ಮೊಬೈಲ್ ನೋಡಿ ಕುರುಡಾದ ವಿದ್ಯಾರ್ಥಿನಿ ವಿಡಿಯೋ ಮಾಡಿ ಕ್ಷಮೆ ಕೇಳಿದ ಶಿಕ್ಷಕಿ ವಂದನಾ ರೈ ಕಾರ್ಕಳ!

Published : Jul 15, 2025, 06:36 PM ISTUpdated : Jul 15, 2025, 07:09 PM IST

ಮೊಬೈಲ್ ಬಳಕೆಯಿಂದ ಮಕ್ಕಳ ಕಣ್ಣು ಕುರುಡಾಗುವ ಬಗ್ಗೆ ವಂದನಾ ರೈ ಟೀಚರ್ ಮಾಡಿದ್ದ ವಿಡಿಯೋಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ಕ್ಷಮೆ ಯಾಚಿಸಿದ್ದಾರೆ. ವಿಡಿಯೋವನ್ನು ಡಿಲೀಟ್ ಮಾಡಿದ್ದು, ಅವರ ಮುಂದಿನ ಹೇಳಿಕೆ ದಾಖಲಿಸಿದ್ದಾರೆ.

PREV
112

ಮೊಬೈಲ್ ಬಳಕೆಯಿಂದ ಮಕ್ಕಳ ಕಣ್ಣು ಕುರುಡಾಗಿದೆ ಎಂದು ಬಾಲಕಿಯ ಕಣ್ಣಿಗೆ ಅಂಧರಂತೆ ಬಟ್ಟೆ ಕಟ್ಟಿಕೊಂಡು ಬಂದು ಶಾಲೆಯೊಂದರಲ್ಲಿ ಜಾಗೃತಿ ಮೂಡಿಸಿದ್ದ ವಂದನಾ ರೈ ಟೀಚರ್ ಇದೀಗ ಕ್ಷಮೆಯನ್ನೂ ಕೇಳಿದ್ದಾರೆ. ಜೊತೆಗೆ, ತಾವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೋವನ್ನು ಡಿಲೀಟ್ ಮಾಡಿ, ಸಲಹೆ ನೀಡಿದವರಿಗೆ ಧನ್ಯವಾದವನ್ನೂ ಹೇಳಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ತಿರುಗೇಟೂ ಕೊಟ್ಟಿದ್ದಾರೆ.

212

ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ವೀಕ್ಷಣೆ ಗೀಳಿಗೆ ಅಂಟಿಕೊಂಡಿದ್ದಾರೆ. ಅದನ್ನು ಬಿಡಿಸಲು ಹೇಗಾದರೂ ಉಪಾಯದ ಜಾಗೃತಿ ವಿಡಿಯೋ ಮಾಡಬೇಕೆಂದು ಉಪಾಯ ಮಾಡಿದ್ದಾರೆ. ಆಗ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಅತಿಯಾಗಿ ಮೊಬೈಲ್ ವೀಕ್ಷಣೆ ಮಾಡಿದ್ದರಿಂದ ಆಕೆಯ ಕಣ್ಣು ಕುರುಡಾಗಿದೆ ಎಂದು ಬಿಂಬಿಸುವಂತೆ ಕಣ್ಣಿಗೆ ಶಸ್ತ್ರಚಿಕಿತ್ಸೆ ಮಾಡಿದ ರೀತಿಯಲ್ಲಿ ಬಟ್ಟೆ ಕಟ್ಟಿಕೊಂಡು ಬಂದು ಶಾಲಾ ಮಕ್ಕಳ ಮುಂದೆ ನಿಲ್ಲಿಸಿದ್ದಾರೆ.

