Bigg Boss Raghu : ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗಿದೆ. ಈಗ ಪ್ರಪಂಚ ಹೇಗೆ ಕಾಣ್ತಿದೆ, ಏನೆಲ್ಲ ಬದಲಾವಣೆ ಆಗ್ಬೇಕಿದೆ? ಜನರು ಏನು ಮಾಡ್ಬೇಕು ಎನ್ನುವ ಬಗ್ಗೆ ಬಿಗ್ ಬಾಸ್ ರಘು ಸಲಹೆ ನೀಡಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ತಮ್ಮ ಕೆಲಸಕ್ಕೆ ಮರಳಿದ್ದಾರೆ. ವಿನ್ನರ್ ಗಿಲ್ಲಿ, ರಕ್ಷಿತಾ, ಕಾವ್ಯಾ ಸೇರಿದಂತೆ ಕೆಲ ಸ್ಪರ್ಧಿಗಳು ಇವೆಂಟ್ ಗಳಲ್ಲಿ ಬ್ಯುಸಿ. ಮತ್ತೆ ಕೆಲವರು ತಮ್ಮದೇ ಪ್ರಮೋಷನ್ ಕೆಲ್ಸ ಮುಂದುವರೆಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಏನನ್ನಿಸ್ತಾ ಇತ್ತು ಈಗ ಏನೆಲ್ಲ ಬದಲಾವಣೆ ಆಗಿದೆ ಎಂಬುದನ್ನು ಬಿಗ್ ಬಾಸ್ ಸ್ಪರ್ಧಿ ರಘು ಹೇಳಿದ್ದಾರೆ.
27
ಫಿಟ್ನೆಸ್ ರಘು
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ರಘು, ಹಿಂದೆ ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದರು. ಆದ್ರೆ ಬಿಗ್ ಬಾಸ್ ಅವರ ಖ್ಯಾತಿಯನ್ನು ಡಬಲ್ ಮಾಡಿದೆ. ತಮ್ಮ ವ್ಯಕ್ತಿತ್ವದಿಂದಲೇ ರಘು, ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಶಿಸ್ತು ಹಾಗೂ ಪ್ರಾಮಾಣಿಕ ವ್ಯಕ್ತಿ ರಘು, ಫಿಟ್ನೆಸ್ ಟ್ರೈನರ್. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರನ್ನು ಬೆಳಗಿದ್ದ ರಘು ತಮ್ಮ ಫ್ಯಾನ್ಸ್ ಗೆ ಕಿವಿಮಾತು ಹೇಳಿದ್ದಾರೆ.
37
ಮನೆಯೊಳಗಿದ್ದಾಗ ಹೇಗಿದ್ರು?
ಬಿಗ್ ಬಾಸ್ ಮನೆಯೊಳಗಿದ್ದಾಗ ಎಲ್ಲ ಚೇಂಜ್ ಆಗಿದೆ ಅಂತ ಅನ್ನಿಸ್ತಾ ಇತ್ತಂತೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ್ಮೇಲೆ ಏನೂ ಬದಲಾಗಿಲ್ಲ ಎನ್ನುವ ವಾಸ್ತವ ರಘು ಅರಿವಿಗೆ ಬಂದಿದೆ. ಅದೇ ಕೆಲ್ಸ, ಅದೇ ಟ್ರಾಫಿಕ್, ಅದೇ ಮೊಬೈಲ್, ಅದೇ ಟೆನ್ಷನ್ ಹಾಗೆ ಇದೆ ಅಂತ ರಘು ಹೇಳಿದ್ದಾರೆ. ಮನೆಯಲ್ಲಿರುವಾಗ ಹೊರಗಿನ ಪ್ರಪಂಚ ಗೊತ್ತಿರಲಿಲ್ಲ. ಆರಾಮಾಗಿ ಕುಳಿತು ಮಾತನಾಡ್ತಿದ್ವಿ. ಯಾವುದೇ ಟೆನ್ಷನ್ ಇರಲಿಲ್ಲ. ಮೊಬೈಲ್ ಇರಲಿಲ್ಲ. ಲೈಫ್ ಪರ್ಮನೆಂಟ್ ಅಲ್ಲ. ಹಾಗಾಗಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿ, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಿರಿ, ಟೆನ್ಷನ್ ತೆಗೆದುಕೊಳ್ಬೇಡಿ ಅಂತ ರಘು ಹೇಳಿದ್ದಾರೆ.
