iPhone ಖರೀದಿದಾರರು ಈ ಮಾರಾಟಕ್ಕಾಗಿ ತೀವ್ರವಾಗಿ ಕಾಯುತ್ತಿದ್ದಾರೆ. ಏಕೆಂದರೆ, ಕಡಿಮೆ ಬೆಲೆಗೆ ನೀವು ಐಫೋನ್‌ಗಳನ್ನು ಇಲ್ಲಿ ಪಡೆಯಬಹುದು. ಕಳೆದ ವರ್ಷ, ಆ್ಯಪಲ್ ಐಫೋನ್ 13 ಭಾರಿ ರಿಯಾಯಿತಿಯಲ್ಲಿ ಲಭ್ಯವಿತ್ತು ಮತ್ತು ಈ ವರ್ಷ, ಐಫೋನ್ 13 ಜತೆಗೆ ಐಫೋನ್ 14ಗೂ ಅತ್ಯಾಕರ್ಷಕ ಡಿಸ್ಕೌಂಟ್‌ ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 8 ರಂದು ಪ್ರಾರಂಭವಾದರೂ, ಇಕಾಮರ್ಸ್ ಪ್ಲಾಟ್‌ಫಾರ್ಮ್ ಡೀಲ್ ಬೆಲೆಗಳನ್ನು ಬಹಿರಂಗಪಡಿಸಲು ಪ್ರಾರಂಭಿಸಿದೆ. ಆ್ಯಪಲ್ ಐಫೋನ್ ರಿಯಾಯಿತಿಯೂ ಅಕ್ಟೋಬರ್ 1 ರಂದು ತನ್ನ ಸೈಟ್‌ನಲ್ಲಿ ಬಹಿರಂಗಗೊಳ್ಳಲಿದೆ ಎಂದು ತಿಳಿದುಬಂದಿದೆ..

2023 ರ ಬಿಗ್ ಬಿಲಿಯನ್ ಡೇಸ್ ಮಾರಾಟಕ್ಕಾಗಿ ಫ್ಲಿಪ್‌ಕಾರ್ಟ್ ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದರರ್ಥ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೊಟಕ್ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸುವ ಖರೀದಿದಾರರು ವಾರ್ಷಿಕ ಮಾರಾಟದ ಸಮಯದಲ್ಲಿ 10% ಇನ್ಸ್ಟಾಂಟ್‌ ಡಿಸ್ಕೌಂಟ್‌ ಪಡೆಯಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಆಯ್ದ ಬ್ಯಾಂಕ್‌ಗಳಲ್ಲಿ 10% ತ್ವರಿತ ಬ್ಯಾಂಕ್ ರಿಯಾಯಿತಿಯು ಗರಿಷ್ಠ 1,500 ರೂ. ಇರುತ್ತದೆ.

ಹಾಗೂ, Paytm ಬಳಕೆದಾರರು ಯುಪಿಐ ಮತ್ತು ವ್ಯಾಲೆಟ್ ವಹಿವಾಟುಗಳಲ್ಲಿ ಖಚಿತವಾದ ಉಳಿತಾಯ ಪಡೆಯುತ್ತಾರೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ವೇಳೆ ಎಲೆಕ್ಟ್ರಾನಿಕ್ಸ್ ಮತ್ತು ಸಂಬಂಧಿತ ಪರಿಕರಗಳ ಮೇಲೆ ಸಾಮಾನ್ಯವಾಗಿ 50-80% ರಿಯಾಯಿತಿಗಳನ್ನು ಒಳಗೊಂಡಿರುತ್ತದೆ. ಈ ಸಮಯದಲ್ಲಿ, ನೀವು ಮೊಬೈಲ್‌, ಲ್ಯಾಪ್‌ಟಾಪ್‌, ಆಡಿಯೋ ಪರಿಕರ, ಆಟಿಕೆ, ಜೀವನಶೈಲಿ, ಫ್ಯಾಷನ್, ಸೌಂದರ್ಯ ಉತ್ಪನ್ನ ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ಕೊಡುಗೆಗಳನ್ನು ಪಡೆಯುತ್ತೀರಿ.

Latest Videos

click me!