ಮಕ್ಕಳು ಮೊಬೈಲ್ ನೋಡಿ ಕಣ್ಣು ಕುರುಡಾಗಿದ್ದಾಳೆ ಎಂಬ ದೃಶ್ಯವನ್ನು ನೋಡಿದ ಕೆಲವು ಮಕ್ಕಳು ಭಯಭೀತರಾಗಿ ಕಣ್ಣೀರಿಟ್ಟಿದ್ದಾರೆ. ಇನ್ನು ಕೆಲವರು ಮೊಬೈಲ್ ಮುಟ್ಟುವುದಿಲ್ಲ ಎಂದು ಅಳುತ್ತಾ ಹೇಳಿದ್ದಾರೆ. ಇದೆಲ್ಲವೂ ವಿಡಿಯೋದಲ್ಲಿ ಸೆರೆಯಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಶಿಕ್ಷಕಿಗೆ ಕೆಟ್ಟದಾಗಿ ಕಾಮೆಂಟ್ ಬರಲು ಶುರುವಾದವು. ಆಗ ಮಾನಸಿಕ ತಜ್ಞರಾದ ಭಂಡಾರಿ ಅವರು ಮಕ್ಕಳ ಮೇಲಾಗುವ ಪರಿಣಾಮದ ಬಗ್ಗೆ ಶಿಕ್ಷಕಿಗೆ ತಿಳಿಸಿದ್ದಾರೆ.

ನೆಟ್ಟಿಗರು, 'ಕೋವಿಡ್ ಅವಧಿ ಸೇರಿದಂತೆ ವಿವಿಧ ತುರ್ತು ಸಮಯದಲ್ಲಿ ಮಕ್ಕಳು ಮೊಬೈಲ್ ಮೂಲಕವೇ ಶಿಕ್ಷಣ ಕಲಿತಿದ್ದಾರೆ. ನಿಮ್ಮ ಸಂದೇಶ ತಪ್ಪಾಗಿ ಹೋಗುತ್ತಿದೆ ಎಂಬ ವಿರೋಧಗಳು ಕೂಡ ಬಂದಿದ್ದವು.  ಇನ್ನು ಕೆಲವರು ನೀವು ಕಾರ್ಕಳ ಶಿಕ್ಷಕಿ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ ಎಂದೂ ಜರಿದಿದ್ದರು.

ಇದರ ಬೆನ್ನಲ್ಲಿಯೇ ಶಿಕ್ಷಕಿ ವಂದನಾ ರೈ ಅವರು, ನಾನು ಮಕ್ಕಳಿಗೆ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಈ ಪ್ರಯತ್ನ ಮಾಡಲಾಗಿತ್ತು. ಆದರೆ, ಈ ವಿಡಿಯೋ ಮಾಡುವುದಕ್ಕೂ ಮುನ್ನ ಅದರ ಸಾಧಕ ಬಾಧಕ ಅರಿತುಕೊಳ್ಳಬೇಕಿತ್ತು. ಇದೀಗ ನನ್ನ ವಿಡಿಯೋ ಡಿಲೀಟ್ ಮಾಡಿಯಾಗಿದೆ ಎಂದು ಶಿಕ್ಷಕಿ ವಂದನಾ ರೈ ಅವರು ಬರೆದುಕೊಂಡಿದ್ದಾರೆ.

312

ವಂದನಾ ಟೀಚರ್ ಹಂಚಿಕೊಂಡ ಸಂದೇಶ:

ತಾಳಿದವನು ಬಾಳಿಯಾನು!!!

'ನನ್ನ ತಪ್ಪನ್ನು ಪ್ರೀತಿಯ ಸಂದೇಶದ ಮೂಲಕ ನನ್ನ ಗಮನಕ್ಕೆ ತಂದ ಪಿ.ವಿ. ಭಂಡಾರಿ (P V Bhandary) ಸರ್ ಇವರಿಗೆ ಖಂಡಿತ ನಾನು ಗೌರವ ಕೊಡುತ್ತೇನೆ. ಅದು ಬಿಟ್ಟು ನನ್ನನ್ನು ಬಂಡವಾಳವಾಗಿಟ್ಟುಕೊಂಡು ಗೀಚಿದವರಿಗೆ ಖಂಡಿತ ನಾನು ಯಾವತ್ತೂ ತಲೆ ಬಾಗುವುದಿಲ್ಲ. ನಾನು ಇರೋದೇ ನನ್ನ ಮಕ್ಕಳಿಗೋಸ್ಕರ. ಇನ್ನು ಮುಂದೆ ನಾನು ಬದುಕುವುದು ಹೀಗೆಯೇ ನನ್ನೊಂದಿಗೆ ಜೊತೆ ನಿಂತ ಎಲ್ಲರಿಗೂ ಮನದಾಳದ ಧನ್ಯವಾದಗಳ ನ್ನು ಸಮರ್ಪಿಸುತ್ತಿದ್ದೇನೆ.

