Published : Jul 04, 2025, 05:56 PM ISTUpdated : Jul 04, 2025, 06:07 PM IST
Viral Trend: ಗರ್ಭಾವಸ್ಥೆಯಲ್ಲಿ ಹೆಚ್ಚಿನ ಮಹಿಳೆಯರ ಮನಸ್ಸಿಗೆ ಬರುವ ಮೊದಲ ಪ್ರಶ್ನೆ ಎಂದರೆ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಗಂಡು ಮಗುವೋ ಅಥವಾ ಹೆಣ್ಣು ಮಗುವೋ?. ಈ ಪ್ರಶ್ನೆಗೆ ಉತ್ತರ ತಿಳಿಯಲು ಇತ್ತೀಚಿನ ದಿನಗಳಲ್ಲಿ ಜನರು ವೈದ್ಯರ ಬಳಿಗೆ ಹೋಗುತ್ತಿಲ್ಲ ಬದಲಾಗಿ ಎಲೆಕೋಸಿನ ಮೊರೆ ಹೋಗುತ್ತಿದ್ದಾರೆ.
ಗರ್ಭಾವಸ್ಥೆಯು ಮಹಿಳೆಯ ಜೀವನದಲ್ಲಿ ಒಂದು ಪ್ರಮುಖ ಹಂತವಾಗಿದೆ. ಈ ಹಂತವು ಗರ್ಭದಲ್ಲಿ ಭ್ರೂಣವು ಬೆಳವಣಿಗೆ ಹೊಂದುವ ಸಮಯ. ಅಂದಹಾಗೆ ಗರ್ಭಾವಸ್ಥೆಯಲ್ಲಿ ಅನೇಕ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಸಂಭವಿಸಲಿದ್ದು, ಇದು ಮಹಿಳೆಯ ಜೀವನದಲ್ಲಿ ಒಂದು ವಿಶಿಷ್ಟ ಅನುಭವವಾಗಿದೆ. ಇಂತಹ ಸಮಯದಲ್ಲಿ ಹೆಚ್ಚಿನ ಗರ್ಭಿಣಿಯರ ಮನಸ್ಸಿನಲ್ಲಿ ಬರುವ ಮೊದಲ ಪ್ರಶ್ನೆ ಎಂದರೆ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಗಂಡು ಮಗುವೋ ಅಥವಾ ಹೆಣ್ಣು ಮಗುವೋ?. ಈ ಪ್ರಶ್ನೆಗೆ ಉತ್ತರವನ್ನು ತಿಳಿಯಲು, ಇತ್ತೀಚಿನ ದಿನಗಳಲ್ಲಿ ಜನರು ವೈದ್ಯರ ಬಳಿಗೆ ಹೋಗುತ್ತಿಲ್ಲ, ಬದಲಿಗೆ ಅವರ ಅಡುಗೆಮನೆಯಲ್ಲಿರುವ ಎಲೆಕೋಸಿನ ಬಳಿ ಹೋಗುತ್ತಿದ್ದಾರೆ.
24
ಏನಿದು ಕ್ಯಾಬೇಜ್ ಅಥವಾ ಎಲೆಕೋಸು ಪರೀಕ್ಷೆ?
ಇತ್ತೀಚಿನ ದಿನಗಳಲ್ಲಿ ಈ ಪ್ರವೃತ್ತಿ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಈ ಪರೀಕ್ಷೆಯಲ್ಲಿ ಕೆಂಪು ಎಲೆಕೋಸು ಅಥವಾ ರೆಡ್ ಕ್ಯಾಬೇಜ್ ಮತ್ತು ಗರ್ಭಿಣಿ ಮಹಿಳೆಯ ಮೂತ್ರವನ್ನು ಬಳಸಲಾಗುತ್ತದೆ. ಹೇಗೆಂದರೆ ಈ ಟೆಸ್ಟ್ ಮಾಡಲು ಮೊದಲಿಗೆ ಕೆಂಪು ಎಲೆಕೋಸು ಮತ್ತು ಅದರ ನೀರನ್ನು ಬೇರ್ಪಡಿಸಲಾಗುತ್ತದೆ. ಅಂದರೆ ಈ ನೀರನ್ನು ತಣ್ಣಗಾಗಿಸಿ, ಮಹಿಳೆಯ ಮೂತ್ರದ ಕೆಲವು ಹನಿಗಳನ್ನು ಇದರಲ್ಲಿ ಸೇರಿಸಲಾಗುತ್ತೆ. ಈಗ ಆ ನೀರಿನ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗಿದರೆ, ಗರ್ಭದಲ್ಲಿ ಬೆಳೆಯುತ್ತಿರುವ ಮಗು ಗಂಡು ಮಗು ಎಂದು ನಂಬಲಾಗುತ್ತದೆ. ಆದರೆ ನೀಲಿ ಅಥವಾ ನೇರಳೆ ಬಣ್ಣದಲ್ಲಿದ್ದರೆ ಅದು ಹೆಣ್ಣು ಮಗು ಎಂದು ಹೇಳಲಾಗುತ್ತದೆ.
34
ಇದು ನಿಜಕ್ಕೂ ವೈಜ್ಞಾನಿಕವೇ?
ಈ ಪರೀಕ್ಷೆ ವೈಜ್ಞಾನಿಕವಾಗಿ ಕನ್‌ಫರ್ಮ್ ಆಗಿಲ್ಲ. ವಾಸ್ತವವಾಗಿ ಕೆಂಪು ಎಲೆಕೋಸು pH ಸೂಚಕವನ್ನು ಹೊಂದಿರುತ್ತದೆ. ಇದು ಯಾವುದೇ ರೀತಿಯ ಆಮ್ಲೀಯ ಮೂತ್ರದ ಬಣ್ಣವನ್ನು ಬದಲಾಯಿಸಬಹುದು. ಪ್ರತಿಯೊಬ್ಬ ವ್ಯಕ್ತಿಯ ಮೂತ್ರದ pH ವಿಭಿನ್ನವಾಗಿರುತ್ತದೆ, ಆದ್ದರಿಂದ ಅದರ ಬಣ್ಣವು ಬದಲಾಗಬಹುದು. ಆದರೆ ಇದು ಲಿಂಗದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
44
ಜನರು ಏಕೆ ಪರೀಕ್ಷಿಸುತ್ತಿದ್ದಾರೆ?
ಜನರು ಇದನ್ನು ಒಂದು ಫನ್ ಆಗಿ ಪ್ರಯೋಗ ಮಾಡುತ್ತಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಯಾವುದೇ ವೈಜ್ಞಾನಿಕ ಫಲಿತಾಂಶಕ್ಕಾಗಿ ಅಲ್ಲ, ಕುತೂಹಲ ಮತ್ತು ಫನ್‌ಗಾಗಿ. ಅನೇಕ ದಂಪತಿಗಳು ಇದನ್ನು ಲಿಂಗ ಬಹಿರಂಗಪಡಿಸುವಿಕೆಯಲ್ಲಿ ಬಳಸುತ್ತಿದ್ದಾರೆ. ಕೇವಲ ಮೋಜಿಗಾಗಿ ಮತ್ತು ನೆನಪಿನಲ್ಲಿ ಉಳಿಯಲು ಮಾತ್ರ.