ಪೋಷಕರಿಗಿಲ್ಲ ಇನ್ನು ಮಕ್ಕಳ ಪಾಲನೆ ತಲೆನೋವು, ಭಾರತಕ್ಕೆ ಮೊದಲ ಎಐ ತಾಯಿ ಎಂಟ್ರಿ!

Published : Dec 07, 2024, 11:03 AM ISTUpdated : Dec 07, 2024, 11:05 AM IST

ಮಕ್ಕಳ ಓದು, ಹೋಮ್‌ವರ್ಕ್, ಪಾಲನೆ, ಸರಿಯಾದ ಪೋಷಣೆ ಪೋಷಕರಿಗೆ ತಲೆನೋವು. ಇದೀಗ ಊಹೆಗೆ ನಿಲುಕದ ರೀತಿಯಲ್ಲಿ ಭಾರತಕ್ಕೆ ಮೊದಲ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಾಯಿಯ ಎಂಟ್ರಿಯಾಗಿದೆ. 

PREV
17
ಪೋಷಕರಿಗಿಲ್ಲ ಇನ್ನು ಮಕ್ಕಳ ಪಾಲನೆ ತಲೆನೋವು, ಭಾರತಕ್ಕೆ ಮೊದಲ ಎಐ ತಾಯಿ ಎಂಟ್ರಿ!

ವೃತ್ತಿ, ಮನೆ ಹೀಗೆ ಎರಡನ್ನು ನಿಭಾಯಿಸುವ ಪೋಷಕರಿಗೆ ಮಕ್ಕಳ ಪಾಲನೆ, ಆರೈಕೆ ಸವಾಲು. ಅದರಲ್ಲೂ ಶಾಲೆಗೆ ಹೋಗುವ ಮಕ್ಕಳಿದ್ದರೆ ಪೋಷಕರ ಟೆನ್ಶನ್ ಹೆಚ್ಚು. ಇದೀಗ ಪೋಷಕರ ಸಮಸ್ಯೆಗೆ ಉತ್ತರ ನೀಡಲು ಭಾರತಕ್ಕೆ ಮೊದಲ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಾಯಿ ಎಂಟ್ರಿಕೊಟ್ಟಿದೆ. ಇದು ಊಹೆಗೂ ನಿಲುಕದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಎಐ ಇನ್‌ಫ್ಲುಯೆನ್ಸರ್ ತಾಯಿ ಹೆಸರು ಕಾವ್ಯ ಮೆಹ್ರಾ. 

27

ಕಾವ್ಯ ಮೆಹ್ರಾ ಅನ್ನೋ ಎಐ ತಾಯಿಯನ್ನು ಸೃಷ್ಟಿಸಸಲಾಗಿದೆ. ಇದು ಸಂಪೂರ್ಣ ಆರ್ಟಿಫೀಶಿಯಲ್ ಇಂಟಲಿಜೆನ್ಸಸ್ ಬೆಂಬಲಿತ ಮಾಡೆಲ್ ಇನ್‌ಫ್ಲುಯೆನ್ಸರ್ ತಾಯಿ. ಆದರೆ ಮನುಷ್ಯನಿಗಿಂತ ನಿಖರ, ಸ್ಪಷ್ಟತೆ ಹಾಗೂ ಸಂಯಮ, ತಾಳ್ಮೆ, ಆರೆೈಕೆ, ಪಾಲನೆ ಎಲ್ಲವನ್ನೂ ಈ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಾಯಿ ನಿರ್ವಹಿಸುತ್ತಾಳೆ ಅನ್ನೋದು ವಿಶೇಷ. ಯಾವುದೇ ಆ್ಯಂಗಲ್‌ನಿಂದಲೂ ಈಕೆ ಎಐ ತಾಯಿ ಅನ್ನೋದು ಪತ್ತೆ ಹಚ್ಚುವುದು ಸಾಧ್ಯವಾಗುವುದಿಲ್ಲ

37

ಓಬ್ಬಳು ತಾಯಿಗಿರುವ ಎಲ್ಲಾ ಜವಾಬ್ದಾರಿಯನ್ನು ಮಾನವನಗಿಂತ ಅಚ್ಚುಕಚ್ಚಾಗಿ ನಿರ್ವಹಿಸುವ ಸಾಮರ್ಥ್ಯ ಈ ಎಐ ತಾಯಿ ಕ್ಯಾವ್ಯಾ ಮೆಹ್ರಾಗಿದೆ. ಕಲೆಕ್ಟೀವ್ ಆರ್ಟಿಸ್ಟ್ ನೆಟ್‌ವರ್ಕ್ ಕಂಪನಿ ಸಂಸ್ಥಾಪಕ ವಿಜಯ್ ಸುಬ್ರಮಣಿಯಮ್ ಈ ಕ್ಯಾವ್ಯಾ ಮಾರಾನ್ ಎಐ ತಾಯಿ ಸೃಷ್ಟಿಸಿದ್ದಾರೆ. ಇಡೀ ತಂಡ ಸತತ ಪ್ರಯತ್ನಗಳ ಮೂಲಕ ಎಐ ತಾಯಿಯ ಸೃಷ್ಟಿ ಮಾಡಲಾಗಿದೆ.