ವಿಡಿಯೋ ಇಲ್ಲಿದೆ

412

'ನಾವು ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಜಾಗೃತಿ (Mobile Awareness) ಬಗ್ಗೆ ಮಾಡಿದ ವಿಡಿಯೋಗೆ ಅಂತಿಮ ಚುಕ್ಕಿ ನೀಡಿ ಆಗಿದೆ. ಯಾರ ಗಮನಕ್ಕೆ ತರಬೇಕು ಅವರಿಗೆ ತಂದಾಗಿದೆ. ತಪ್ಪು ಎಲ್ಲರೂ ಮಾಡುತ್ತಾರೆ. ಅದನ್ನು ಹೇಳುವ ರೀತಿ ಮಾತ್ರ ಸರಿ ಇರಬೇಕು. ಪ್ರೀತಿಯಿಂದ ಹೇಳಿದವರಿಗೆ ಎಲ್ಲರಿಗೂ ತಲೆಬಾಗುತ್ತೇನೆ. ನಮ್ಮ ವಿಡಿಯೋದಿಂದ ಯಾರಿಗಾದರೂ ನೋವಾಗಿದ್ದಲ್ಲಿ ಖಂಡಿತಾ ಕ್ಷಮೆ ಇರಲಿ' ಎಂದು ವಂದನಾ ಟೀಚರ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

512

ಕೋವಿಡ್‌ನಲ್ಲಿ ಮಕ್ಕಳು ಆನ್‌ಲೈನ್ ಕ್ಲಾಸ್ ಪಾಠ ಕೇಳಿದ್ದೇ ಮೊಬೈಲ್‌ನಲ್ಲಿ:

ಅಬ್ದುಲ್ ಅಜೀಜ್ ಎನ್ನುವವರು 'ಕೋವಿಡ್ ಸಂದರ್ಭದಲ್ಲಿ ಎಲ್ಲಾ ಶಾಲೆಗಳು ಅನಿವಾರ್ಯವಾಗಿ ಮುಚ್ಚಿದಾಗ ತನ್ನ ವಿಶಿಷ್ಟ ಶೈಲಿಯ ಆನ್ಲೈನ್ ಕ್ಲಾಸ್ ಮುಖಾಂತರ ಬಹುತೇಕ ಶಾಲಾ ಮಕ್ಕಳ ಹಾಗೂ ಪೋಷಕರ ಮನ ಗೆದ್ದು ಕರ್ನಾಟಕದಾದ್ಯಂತ ಮಾತ್ರವಲ್ಲದೆ ದೇಶ ವಿದೇಶಗಳಲ್ಲೂ ತನ್ನ ಛಾಪನ್ನು ಹರಡಿಸಿ ಜನಪ್ರಿಯಗೊಂಡ ತಾವು ಅಂದಿನಿಂದ ಇಂದಿನವರೆಗೆ ನಿರಂತರ ಪರಿಶ್ರಮದ ಮೂಲಕ ಮೇಲೇರುತ್ತಾ ಬಂದಿದ್ದು ನಮ್ಮೂರಿಗೆ ಹೆಮ್ಮೆಯ ವಿಷಯ. ಇತ್ತೀಚಿನ ದಿನದವರೆಗೂ ನಿಜ ಜೀವನದಲ್ಲಿ ಹಾಗೂ ಪ್ರತಿಯೊಂದು ವಿಡಿಯೋದಲ್ಲೂ ಶಾಲಾ ಮಕ್ಕಳೊಂದಿಗೆ ಅಪಾರ ಕಾಳಜಿ ಹಾಗೂ ಪ್ರೀತಿಯನ್ನು ತೋರ್ಪಡಿಸುತ್ತಾ ಎಲ್ಲಾ ಮಕ್ಕಳನ್ನು ಮನಸನ್ನು ಗೆದ್ದಿರುವುದರಲ್ಲಿ ಯಾವುದೇ ಸಂಶಯವಿಲ್ಲ.

