ಡಿಜಿಟಲ್ ಮೀಡಿಯಾ ವೇದಿಕೆಗಳು ಭಾರಿ ಜನಪ್ರಿಯಗೊಂಡಿದೆ. ಸಿನಿಮಾ, ವೆಬ್ ಸೀರಿಸಿ ಸೇರಿದಂತೆ ಹಲವು ಮನೋರಂಜನೆ ಕಾರ್ಯಕ್ರಮಗಳು ಇದೀಗ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿದೆ. ಕೆಲ ಚಿತ್ರಗಳು ಕೇವಲ ಒಟಿಟಿ ಮೂಲಕವೇ ಬಿಡುಗಡೆಯಾಗುತ್ತದೆ. ಮನೋರಂಜನೆ ಪ್ಲಾಟ್‌ಫಾರ್ಮ್ ಬದಲಾಗಿದೆ. ಇದಕ್ಕೆ ತಕ್ಕಂತೆ ಭಾರತದಲ್ಲಿ ಹಲವು ಒಟಿಟಿ ಆ್ಯಪ್ ಸೇರಿದಂತೆ ಪ್ಲಾಟ್‌ಫಾರ್ಮ್ ಕೂಡ ಲಭ್ಯವಿದೆ.
ಇದೀಗ ಕೇಂದ್ರ ಸರ್ಕಾರ 2024ರ ಡಿಜಿಟಲ್ ಕಂಟೆಂಟ್ ರೆಗ್ಯುಲೇಶನ್ ಅಡಿಯಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿದೆ. ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಬರೋಬ್ಬರಿ 18 ಜನಪ್ರಿಯ ಒಟಿಟಿ ಆ್ಯಪ್‌ಗಳನ್ನು ಸರ್ಕಾರ ಬ್ಲಾಕ್ ಮಾಡಿದೆ. ಭಾರಿ ಹೂಡಿಕೆಯೊಂದಿಗೆ ಬಿಡುಗಡೆಯಾದ ಕೆಲ ಒಟಿಟಿ ಆ್ಯಪ್‌ಗಳು ಇದೀಗ ಕಂಗಾಲಾಗಿದೆ.
ಪ್ರಮುಖವಾಗಿ 18 ಒಟಿಟಿ ಆ್ಯಪ್ ಭಾರತದ ಐಟಿ ನಿಯಮ ಉಲ್ಲಂಘಿಸಿದೆ. ಕಂಟೆಂಟ್ ಎಲ್ಲೆ ಮೀರಿದೆ. ಸಭ್ಯ ಕೆಂಟೇಟ್ ನೀಡದೆ ನಿಯಮದ ಚೌಕಟ್ಟು ಮೀರಿ ನಡೆದುಕೊಂಡಿದೆ ಎಂದು 18 ಒಟಿಟಿ ಆ್ಯಪ್‌ಗಳನ್ನು ನಿಷೇಧಿಸಿದೆ. 2021ರ ಐಟಿ ನಿಯಮದ ಪ್ರಕಾರ, ಕ್ರಮ ಕೈಗೊಂಡಿದೆ. ಸಾಮಾಜಿಕ ಬದ್ಧತೆ, ಮೌಲ್ಯಯುತ ಕೆಂಟೆಂಟ್ ನೀಡುವಲ್ಲಿ ವಿಫಲವಾದರೆ, ವಿಷಗಳು ನಿಯಮ ಬಾಹಿರವಾಗಿದ್ದರೆ ಅಂತಹ ಕೆಂಟೆಂಟ್‌ಗಳ ಒಟಿಟಿ ಪ್ಲಾಟ್‌ಫಾರ್ಮ್ ನಿಷೇಧಿಸಲಾಗುತ್ತದೆ.
ಸದ್ಯ ನಿಷೇಧಿಸಿರುವ 18ಒಟಿಟಿ ಆ್ಯಪ್‌ಗಳು ಅಶ್ಲೀಲ ಕಂಟೆಂಟ್ ನೀಡುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮಾಹಿತಿ ಮತ್ತು ತಂತ್ರಜ್ಞಾನ ರಾಜ್ಯ ಖಾತೆ ಸಚಿವ ಎಲ್ ಮುರುಗನ್ ಈ ಕುರಿತು ಮಾಹಿತಿ ನೀಡಿದ್ದಾರೆ. ಐಟಿ ಕಾಯ್ದೆಯ 69A ಸೆಕ್ಷನ್ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಎಲ್ ಮುರುಗನ್ ಹೇಳಿದ್ದಾರೆ.
ನಿಷೇಧ ಮಾಡಿರುವ 18 ಆ್ಯಪ್: ಡ್ರೀಮ್ಸ್ ಫಿಲ್ಮ್ಸ್, ವೂವಿ, ಯೆಸ್ಸಮಾ, ಅನ್‌ಕಟ್ ಅಡ್ಡಾ, ಟ್ರೈ ಫ್ಲಿಕ್ಸ್, ಎಕ್ಸ್ ಪ್ರೈಮ್, ನಿಯಾನ್ ಎಕ್ಸ್ ವಿಐಪಿ, ಬೇಶರಾಮ್ಸ್, ಹಂಟರ್ಸ್, ರ್ಯಾಬಿಟ್, ಎಕ್ಸ್‌ಟ್ರಾಮೂಡ್, ನ್ಯೂಫ್ಲಿಕ್ಸ್, ಮೂಡ್ ಎಕ್ಸ್, ಮೊಜ್ ಫ್ಲಿಕ್ಸ್, ಹೂಟ್ ಶೂಟ್ಸ್ ವಿಐಪಿ, ಫುಗಿ, ಚಿಕೂಫ್ಲಿಕ್ಸ್, ಪ್ರೈಮ್ ಪ್ಲೇ ಒಟಿಟಿ ಆ್ಯಪ್‌ಗಳನ್ನು ಬ್ಯಾನ್ ಮಾಡಲಾಗಿದೆ.