ಸೆಕ್ಯುರಿಟಿ ಕಂಪನಿ ಮ್ಯಾಕ್‌ಅಫೀ ಇತ್ತೀಚೆಗೆ ತನ್ನ ಜಾಗತಿಕ ಹಗರಣ ಸಂದೇಶ ಅಧ್ಯಯನವನ್ನು ಬಿಡುಗಡೆ ಮಾಡಿದೆ. ಈ ವರದಿಯು ಸ್ಮಾರ್ಟ್‌ಫೋನ್ ಬಳಕೆದಾರರನ್ನು ಎಚ್ಚರಿಸಿದ್ದು, ಅಪರಾಧಿಗಳು ನಾಗರಿಕರ ಸಾಧನಗಳನ್ನು ಹ್ಯಾಕ್ ಮಾಡಲು ಅಥವಾ ಹಣ ಕದಿಯಲು ಎಸ್‌ಎಂಎಸ್ ಅಥವಾ ವಾಟ್ಸಾಪ್‌ನಲ್ಲಿ ಕಳುಹಿಸುವ 7 ಅಪಾಯಕಾರಿ ಸಂದೇಶ ಸಾಲುಗಳನ್ನು ಪಟ್ಟಿಮಾಡಿದೆ. 82% ಭಾರತೀಯರು ಇಂತಹ ನಕಲಿ ಸಂದೇಶಗಳ ಮೇಲೆ ಕ್ಲಿಕ್ ಮಾಡಿದ್ದಾರೆ ಅಥವಾ ಖೆಡ್ಡಾಗೆ ಬಿದ್ದಿದ್ದಾರೆ ಎಂದೂ ವರದಿ ಹೇಳುತ್ತದೆ.
ಭಾರತೀಯರು ಪ್ರತಿದಿನ ಇಮೇಲ್, ಟೆಕ್ಸ್ಟ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಸುಮಾರು 12 ನಕಲಿ ಸಂದೇಶಗಳು ಅಥವಾ ವಂಚನೆಗಳನ್ನು ಸ್ವೀಕರಿಸುತ್ತಾರೆ ಎಂದೂ ಅದು ಹೇಳುತ್ತದೆ. ಅಂತಹ 7 ಅಪಾಯಕಾರಿ ಸಂದೇಶಗಳು ಇಲ್ಲಿದ್ದು, ನೀವು ಎಂದಿಗೂ ಕ್ಲಿಕ್ ಮಾಡಬಾರದು.
"ನೀವು ಬಹುಮಾನ ಗೆದ್ದಿದ್ದೀರಿ!"
ನೀವು ಬಹುಮಾನ ಗೆದ್ದಿದ್ದೀರಿ ಎಂದು ಹಾಗೂ ಗೆದ್ದ ಪ್ರಶಸ್ತಿಯನ್ನು ನಿರ್ದಿಷ್ಟಪಡಿಸುವಂತೆ ಈ ಸಂದೇಶವು ಸ್ವಲ್ಪ ಬದಲಾವಣೆಗಳೊಂದಿಗೆ ಬರಬಹುದು. ಆದರೆ ನಿಮಗೆ ಬರುವ ಈ ಸಂದೇಶವು ಸ್ಕ್ಯಾಮ್ (ಹಗರಣವಾಗಿದೆ) ಮತ್ತು ಸ್ವೀಕರಿಸುವವರ ಖಾಸಗಿ ಮಾಹಿತಿ ಅಥವಾ ಹಣವನ್ನು ಕದಿಯುವ 99% ಚಾನ್ಸ್ ಇದೆ ಅನ್ನೋದನ್ನು ನೆನಪಿಡಿ.
ನಕಲಿ ಉದ್ಯೋಗ ನೋಟಿಫಿಕೇನ್ ಅಥವಾ ಆಫರ್‌ಗಳು
ಇದು ಮತ್ತೊಂದು ಅಪಾಯಕಾರಿ ಸಂದೇಶ. ನೆನಪಿಡಿ, ಉದ್ಯೋಗದ ಆಫರ್‌ಗಳು ಎಂದಿಗೂ WhatsApp ಅಥವಾ SMS ನಲ್ಲಿ ಬರುವುದಿಲ್ಲ. ಯಾವುದೇ ವೃತ್ತಿಪರ ಕಂಪನಿಯು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಮ್ಮನ್ನು ಸಂಪರ್ಕಿಸುವುದಿಲ್ಲ. ಆದ್ದರಿಂದ ಇದು ಖಚಿತವಾದ ಹಗರಣವಾಗಿದೆ.