ರಘು ಸಲಹೆಯನ್ನು ಫ್ಯಾನ್ಸ್ ಒಪ್ಪಿಕೊಂಡಿದ್ದಾರೆ. ಇರೋ ಒಂದು ಜೀವನವನ್ನು ಖುಷಿಯಾಗಿ ಕಳೆಯಬೇಕು. ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ, ರಿಯಲ್ ಜೀವನಕ್ಕೆ ವೆಲ್ ಕಂ, ಶಾಂತವಾದ, ಕಂಪೋಸ್ಡ್ ಆಗಿರುವ, ನಗ್ತಾ ಸುಂದರ ಸಲಹೆ ನೀಡುವ ಹೊಸ ರಘುವನ್ನು ನಾವು ನೋಡ್ತಿದ್ದೇವೆ ಅಂತ ಕೆಲವರು ಕಮೆಂಟ್ಸ್ ಮಾಡಿದ್ದಾರೆ.
57
ಬಿಗ್ ಬಾಸ್ ಪ್ರಯಾಣ
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ನೀಡಿದ್ರೂ ರಘು, ಟಾಪ್ 6 ಸ್ಪರ್ಧಿಗಳಲ್ಲಿ ಒಬ್ಬರಾಗಿ ಫಿನಾಲೆಗೆ ಬಂದಿದ್ದರು. ಆರಂಭದಲ್ಲಿ ಅಶ್ವಿನಿ ಗೌಡ ಜೊತೆ ಜಗಳ ಮಾಡ್ಕೊಂಡು ವಿಲನ್ ರೀತಿ ಇದ್ದ ರಘು ವ್ಯಕ್ತಿತ್ವ, ಸ್ವಭಾವ ಹೋಗ್ತಾ ಹೋಗ್ತಾ ಜನರಿಗೆ ಇಷ್ಟವಾಗಿತ್ತು. ರಘು ಆಕಾರ ದೈತ್ಯವಾಗಿದ್ರೂ ಮನಸ್ಸು ಮೃದು ಅಂತ ಬಿಗ್ ಬಾಸ್ ಸ್ಪರ್ಧಿಗಳು ಸಾಕಷ್ಟು ಬಾರಿ ಹೇಳಿದ್ದಿದೆ.
67
ರಘು ಕಳೆದುಕೊಂಡಿದ್ದು – ಗಳಿಸಿದ್ದು
ರಘು ಬಿಗ್ ಬಾಸ್ ಮನೆಯಲ್ಲಿ 25 ಕೆ.ಜಿ ತೂಕ ಕಳೆದುಕೊಂಡಿದ್ದಾರೆ. ಜಿಮ್ ಬಾಡಿ ಆಗಿರೋದ್ರಿಂದ ಅವರಿಗೆ ಬೇಕಾದಷ್ಟು ಆಹಾರ ಅಲ್ಲಿ ಸಿಗ್ಲಿಲ್ಲ. ಆದ್ರೆ ಜನರ ಪ್ರೀತಿಯನ್ನು ಗಳಿಸಿದ ಖುಷಿ ರಘು ಅವರಿಗಿದೆ. ಬಿಗ್ ಬಾಸ್ ಮನೆಗೆ ಹೋದ್ಮೇಲೆ ಇನ್ಸ್ಟಾಗ್ರಾಮ್ ನಲ್ಲಿ ರಘು ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದೆ. 4 ಕೆ ಫಾಲೋವರ್ಸ್ ರಘು ಹೊಂದಿದ್ದಾರೆ.
77
ದರ್ಶನ್ ರಘು ಸಂಬಂಧ
ರಘು ಇಷ್ಟೊಂದು ಯಶಸ್ಸು ಕಾಣಲು ದರ್ಶನ್ ಕಾರಣವಂತೆ. ಜಿಮ್ ಉದ್ಘಾಟನೆ ಮಾಡಿ ಸಿನಿಮಾದಲ್ಲಿ ದರ್ಶನ್ ಅವಕಾಶ ನೀಡಿಲ್ಲ ಅಂದ್ರೆ ನಾನು ಇಲ್ಲಿಯವರೆಗೂ ಬರ್ತಾನೇ ಇರಲಿಲ್ಲ ಅಂತ ಬಿಗ್ ಬಾಸ್ ಮನೆಗೆ ಹೋಗುವ ಮುನ್ನವೇ ರಘು ಹೇಳಿದ್ದರು.