ಭಾರತದಲ್ಲಿ ಟೆಲಿಕಾಂ ಸರ್ವೀಸ್ ಕ್ಷೇತ್ರ ಪ್ರತಿ ದಿನ ಪೈಪೋಟಿ ಎದುರಿಸುತ್ತಿದೆ. ಇದರ ನಡುವೆ ಸಂಸ್ಥೆಗಳು ಗ್ರಾಹಕರ ಹಿಡಿದಿಟ್ಟುಕೊಳ್ಳಲು ಆಫರ್ ಮೇಲೆ ಆಫರ್ ನೀಡುತ್ತಿದೆ. ಆದರೂ ಗ್ರಾಹಕರು ಒಂದು ನೆಟ್‌ವರ್ಕ್‌ನಿಂದ ಮತ್ತೊಂದು ನೆಟ್‌ವರ್ಕ್‌ಗೆ ಪೋರ್ಟ್ ಆಗುತ್ತಾರೆ. ಈ ಪೈಪೋಟಿ, ಬೆಲೆ ಏರಿಕೆ, ಆಫರ್ ನಡುವೆ ಇದೀಗ ವೋಡಾಫೋನ್ ಐಡಿಯಾ ಗ್ರಾಹಕರಿಗೆ ಅತೀ ದೊಡ್ಡ ಕೊಡುಗೆ ಘೋಷಿಸಲಾಗಿದೆ. ಈ ಮೂಲಕ ವಿಐ ಗ್ರಾಹಕರ ಕಾಯುವಿಕೆ ಅಂತ್ಯಗೊಂಡಿದೆ.
ವೋಡಾಫೋನ್ ಐಡಿಯಾ ಗ್ರಾಹಕರಿಗೆ ಇದೀಗ 5ಜಿ ಸರ್ವೀಸ್ ಲಭ್ಯವಾಗಿದೆ. ವಿಐ ಇದೀಗ ದೇಶದ ಹಲವು ಭಾಗಗಳಲ್ಲಿ 5ಜಿ ಸರ್ವೀಸ್ ಸೇವೆ ಆರಂಭಿಸಿದೆ. ಈ ಮೂಲಕ ಜಿಯೋ, ಏರ್ಟೆಲ್ ಬಳಿಕ ಇದೀಗ ವೋಡಾಫೋನ್ ಐಡಿಯಾ ಕೂಡ 5ಜಿ ಸರ್ವೀಸ್ ನೀಡುವ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿದೆ.
5ಜಿ ಸರ್ವೀಸ್ ಆರಂಭ ಕುರಿತು ವಿಐ ಘೋಷಣೆ ಮಾಡಿದೆ. ದೇಶದ ಪ್ರಮುಖ ಭಾಗಗಳಲ್ಲಿ 5ಜಿ ಸೇವೆ ನೀಡಲಾಗುತ್ತಿದೆ. ಶೀಘ್ರದಲ್ಲೇ ದೇಶದ ಎಲ್ಲಾ ಭಾಗದಲ್ಲಿ ವಿಐ 5ಜಿ ಸೇವೆ ಲಭ್ಯವಾಗಲಿದೆ ಎಂದು ವೋಡಾಫೋನ್ ಐಡಿಯಾ ಹೇಳಿಕೊಂಡಿದೆ. ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತಾ, ಚೆನ್ನೈ ಸೇರಿದಂತೆ ಪ್ರಮುಖ ನಗರದಳಲ್ಲಿ ವೋಡಾಫೋನ್ ಐಡಿಯಾ 5ಜಿ ಸೇವ ಆರಂಭಗೊಂಡಿದೆ.
ಕೇವಲ ಈ ನಗರ ಮಾತ್ರವಲ್ಲ ಜೈಪುರ, ಪಾಟ್ನಾ, ಹರ್ಯಾಣ ಕರ್ನಲ್, ಲಖನೌ, ಆಗ್ರ, ಇಂದೋರ್, ಅಹಮ್ಮದಾಬಾದ್, ಹೈದರಾಬಾದ್, ಸಿಲಿಗುರಿ, ಜಲಂಧರ್, ಪುಣೆ ಸೇರಿದಂತೆ ಕೆಲ ನಗರದಲ್ಲೂ ಐಫೋಫೋನ್ ಐಡಿಯಾ 5ಜಿ ಸೇವೆ ಲಭ್ಯವಿದೆ. ಇದೀಗ ಗ್ರಾಹಕರು ತಮ್ಮ 4ಜಿ ಸೇವೆಯಿಂದ 5ಸೇವೆಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು.
ವೋಡಾಫೋನ್ ಐಡಿಯಾ 3.3GHz ಹಾಗೂ 26GHz ಸ್ಪೆಕ್ಟ್ರಂ ಬ್ಯಾಂಡ್ ಅಡಿಯಲ್ಲಿ 5ಜಿ ಸೇವೆ ರೋಲ್ ಔಟ್ ಮಾಡಿದೆ. ಪ್ರೀಪೇಯ್ಡ್ ಹಾಗೂ ಪೋಸ್ಟ್ ಪ್ರೇಯ್ಡ್ ಗ್ರಾಹಕರಿಗೆ ಹೊಸ ಸೇವೆ ಲಭ್ಯವಿದೆ. ವೋಡಾಫೋನ್ ಐಡಿಯಾ 5ಜಿ ಸೇವೆ ನಾನ್ ಸ್ಟಾಂಡ್‌ಲೋನ್(NSA) ಮಾದರಿಯಾಗಿದೆ. ಇದೇ ಮಾದರಿಯಲ್ಲಿ ಏರ್ಟೆಲ್ ಕೂಡ ಸೇವೆ ಸಲ್ಲಿಸುತ್ತಿದೆ.
ವೋಡಾಫೋನ್ 2024ರಲ್ಲಿ 5ಜಿ ಸೇವೆ ಆರಂಭಿಸಿದರೆ, ಜಿಯೋ ಹಾಗೂ ಏರ್ಟೆಲ್ 2022ರಲ್ಲಿ 5ಜಿ ಸೇವೆ ಆರಂಭಿಸಿದೆ. ಜಿಯೋ ಹಾಗೂ ಏರ್ಟೆಲ್ ದೇಶದ ಬಹುತೇಕ ಭಾಗದಲ್ಲಿ 5ಜಿ ಸೇವೆ ನೀಡುತ್ತಿದೆ. ಹಲವು ಗ್ರಾಮಗಳಲ್ಲೂ 5ಜಿ ಸೇವೆಗಳು ಲಭ್ಯವಾಗುವಂತೆ ಮಾಡಿದೆ. 2025ರ ಆರಂಭದಲ್ಲಿ ಬಿಎಸ್ಎನ್ಎಲ್ ಕೂಡ 5ಜಿ ಸೇವೆ ಆರಂಭಿಸುತ್ತಿದೆ.