ಇಡೀ ವಿಶ್ವವೇ ಇದೀಗ ಆನ್‌ಲೈನ್ ಆಗಿದೆ. ಬಹುತೇಕ ಎಲ್ಲಾ ವ್ಯವಾಹರಗಳು ಆನ್‌ಲೈಲ್ ಮುಖಾಂತರವೇ ನಡೆಯುತ್ತಿದೆ. ಅಂತರ್ಜಾಲ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯುಕ್ತಿ ಮಾಹಿತಿಯನ್ನು ಭದ್ರಪಡಿಸಿಕೊಳ್ಳುವುದು ಸುಲಭದ ಮಾತಲ್ಲ.
ಎಲ್ಲಿ ಮಾಹಿತಿಗಳು ಸೋರಿಕೆಯಾಗುತ್ತದೆ ಅನ್ನುವ ಸಣ್ಣ ಸುಳಿವು ಸಿಗುವುದಿಲ್ಲ. ಜನಸಾಮಾನ್ಯರ ಮಾತು ಪಕ್ಕಕ್ಕಿರಲಿ, ಇದೀಗ ಫೇಸ್‌ಬುಕ್ ಸ್ಥಾಪಕನ ಮಾಹಿತಿಯೇ ಸೋರಿಕೆಯಾಗಿದೆ.
ಇತ್ತೀಚೆಗೆ ಭಾರಿ ಗುಲ್ಲೆಬ್ಬಿಸಿದ ಫೇಸ್‌ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಲ್ಲಿ ಇದೀಗ ಫೇಸ್‌ಬುಕ್ ಸಿಇಓ ಮಾರ್ಕ್ ಜುಕರ್ ಬರ್ಗ್ ಡೇಟಾ ಕೂಡ ಇದೆ. ಮಾರ್ಕ್ ಜುಕರ್ ಬರ್ಗ್ ಫೋನ್ ನಂಬರ್ ಸೇರಿದಂತೆ ಹಲವು ಮಾಹಿತಿಗಳು ಸೋರಿಕೆಯಾಗಿದೆ.
ಬರೋಬ್ಬರಿ 533 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ. ಇದರಲ್ಲಿ ಮಾರ್ಕ್ ಜುಕರ್ ಬರ್ಗ್ ಡೇಟಾ ಕೂಡ ಇದೆ.
ಜುಕರ್ ಬರ್ಗ್ ಮಾಹಿತಿ ಸೋರಿಕೆಗೆ ಸಿಗ್ನಲ್ ಆ್ಯಪ್ ಬಳಕೆ ಕಾರಣ ಅನ್ನೋ ಮಾಹಿತಿ ಬಹಿರಂಗವಾಗಿದೆ. ಈ ಕುರಿತ ಸೆಕ್ಯೂರಿಟಿ ತಜ್ಞ ಡೇವ್ ವಾಕರ್ ಮಾಹಿತಿ ನೀಡಿದ್ದಾರೆ.
ಜುಕರ್ ಬರ್ಗ್ ಮಾಹಿತಿಯೇ ಸೋರಿಕೆಯಾಗಿದೆ ಎಂದರೆ ಇನ್ನುಳಿದ ಬಳಕೆದಾರರ ಗತಿ ಏನು? ಅನ್ನೋ ಪ್ರಶ್ನೆ ಇದೀಗ ಕಾಡುತ್ತಿದೆ. 533 ಮಿಲಿಯನ್ ಫೇಸ್‌ಬುಕ್ ಬಳೆಕೆದಾರರ ಬಹುತೇಕ ಮಾಹಿತಿ ಸೋರಿಕೆಯಾಗಿದೆ ಎಂದು ವರದಿ ಹೇಳುತ್ತಿದೆ.
533 ಮಿಲಿಯನ್ ಫೇಸ್‌ಬುಕ್ ಬಳಕೆದಾರರ ಪೈಕಿ ಭಾರತದ 60 ಲಕ್ಷ( 6 ಮಿಲಿಯನ್) ಫೇಸ್‌ಬುಕ್ ಬಳಕೆದಾರರು ಇದ್ದಾರೆ. ಗರಿಷ್ಠ ಮಾಹಿತಿ ಸೋರಿಕೆಯಾದ ಫೇಸ್‌ಬುಕ್ ಬಳಕೆದಾರರ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದೆ. 32 ಮಿಲಿಯನ್ ಫೇಸ್‌ಬುಕ್ ಬಳೆಕದಾರರ ಮಾಹಿತಿ ಸೋರಿಕೆಯಾಗಿದೆ