Viral Video: ರೈಲು ಹಳಿ ಮೇಲೆ ಅಪಾಯಕಾರಿ ರೀಲ್ಸ್ ಮಾಡಿ ಕ್ಷಮೆ ಕೇಳಿದ ಯುವತಿ, ಏನಿದೆ ರೈಲ್ವೆ ನಿಯಮ?

Published : Feb 04, 2026, 01:40 PM IST

Dangerous Reels : ಫೇಮಸ್ ಆಗುವ ಭರದಲ್ಲಿ ಅನೇಕರು ಅಪಾಯಕಾರಿ ರೀಲ್ಸ್ ಮಾಡಿ ಅಪಾಯ ತಂದ್ಕೊಳ್ತಿದ್ದಾರೆ. ಈಗಾಗಲೇ ರೀಲ್ಸ್ ಹೆಸರಿನಲ್ಲಿ ಅನೇಕರ ಪ್ರಾಣ ಹೋಗಿದೆ ಇಷ್ಟಾದ್ರೂ ಜನರಿಗೆ ಬುದ್ಧಿ ಬರ್ತಿಲ್ಲ.

PREV
16
ರೀಲ್ಸ್ ಹುಚ್ಚು

ಸೋಶಿಯಲ್ ಮೀಡಿಯಾ ಈಗ ಫುಲ್ ಟೈಂ ವೃತ್ತಿಯಾಗಿದೆ. ಅನೇಕರು ಇದ್ರ ಮೂಲಕ ಲಕ್ಷಾಂತರ ರೂಪಾಯಿ ದುಡಿತಿದ್ದಾರೆ. ಹೊಸ ಹಾಗೂ ಭಿನ್ನ ಕಂಟೆಂಟ್ ನೀಡುವ ಹುಚ್ಚಿನಲ್ಲಿ ಜನರು ಪ್ರಾಣ ಬಲಿ ನೀಡ್ತಿದ್ದಾರೆ. ಅಪಾಯಕಾರಿ ರೀಲ್ಸ್ ಗಳು ಬರೀ ಕಂಟೆಂಟ್ ಕ್ರಿಯೇಟರ್ಸ್ ಪ್ರಾಣ ತೆಗೆಯೋದು ಮಾತ್ರವಲ್ಲ ಅನೇಕರಿಗೆ ಇಂಥ ಅಪಾಯಕಾರಿ ರೀಲ್ಸ್ ಮಾಡಲು ಸ್ಪೂರ್ತಿ ನೀಡ್ತಿದೆ.

26
ರೈಲ್ವೆ ಹಳಿ ಮೇಲೆ ರೀಲ್ಸ್

ಬೆಟ್ಟದ ತುದಿ, ಅಪಾಯಕಾರಿ ಫಾಲ್ಸ್, ರೈಲ್ವೆ ಹಳಿಗಳು ಈಗಿನ ಹುಡುಗ್ರಿಗೆ ರೀಲ್ಸ್ ಸ್ಪಾಟ್ ಆಗಿವೆ. ಪ್ರತಿ ದಿನ ಹತ್ತಾರು ರೈಲು ಓಡಾಟ ನಡೆಸುವ ಅಪಾಯಕಾರಿ ಟ್ರ್ಯಾಕ್ ಗಳಲ್ಲಿ ಜನರು ವಿಡಿಯೋ ಮಾಡ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ರೈಲ್ವೆ ಹಳಿ ಮೇಲೆ ವಿಡಿಯೋ ಮಾಡಿದ್ದ ಯುವತಿಯೊಬ್ಬಳು ರೀಲ್ಸ್ ವೈರಲ್ ಆಗಿದೆ. ಗುಜರಾತ್ನ ಸೂರತ್ನ ಸಚಿನ್ ರೈಲ್ವೆ ನಿಲ್ದಾಣದ ಹತ್ತಿರ ರೈಲ್ವೆ ಹಳಿ ಮೇಲೆ ಕೆಂಪು ಸೂಟ್ ಧರಿಸಿರುವ ಯುವತಿ, ಹಾಡೊಂದಕ್ಕೆ ಫೋಸ್ ನೀಡ್ತಿದ್ದಾಳೆ.