612

ಮನುಷ್ಯನಾದ ಮೇಲೆ ತಪ್ಪು ಘಟಿಸೋದು ಸಹಜ:

ಮಕ್ಕಳು ಅತಿಯಾಗಿ ಮೊಬೈಲ್ ಉಪಯೋಗಿಸುವುದನ್ನು ತಡೆಯುವ ಪ್ರಯತ್ನವಾಗಿ ಮೊನ್ನೆ ನಿರ್ಮಿಸಿದ ವಿಡಿಯೋವನ್ನು ಮಾತ್ರ ಈ ಬಾರಿ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಅನ್ನೋ ಕಾಳಜಿಯಿಂದ ಹಲವರು ವಿರೋಧಿಸಿದ್ದಾರೆ. ಮನುಷ್ಯ ಅಂದ್ಮೇಲೆ ತಪ್ಪುಗಳು ಘಟಿಸೋದು ಸಹಜ. ಹಾಗಂತ ಆ ಒಂದು ತಪ್ಪಿನಿಂದಾಗಿ ತಾವು ಮಕ್ಕಳೊಂದಿಗೆ ಇಷ್ಟು ವರ್ಷಗಳಿಂದ ತೋರ್ಪಡಿಸುತ್ತಾ ಬಂದಿರುವ ಪ್ರೀತಿಗೆ ಎಂದೂ ಚ್ಯುತಿ ಬಾರದು. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸುತ್ತಾ ಮತ್ತೊಮ್ಮೆ ತಮ್ಮ ಅಪಾರ ಪ್ರತಿಭೆಯನ್ನು ಕರ್ನಾಟಕದಾದ್ಯಂತ ಪಸರಿಸುತ್ತಾ ಮನೆ ಮಾತಾಗಿ ಎಂದು ಶುಭ ಹಾರೈಸೋಣ' ಎಂದು ಅಬ್ದುಲ್ ಅಜೀಜ್ ಕಾಮೆಂಟ್ ಮಾಡಿದ್ದಾರೆ.

712

ಸಣ್ಣ ಪ್ರಮಾದಕ್ಕೆ ಕ್ಷಮೆ ಕೇಳಿದ್ದು ದೊಡ್ಡತನ:

ವಿಘ್ನೇಶ್ ಸೇಠ್ ಎನ್ನುವವರು, 'ಅವರ ಮಕ್ಕಳ ಮೇಲಿನ ಪ್ರೀತಿ, ಕಲಿಕೆಯಲ್ಲಿ ಹೊಸತನದ ವಿಡಿಯೊಗಳನ್ನು ನೋಡಿದ್ದೆವೆ. ಮಕ್ಕಳಿಗೆ ಅತಿಯಾದ ಮೊಬೈಲ್ ಬಳಕೆಯಿಂದ ಆಗುವ ಅನಾಹುತವನ್ನು ಮಕ್ಕಳ ಮನಸ್ಸಿಗೆ ಯಾವ ಅರ್ಥವಾಗುವ ರೀತಿಯಲ್ಲಿ ನಾಟಬಹುದು ಎಂಬರ್ಥದಲ್ಲಿ ವಿಡಿಯೋ ಮಾಡಿದ್ದಾರೆ ಹೊರೆತು ಬೇರೆ ಅರ್ಥಕ್ಕಲ್ಲ ಎಂಬುದು ಎಲ್ಲರಿಗೂ ಗೊತ್ತು. 