URL ನೊಂದಿಗೆ ಬ್ಯಾಂಕ್ ಎಚ್ಚರಿಕೆ ಸಂದೇಶ (ಲಿಂಕ್ಸ್)
ಸಂದೇಶದಲ್ಲಿರುವ url/ಲಿಂಕ್ ಮೂಲಕ KYC ಪೂರ್ಣಗೊಳಿಸಲು ಬಳಕೆದಾರರನ್ನು ಕೇಳುವ SMS ಅಥವಾ WhatsApp ನಲ್ಲಿ ಸ್ವೀಕರಿಸಿದ ಬ್ಯಾಂಕ್ ಎಚ್ಚರಿಕೆ ಸಂದೇಶಗಳು ಸ್ಕ್ಯಾಮ್ ಆಗಿದೆ. ಅವರು ನಿಮ್ಮ ಹಣ ಕದಿಯುವ ಗುರಿಯನ್ನು ಹೊಂದಿದ್ದಾರೆ.
ನೀವು ಮಾಡದಿರುವ ಖರೀದಿಯ ಕುರಿತು ಮಾಹಿತಿ
ನೀವು ಮಾಡದಿರುವ ಖರೀದಿಯ ಕುರಿತು ಯಾವುದೇ ಅಪ್ಡೇಟ್ಸ್ ಸ್ಕ್ಯಾಮ್ ಆಗಿದೆ. ಅಂತಹ ಸಂದೇಶಗಳನ್ನು ಸ್ವೀಕರಿಸುವವರನ್ನು ಕ್ಲಿಕ್ ಮಾಡಲು ಮತ್ತು ಅವರ ಫೋನ್‌ಗಳನ್ನು ಹ್ಯಾಕ್ ಮಾಡಲು ಪ್ರಚೋದಿಸುವ ರೀತಿಯಲ್ಲಿ ಬರೆಯಲಾಗಿದೆ.
Netflix (ಅಥವಾ ಇತರೆ OTT) ಚಂದಾದಾರಿಕೆ ಅಪ್ಡೇಟ್ಸ್
OTT ಜನಪ್ರಿಯತೆ ಹೆಚ್ಚುತ್ತಿರುವಾಗ, ಸ್ಕ್ಯಾಮರ್‌ಗಳು ನೆಟ್‌ಫ್ಲಿಕ್ಸ್ ಅಥವಾ ಇತರ OTT ಚಂದಾದಾರಿಕೆಗಳ ಬಗ್ಗೆ ಸಂದೇಶ ಕಳುಹಿಸುವ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಇವುಗಳು ಉಚಿತ ಕೊಡುಗೆಗಳು ಅಥವಾ ಸಬ್‌ಸ್ಕ್ರಿಪ್ಶನ್‌ಗಳು ಮುಗಿದ ಮೇಲೆ ರೀಚಾರ್ಜ್ ಮಾಡಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ ಎನ್ನುವ ತುರ್ತು ಸಂದೇಶಗಳಾಗಿರಬಹುದು.
ನಕಲಿ ವಿತರಣಾ ಸಮಸ್ಯೆ ಅಥವಾ ತಪ್ಪಿದ ವಿತರಣೆ, ನೋಟಿಫಿಕೇಷನ್
ತಪ್ಪಿದ ಡೆಲಿವರಿ ಅಥವಾ ಇತರ ವಿತರಣಾ ಸಮಸ್ಯೆಗಳ ಕುರಿತು SMS ಅಥವಾ WhatsApp ನೋಟಿಫಿಕೇಷನ್‌ಗಳು ಸಹ ಅಪಾಯಕಾರಿ. ನೀವು ಖರೀದಿಯನ್ನು ಮಾಡಿದಾಗಲೂ ಇದು ಆಗಿರಬಹುದು.
ಅಮೆಜಾನ್ ಸೆಕ್ಯುರಿಟಿ ಅಲರ್ಟ್ ಅಥವಾ ಖಾತೆ ನವೀಕರಣಗಳಿಗೆ ಸಂಬಂಧಿಸಿದ ಅಧಿಸೂಚನೆ ಸಂದೇಶಗಳು
ನಿಮ್ಮ ಖಾತೆಯಲ್ಲಿನ ಯಾವುದೇ ನವೀಕರಣದ ಕುರಿತು Amazon ಭದ್ರತಾ ಎಚ್ಚರಿಕೆ ಅಥವಾ ಅಧಿಸೂಚನೆ ಸಂದೇಶಗಳು ಸಹ ನಿಮಗೆ ಬಲೆ ಹಾಕು ಯತ್ನಿಸಿದಂತೆ. ಅಂತಹ ಪ್ರಮುಖ ಎಚ್ಚರಿಕೆಗಳಿಗಾಗಿ Amazon ಅಥವಾ ಯಾವುದೇ ಇಕಾಮರ್ಸ್ ಕಂಪನಿಯು SMS ಅಥವಾ WhatsApp ನಲ್ಲಿ ನಿಮ್ಮನ್ನು ಎಂದಿಗೂ ಸಂಪರ್ಕಿಸಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.