ಇನ್‌ಸ್ಟಾಗ್ರಾಂ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಾಗಿ, ಅನೇಕರು Instagram ಹಣ ಗಳಿಸುವ ಮಾಧ್ಯಮವಾಗಿ ಬಳಸಲು ಬಯಸುತ್ತಿದ್ದಾರೆ. ಫಾಲೋವರ್ಸ್ ಸಂಖ್ಯೆ ಹೆಚ್ಚಿಸುವುದು, ಜನಪ್ರಿಯತೆ ಪಡೆದುಕೊಳ್ಳುವುದರ ಮೂಲಕ ಇನ್‌ಸ್ಟಾಗ್ರಾಂ ಪ್ರಮುಖ ಆದಾಯದ ವೇದಿಕೆಯಾಗಿ ಮಾರ್ಪಟ್ಟಿದೆ. ಹಲವರು ರೀಲ್ಸ್, ಪೋಸ್ಟ್ ಮೂಲಕವೇ ಜನರನ್ನು ಸೆಳೆಯುತ್ತಿದ್ದಾರೆ. ಈ ಮೂಲಕ ಮಿಲಿಯನ್ ಫಾಲೋವರ್ಸ್ ಪಡೆಯುತ್ತಿದ್ದಾರೆ.
ಇನ್‌ಸ್ಚಾಗ್ರಾಂನಲ್ಲಿ ಹಣ ಗಳಿಸಲು ಕೆಲ ಮಾರ್ಗಗಳಿವೆ. ಹೊಸದಾಗಿ ಕಂಟೆಂಟ್ ಕ್ರಿಯೇಟರ್ ಆಗಿ Instagramಗೆ ಬಂದವರೂ ಆದಾಯದ ಮೂಲವಾಗಿ ಇನ್‌ಸ್ಟಾಗ್ರಾಂ ಬಳಕೆ ಮಾಡಬಹುದು. ಜನಪ್ರಿಯತೆ ಮುಖ್ಯ. ಹಲವರು ಜನಪ್ರಿಯರಾಗಲು, ಅಧಿಕ ಫಾಲೋವರ್ಸ್ ಆಗಲು ಹಲವು ಅಪಾಯಾಕಾರಿ ಕಸರತ್ತು ಮಾಡುತ್ತಾರೆ. ಇದರಿಂದ ಅಪಾಯಕ್ಕೆ ಆಹ್ವಾನ ನೀಡಿದಂತೆ.
ಇನ್‌ಸ್ಟಾಗ್ರಾಂನಲ್ಲಿ ಆದಾಯ ಗಳಿಸಲು ಸಾಧ್ಯವಿದೆ ನಿಜ. ಆದರೆ YouTube ಅಥವಾ Facebookನಂತೆ ಹಣ ಗಳಿಸುವ ರಚನೆ ಇಲ್ಲಿಲ್ಲ. ಬ್ರ್ಯಾಂಡ್ ಪಾರ್ಟ್ನರ್ಶಿಪ್, ಉತ್ಪನ್ನ ಮಾರಾಟ ಮತ್ತು ರೀಲ್ಸ್ ಬೋನಸ್ ಮೂಲಕ ಚೆನ್ನಾಗಿ ಹಣ ಗಳಿಸುವ ಅವಕಾಶ ಇನ್‌ಸ್ಟಾಗ್ರಾಂನಲ್ಲಿದೆ. ನಿಮ್ಮ ಜನಪ್ರಿಯತೆ, ಫಾಲೋವರ್ಸ್, ಕಮೆಂಟ್, ಎಂಗೇಂಜ್‌ಮೆಂಟ್ ಮೂಲಕ ಆದಾಯದ ಪ್ರಮಾಣ ನಿರ್ಧಾರವಾಗುತ್ತದೆ.
ಒಂದು ಅಂಕಿಅಂಶಗಳ ಪ್ರಕಾರ, 10 ಜನರಲ್ಲಿ 7 ಜನರು ಸಾಮಾಜಿಕ ಮಾಧ್ಯಮವನ್ನು ನಂಬಿ ಉತ್ಪನ್ನಗಳನ್ನು ಖರೀದಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲೇ ಹೆಚ್ಚಿನ ಸಮಯ ಕಳೆಯುವ ಕಾರಣ ಎಲ್ಲಾ ಜಾಹೀರಾತುದಾರರ ಮೊದಲ ಆಯ್ಕೆ ಸೋಶಿಯಲ್ ಮೀಡಿಯಾ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಬರವು ಜಾಹೀರಾತು, ಪ್ರಮೋಶನಲ್ ಎಂಡೋರ್ಸಮೆಂಟ್‌ಗಳು ಜನರಿಗೆ ತಲುಪುತ್ತಿದೆ.