ಇಲ್ಲಾದ ಸಣ್ಣ ಪ್ರಮಾದಕ್ಕೆ ಅವರು ಕ್ಷಮೆ ಸಹ ಕೇಳಿದ್ದು ಅವರ ದೊಡ್ಡತನ. ಅದನ್ನೆ ದೊಡ್ಡ ವಿಷಯವನ್ನಾಗಿ ಮಾಡಿದ್ದು ಅವರವರ ಮನಸ್ಥಿತಿ ಅಷ್ಟೆ!! ಆ ಅರ್ಥದಲ್ಲಿ ನೋಡಿದರೆ 'ಗುಮ್ಮ ಬಂದು ತಿಂದು ಹೊಗ್ತಾನೆ' ಅಂತ ಮನೆಯಜನ ಮಕ್ಕಳಿಗೆ ಹೆದರಿಸುವದೂ ತಪ್ಪೆ!! ಎಂದು ವಂದನಾ ಟೀಚರ್‌ಗೆ ಅಭಯ ನೀಡಿದ್ದಾರೆ.

812

ಮೊಬೈಲ್ ಒಳ್ಳೆಯ ರೀತಿಯಲ್ಲಿ ಬಳಸುವ ವಿಡಿಯೋ ಮಾಡಬೇಕಿತ್ತು:

ರಮೇಶ್ ದೇಲಂಪಾಡಿ ಎನ್ನುವವರು, 'ಮಕ್ಕಳಿಗಾಗಿ ವಂದನಾ ಮೇಡಂ ತಯಾರಿಸಿದ ಬಹುತೇಕ ವಿಡಿಯೋಗಳು ಚೆನ್ನಾಗಿರುತ್ತವೆ.ಸದಭಿರುಚಿಯದ್ದೂ ಆಗಿರುತ್ತದೆ.ಅದಕ್ಕಾಗಿ ಅಭಿನಂದನೀಯರು. ಮೊಬೈಲ್ ಬಳಕೆ ಬಗೆಗೆ ಸಮಾಜ ಒಟ್ಟಾರೆಯಾಗಿ ಋಣಾತ್ಮಕ ದೃಷ್ಟಿಕೋನ ಹೊಂದಿದೆ. ಮೊಬೈಲ್ ಅಂತ ಮಾತ್ರ ಅಲ್ಲ, ಯಾವುದೇ ಹೊಸತನ್ನೂ ಸಮಾಜ ,ಬಹುತೇಕ ಸಂದರ್ಭಗಳಲ್ಲೂ, ಋಣಾತ್ಮಕವಾಗಿಯೇ ನೋಡುವುದು. 

ಆದರೆ ಯಾವತ್ತಿಗೂ ತಂತ್ರಜ್ಞಾನದ ಬಗ್ಗೆ ಋಣಾತ್ಮಕ ನಿಲುವು ವ್ಯಕ್ತಪಡಿಸುವುದು, ಹೊಂದಿರುವುದು ಸರಿಯಲ್ಲ. ಅದನ್ನು ಗುಣಾತ್ಮಕವಾಗಿ ಹೇಗೆ ಬಳಸಿಕೊಳ್ಳ ಬೇಕೆಂಬ ಚಿಂತನೆ , ಪ್ರಚಾರ ಬೇಕಾದ್ದು. ಮುಂದಿನ ದಿನಗಳಲ್ಲಿ ಅವುಗಳಿಗೆ ಸಂಬಂಧಿಸಿದಂತೆ ವಂದನಾ ಮೇಡಂರವರಿಂದ ವಿಡಿಯೋಗಳು ಬರುತ್ತವೆ ಅಂತ ಆಶಿಸುತ್ತೇನೆ' ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

912

ವಂದನಾ ಟೀಚರ್ ಬಗ್ಗೆ ಶಿಕ್ಷಕ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ಅಭಿಪ್ರಾಯ!