36
ಅಪಾಯಕಾರಿ ಟ್ರ್ಯಾಕ್

ಇದು ಹೈಸ್ಪೀಡ್ ಎಕ್ಸ್ಪ್ರೆಸ್ ರೈಲುಗಳು ಹಗಲು ರಾತ್ರಿ ಹಾದುಹೋಗುವ ಟ್ರ್ಯಾಕ್ ಆಗಿದೆ. ಒಂದ್ವೇಳೆ ಯುವತಿ ವಿಡಿಯೋ ಮಾಡ್ತಿದ್ದಾಗ ರೈಲು ಬಂದಿದ್ರೆ ಆಕೆಯನ್ನು ರಕ್ಷಿಸಲು ಸಾಧ್ಯವಿರಲಿಲ್ಲ. ರೀಲ್ಸ್ ಗಾಗಿ ಇನ್ನೊಂದು ಹುಡುಗಿ ಬಲಿಯಾಗೋದು ನಿಶ್ಚಿತವಾಗಿತ್ತು. ಇತ್ತೀಚಿಗಷ್ಟೆ ಗುಜರಾತ್ನ ರಾಜ್ಕೋಟ್ನಲ್ಲಿ, ವಂದೇ ಭಾರತ್ ರೈಲಿನೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಮೂವರಿಗೆ ರೈಲು ಡಿಕ್ಕಿ ಹೊಡೆದಿದೆ. ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

46
ಕ್ಷಮೆ ಕೇಳಿದ ಯುವತಿ

ರೈಲ್ವೆ ಹಳಿ ಮೇಲೆ ವಿಡಿಯೋ ಮಾಡಿದ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೇಗವಾಗಿ ವೈರಲ್ ಆಗಿತ್ತು. ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಪಾಯಕಾರಿ ರೀಲ್ಸ್ ಬಗ್ಗೆ ಎಚ್ಚರಿಕೆ ನೀಡಿದ್ದರು. ಹುಡುಗಿಗೆ ಈಗ ತನ್ನ ತಪ್ಪಿನ ಅರಿವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹುಡುಗಿ ಎಲ್ಲರ ಕ್ಷಮೆ ಕೇಳಿದ್ದಾಳೆ.

56
ಹುಡುಗಿ ಹೇಳಿದ್ದೇನು?

ನನ್ನ ಹೆಸರು ನೇಹಾ ರಾಜ್ಭರ್. ನಾನು ಸಚಿನ್ ನಿಲ್ದಾಣಕ್ಕೆ ಹೋಗಿದ್ದ ಸಂದರ್ಭದಲ್ಲಿ ವಿಡಿಯೋ ಮಾಡಿ ಅದನ್ನು ಪೋಸ್ಟ್ ಮಾಡುತ್ತಿದ್ದೆ. ರೈಲ್ವೆ ಹಳಿ ಮೇಲೆ ರೀಲ್ಸ್ ಮಾಡೋದು ಕಾನೂನಿಗೆ ವಿರುದ್ಧ ಎಂಬುದು ನನಗೆ ತಿಳಿದಿರಲಿಲ್ಲ. ರೀಲ್ ಪೋಸ್ಟ್ ಮಾಡಿದ ನಂತ್ರ ಸಾಕಷ್ಟು ವಿರೋಧ, ಎಚ್ಚರಿಕೆ ಸಂದೇಶಗಳು ಬಂದಿವೆ. ನನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇನ್ಮುಂದೆ ಮಹಿಳೆ ಆಗಿರಲಿ ಇಲ್ಲ ಪುರುಷನಾಗಿರಲಿ ರೈಲ್ವೆ ಹಳಿ ಮೇಲೆ ಅಥವಾ ಬಳಿ ಯಾವುದೇ ವಿಡಿಯೋವನ್ನು ಮಾಡಬೇಡಿ. ನಾನು ತಪ್ಪು ಮಾಡಿದ್ದೇನೆ, ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹುಡುಗಿ ವಿಡಿಯೋದಲ್ಲಿ ಹೇಳಿದ್ದಾಳೆ.

66
ರೈಲ್ವೆ ಇಲಾಖೆ ನಿಯಮ ಏನು?

ರೈಲ್ವೆ ರಕ್ಷಣಾ ಪಡೆ ನಿಯಮಗಳ ಪ್ರಕಾರ, ರೈಲ್ವೆ ಹಳಿಗಳ ಮೇಲೆ ಅತಿಕ್ರಮಣ ಪ್ರವೇಶ ಹಾಗೂ ವಿಡಿಯೋ ಚಿತ್ರೀಕರಣ ಗಂಭೀರ ಅಪರಾಧ. ರೈಲ್ವೆ ಕಾಯ್ದೆಯ ಸೆಕ್ಷನ್ 147ರ ಅಡಿ ಜೈಲು ಶಿಕ್ಷೆ ಅಥವಾ ಭಾರಿ ದಂಡ ವಿಧಿಸಲಾಗುತ್ತದೆ. ಸಿಸಿಟಿವಿ ರೆಕಾರ್ಡ್ ಮತ್ತು ನೇಹಾ, ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ವಿಡಿಯೋ ಆಧರಿಸಿ ಸೂರತ್ ರೈಲ್ವೆ ಇಲಾಖೆ ನೇಹಾ ಅವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ.

Read more Photos on
click me!

Recommended Stories