ಹಾಗಾಗಿ ಹಲವು ಕಂಪನಿಗಳು ಇನ್ಫ್ಲುಯೆನ್ಸರ್‌ಗಳ ಜೊತೆ ಪಾರ್ಟ್ನರ್ಶಿಪ್ ಮಾಡಿಕೊಂಡು ಆ ಉತ್ಪನ್ನಗಳ ಜಾಹೀರಾತು ನಡೆಸುತ್ತವೆ. ಕಂಪನಿಯ ಗ್ರಾಹಕರು, ಇನ್‌ಸ್ಟಾಗ್ರಾಂನಲ್ಲಿರುವ ವ್ಯಕ್ತಿಗಳ ಫಾಲೋವರ್ಸ್ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಪೇಯ್ಡ್ ಪಾರ್ಟ್ನರ್‌ಶಿಪ್ ಮಾಡಿಕೊಳ್ಳುತ್ತಾರೆ. ಈ ಮೂಲಕ ಇನ್‌ಸ್ಟಾ ಮೂಲಕ ಉತ್ಪನ್ನಗಳ ಪ್ರಚಾರ ಮಾಡಲಾಗುತ್ತದೆ. ಇದು ಆದಾಯದ ಒಂದ ಮೂಲವಾಗಿದೆ.
ಈ ಕ್ಷೇತ್ರದಲ್ಲಿ ಮೈಕ್ರೋ, ಮ್ಯಾಕ್ರೋ ಮತ್ತು ಮೆಗಾ ಇನ್ಫ್ಲುಯೆನ್ಸರ್‌ಗಳು ಹೆಚ್ಚು ಹಣ ಗಳಿಸಬಹುದು. ಪ್ರತಿ ವಿಭಾಗಕ್ಕೂ ಆದಾಯಗಳನ್ನು ನಿಗದಿಪಡಿಸಲಾಗಿದೆ. ನಿಮ್ಮ ಫಾಲೋವರ್ಸ್ ಮೈಕ್ರೋದಲ್ಲಿದ್ದಾರೋ ಅಥವಾ ಮೆಗಾದಲ್ಲಿದ್ದಾರೋ ಅನ್ನೋದರ ಮೇಲೆ ಆದಾಯ ನಿರ್ಧಾರವಾಗುತ್ತದೆ. ಜೊತೆಗೆ ಹಾಕಿದ ಪೋಸ್ಟ್ ಎಷ್ಟು ಜನರಿಗೆ ತಲುಪಿದೆ. ಕಮೆಂಟ್, ಲೈಕ್ಸ್, ಎಂಗೇಂಜ್‌ಮೆಂಟ್‌ಗಳು ಮುಂದಿನ ಬ್ರ್ಯಾಂಡ್ ಪ್ರಮೋಶನ್ ಒಪ್ಪಂದಕ್ಕೆ ಸಹಕಾರಿಯಾಗುತ್ತದೆ.
1 ಸಾವಿರದಿಂದ 10 ಸಾವಿರ ಫಾಲೋವರ್ಸ್ - ನ್ಯಾನೋ ಇನ್ಫ್ಲುಯೆನ್ಸರ್
10 ಸಾವಿರದಿಂದ 1 ಲಕ್ಷ ಫಾಲೋವರ್ಸ್ - ಮೈಕ್ರೋ ಇನ್ಫ್ಲುಯೆನ್ಸರ್
1 ಲಕ್ಷದಿಂದ 10 ಲಕ್ಷ ಫಾಲೋವರ್ಸ್ - ಮ್ಯಾಕ್ರೋ ಇನ್ಫ್ಲುಯೆನ್ಸರ್
10 ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ - ಮೆಗಾ ಅಥವಾ ಸೆಲೆಬ್ರಿಟಿ ಇನ್ಫ್ಲುಯೆನ್ಸರ್
ಆರೋಗ್ಯ, ಫಿಟ್ನೆಸ್, ಪ್ರಯಾಣ, ಫ್ಯಾಷನ್, ವ್ಯಾಪಾರ, ಲಕ್ಸರಿ ಮುಂತಾದ ವಿಭಾಗಗಳಲ್ಲಿ ಹೆಚ್ಚು ಹಣ ಗಳಿಸಬಹುದು. ಒಂದು ಸಮೀಕ್ಷೆಯಲ್ಲಿ, 42% ಇನ್ಫ್ಲುಯೆನ್ಸರ್‌ಗಳು ಪ್ರತಿ ಪೋಸ್ಟ್ ಅಥವಾ ರೀಲ್ಸ್‌ಗೆ 200-400 ಡಾಲರ್‌ಗಳನ್ನು ವಸೂಲಿ ಮಾಡುತ್ತಾರೆ ಎಂದು ಹೇಳಿದ್ದಾರೆ. Instagramನಲ್ಲಿ ರೀಲ್ಸ್ ನೋಡುತ್ತಾ ಸಮಯ ಕಳೆಯುವ ದಿನಗಳು ಮುಗಿದಿವೆ. ವೈಯಕ್ತಿಕ ಖಾತೆಯನ್ನು ವ್ಯಾಪಾರ ಖಾತೆಯನ್ನಾಗಿ ಬದಲಾಯಿಸಿ ಪ್ರತಿ ತಿಂಗಳು ಹೆಚ್ಚು ಹಣ ಗಳಿಸಬಹುದು.