ಗೆಳೆಯನೊಂದಿಗೆ ಜಲಕ್ರೀಡೆಯಲ್ಲಿ ತೊಡಗಿದ್ದಾಗ ಇಬ್ಬರು ಯುವತಿಯರ ನಡುವೆ ಶುರುವಾದ ಜಗಳ

Published : May 23, 2026, 09:04 AM IST

ಗೆಳೆಯನೊಂದಿಗೆ ಈಜುಕೊಳದಲ್ಲಿ ಮೋಜು ಮಾಡುತ್ತಿದ್ದ ಯುವತಿಯನ್ನು ಮತ್ತೋರ್ವ ಯುವತಿ ಪ್ರಶ್ನಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV
15
ಲಲನೆಯರ ಕಿತ್ತಾಟ

ಗೆಳೆಯನೊಂದಿಗೆ ಜಲಕ್ರೀಡೆಯಲ್ಲಿ ತೊಡಗಿದ್ದಾಗ ಯುವತಿಯರಿಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ನೀನ್ಯಾಕೆ ಇಲ್ಲಿಗೆ ಬಂದೆ? ನಿನ್ನನ್ನು ಇಲ್ಲಿಗೆ ಕರೆದವರು ಯಾರು ಎಂದು ಇಬ್ಬರು ಯುವತಿಯರು ಕಿತ್ತಾಡಿಕೊಂಡಿದ್ದಾರೆ. ಈಜುಕೊಳದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.

25
2 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದ ವಿಡಿಯೋ

ವೈರಲ್ ವಿಡಿಯೋವನ್ನು @Memes_022 ಹೆಸರಿನ ಎಕ್ಸ್ ಖಾತೆಯಲ್ಲಿ ಮೇ 22 ರಂದು ಸಂಜೆ 4.45ಕ್ಕೆ ಶೇರ್ ಮಾಡಿಕೊಳ್ಳಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋಗೆ 2.09 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದ್ದು, ಹಾಗೆಯೇ ವೀಕ್ಷಕರು ತಮ್ಮ ಅಭಿಪ್ರಾಯವನ್ನು ಸಹ ಕಮೆಂಟ್ ರೂಪದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದ್ರೆ ವೈರಲ್ ವಿಡಿಯೋದಲ್ಲಿ ಏನಿದೆ ಎಂದು ನೋಡೋಣ ಬನ್ನಿ.

35
ವೈರಲ್ ವಿಡಿಯೋದಲ್ಲಿ ಏನಿದೆ?

ಈಜುಕೊಳದಲ್ಲಿ ಕಪ್ಪು ಜಾಕೆಟ್ ಧರಿಸಿದ ಯುವತಿ ಜೊತೆ ಯುವಕ ಮೋಜು ಮಸ್ತಿ ಮಾಡುತ್ತಿರುತ್ತಾನೆ. ಈ ವೇಳೆ ಅಲ್ಲಿಗೆ ಬಂದ ವೈಟ್ ಟೀಶರ್ಟ್ ಧರಿಸಿದ ಯುವತಿ, ನೀನ್ಯಾಕೆ ಇಲ್ಲಿಗೆ ಬಂದಿದೆ ಎಂದು ಪ್ರಶ್ನೆ ಮಾಡುತ್ತಾಳೆ. ಯುವಕ ಆಕೆ ತನ್ನ ಸ್ವಇಚ್ಛೆಯಿಂದ ಇಲ್ಲಿಗೆ ಬಂದಿದ್ದಾಳೆ ಎಂದು ಹೇಳಿ ಪಕ್ಕಕ್ಕೆ ಸರಿದುಕೊಳ್ಳುತ್ತಾನೆ.

45
ಮಾತಿನ ಚಕಮಕಿ

ನಂತರ ಇಬ್ಬರು ಯುವತಿಯರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಆಗ ಕಪ್ಪು ಜಾಕೆಟ್ ಧರಿಸಿದ ಯುವತಿ, ಈತನೇ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದು ಅಂತಾಳೆ. ಆಗ ಯುವಕ ಇಲ್ಲ ಎಂಬಂತೆ ತಲೆಯಾಡಿಸುತ್ತಾನೆ. ನೀನು ಹೆಚ್ಚು ನಾಟಕವೆಲ್ಲಾ ಮಾಡಬೇಡ ಎಂದು ಯುವಕನಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇದು ಕೇವಲ 34 ಸೆಕೆಂಡ್‌ನ ವಿಡಿಯೋ ಆಗಿದ್ದು, ಮುಂದೇನಾಯ್ತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

55
ಈ ವಿಡಿಯೋ ಎಲ್ಲಿಯದ್ದು?

ಈ ವಿಡಿಯೋ ಎಲ್ಲಿಯದ್ದು? ಇದು ತಮಾಷೆಗಾಗಿ ಮಾಡಿದ ವಿಡಿಯೋನಾ ಎಂಬುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು, ಸರಿಯಾದ ಸಮಯಕ್ಕೆ ಯುವಕ ತಗ್ಲಾಕೊಂಡಿದ್ದಾನೆ. ಹಾಗಾಗಿ ಪಕ್ಕಕ್ಕೆ ಹೋಗಿದ್ದಾನೆ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೋರ್ವ ಯುವತಿಯರು ನಗುತ್ತಿದ್ದಾರೆ. ಹಾಗಾಗಿ ಇದೊಂದು ರೀಲ್ಸ್ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ನಿಜವಾದ ಘಟನೆಯೇ ಅಥವಾ ರೀಲ್ಸ್‌ಗಾಗಿ ಮಾಡಿದ ವಿಡಿಯೋವೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

Read more Photos on
click me!

Recommended Stories