47

ತಾಯಿ ಎಲ್ಲಾ ಗುಣಗಳನ್ನು ಈ ಕಾವ್ಯ ಮೆಹ್ರಾದಲ್ಲಿ ಮಿಳಿತವಾಗಿದೆ. ಮಕ್ಕಳ ವಯಸ್ಸು, ಅವರಿಗೆ ಯಾವ ಆಹಾರ, ಎಷ್ಟು ಪ್ರೊಟಿನ್ ಸೂಕ್ತ ಎಲ್ಲವನ್ನೂ ಈ ಎಐ ತಾಯಿ ನಿರ್ವಹಿಸುತ್ತಾಳೆ. ಇನ್ನು ಅವರ ವಯಸ್ಸಿಗೆ ತಕ್ಕಂತೆ ಯಾವ ವಿಚಾರವನ್ನು ಕಲಿಸಬೇಕು, ಹೇಗೆ ಕಲಿಸಬೇಕು ಅನ್ನೋದು ಮಾನವರಿಗಿಂತ ಉತ್ತಮವಾಗಿ ಈ ಎಐ ಕಾವ್ಯ ಮೆಹ್ರಾ ತಿಳಿಸಿಕೊಡುತ್ತಾರೆ. 

57

ಮಕ್ಕಳಿಗೆ ಪ್ರತಿ ದಿನ ಎಷ್ಟು ದೈಹಿಕ ಅಭ್ಯಾಸ ಇರಬೇಕು ಅನ್ನೋದು ಈ ಎಐ ಕಾವ್ಯ ಮೆಹ್ರಾ ಹೇಳುತ್ತಾರೆ. ಇಷ್ಟೇ ಅಲ್ಲ ನಿಮ್ಮ ಮಕ್ಕಳಲ್ಲಿ ಸಣ್ಣ ಬದಲಾವಣೆಯನ್ನೂ ಎಐ ಪತ್ತೆ ಹಚ್ಚಲಿದೆ. ಸಂಪೂರ್ಣವಾಗಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ನಿರ್ಮಾಣಗೊಂಡ ಎಐ ತಾಯಿ ಭಾರತಕ್ಕೆ ಬಂದಾಗಿದೆ. ಇನ್ನು ಪ್ರತಿ ಮನೆಯಲ್ಲೂ ಈ ಎಐ ತಾಯಿ ಎಂಟ್ರಿಕೊಟ್ಟರೂ ಅಚ್ಚರಿ ಇಲ್ಲ. ಇದು ಎಐ ತಾಯಿ ಅನ್ನೋದು ಪತ್ತೆ ಹಚ್ಚುವುದು ಸಾಧ್ಯವೇ ಆಗುವುದಿಲ್ಲ. ಅಷ್ಟರಮಟ್ಟಿಗೆ ಈ ಎಐ ತಾಯಿ ಇನ್‌ಫ್ಲುಯೆನ್ಸ್ ಮಾಡಲಿದ್ದಾರೆ.

67

ಮಕ್ಕಳಿಗೆ ಕತೆ ಹೇಳುವುದು, ಅವರನ್ನು ಇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಈ ಕಾವ್ಯಾ ಮೆಹ್ರಾ ನಿರ್ವಹಿಸಲಿದೆ. ಇದು ಟೆಕ್ನಾಲಜಿ ಆವಿಷ್ಕರಣೆ ಮಾತ್ರವಲ್ಲ, ಕ್ಯಾವ್ಯ ರಿಯಲ್ ಲೈಫ್ ಎಕ್ಸ್‌ಪೀರಿಯನ್ಸ್ ತಾಯಿ ಎಂದು ವಿಜಯ್ ಸುಬ್ರಮಣಿಯಮ್ ಹೇಳಿದ್ದಾರೆ. 

77

ಡಿಜಿಟಲ್ ಜಗತ್ತಿನಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಹಲವು ರೀತಿಯಲ್ಲಿ ಬಳಕೆಯಾಗುತ್ತಿದೆ. ಹಲವು ಬಾರಿ ಎಐ ಅಪಾಯ ಹೆಚ್ಚಿಸಿದ ಘಟನೆಗಳು ಇವೆ. ಆದರೆ ಇಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್‌ನ್ನು ಉತ್ತಮ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಮತ್ತೊಂದು ವಿಶೇಷ ಅಂದರೆ ಈಗಾಗಲೇ ಎಐ ತಾಯಿ ಕವ್ಯಾ ಮೆಹ್ರಾ ಇನ್‌ಸ್ಟಾಗ್ರಾಂಗೂ ಕಾಲಿಟ್ಟಿದ್ದಾಳೆ. ಈ ಮೂಲಕ ಭಾರಿ ಫಾಲೋರ್ಸ್ ಕೂಡ ಪಡೆದಿದ್ದಾರೆ. ಸದ್ಯ ಕಾವ್ಯ ಮೆಹ್ರಾ ಡಿಜಿಟಲ್ ಇನ್‌ಫ್ಲುಯೆನ್ಸರ್ ಆಗಿ ಮಕ್ಕಳ ಪಾಲನೆ ಮಾಡಲಿದ್ದಾರೆ. ಆದರೆ ಈ ತಂತ್ರಜ್ಞಾನ ಇಲ್ಲಿಗೆ ನಿಲ್ಲುವ ಲಕ್ಷಣವಿಲ್ಲ. 

Read more Photos on
click me!

Recommended Stories