ವಂದನಾ ರೈ ಕಾರ್ಕಳ....2016ರಿಂದ ಇವರನ್ನು ನಾನು ನೋಡಿದ್ದೇನೆ, ಶಿಕ್ಷಣ ಇಲಾಖೆಯ ಯಾವುದೇ ಕಾರ್ಯಕ್ರಮ-ಸಮಾರಂಭಕ್ಕೆ ಬಂದ್ರೆ ಅತ್ಯಂತ ಚಟುವಟಿಕೆಯಿಂದಿರುವ ಒಬ್ಬ ಉತ್ಸಾಹಿ ಶಿಕ್ಷಕಿ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಇವರು ತನ್ನ ಪ್ರತಿಭೆಯಿಂದಲೇ ಲಕ್ಷಾಂತರ ಮಕ್ಕಳ ಮನಸ್ಸನ್ನು ಸೂರೆಗೊಳಿಸಿದವರು. ಬದುಕಿನ ಪ್ರತಿಕ್ಷಣವನ್ನು ಸಂಭ್ರಮದಿಂದ ಅನುಭವಿಸುತ್ತಿದ್ದ ಇವರು ಕೋವಿಡ್ ಸಮಯದಲ್ಲಿ ಮಾಡಿರುವಂತಹ ನೃತ್ಯದ ಅನೇಕ ವಿಡಿಯೋ ತುಣುಕುಗಳು ದೇಶವಲ್ಲದೆ ವಿದೇಶವನ್ನು ತಲುಪಿರುವುದು ಕೂಡ ಇವರ ನಾಟ್ಯ ಮಾಂತ್ರಿಕತೆಗೆ ಸಾಕ್ಷಿ....

ವಿದ್ಯಾರ್ಥಿಗಳ ಜೊತೆಗೆ ಪೋಷಕರು ಅವರ ಮನೆಯವರು, ಸಾಂಸ್ಕೃತಿಕ ಚಿಂತಕರೆಲ್ಲರೂ ಇವರ ಅಭಿಮಾನಿಯಾಗಿದ್ದು ಕೂಡ ಸುಳ್ಳಲ್ಲ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಸಾಕಷ್ಟು ಮಾನ-ಸಂಮಾನಗಳು ಇವರನ್ನು ಅರಸಿ ಬಂದರೂ ಇವರ ವ್ಯಕ್ತಿತ್ವದಲ್ಲಿ ಒಂದಿಂಚು ಬದಲಾವಣೆಯಾಗಲಿಲ್ಲ. ಯಾರೇ ಸಿಕ್ಕಿದರು ಅದೇ ಸರಳತೆಯಿಂದ ಮಾತನಾಡುವ ಇವರು ಬದಲಾಗುವ ಹುಡುಗಿಯೂ ಅಲ್ಲ. ಇವರು ಮಾಡಿರುವ ಒಂದೊಂದು ವಿಡಿಯೋವನ್ನು ಮಿಲಿಯನ್ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದಾಗಲೂ ಕೊಬ್ಬಿ ಅಹಂಕಾರ ಪ್ರದರ್ಶಿಸಿದವರಲ್ಲ.

ಮುಂದುವರೆಯುತ್ತದೆ…..

1012

ಬಡತನವಿದ್ದರೂ ಬಾಲ್ಯದಿಂದಲೂ ತಾನು ಶಿಕ್ಷಕಿ ಆಗಬೇಕೆನ್ನುವ ಕನಸಿಗೆ ರೆಕ್ಕೆ ಕಟ್ಟಿ ಯಶಸ್ಸನ್ನ ಸಂಪಾದನೆ ಮಾಡಿಕೊಂಡಿರುವ ವಂದನಾ ರೈ ಇವತ್ತು ಕರಾವಳಿಯ ಪ್ರಸಿದ್ಧ ಐಕಾನ್ ಆಗಿದ್ದಾರೆ. ನಮ್ಮ ಸಂಸ್ಕೃತಿಯನ್ನು ಪಸರಿಸುವ ಧಿರಿಸನ್ನು ಧರಿಸಿಕೊಂಡು ಇವರು ಮಾಡುವ ನೃತ್ಯ ನಿಜಕ್ಕೂ ಸರ್ವಾತ್ರ ಮಾದರಿ. ರಿಯಾಲಿಟಿ ಕಾರ್ಯಕ್ರಮಗಳಲ್ಲಿಯೂ ಕೂಡ ಭಾಗವಹಿಸಿ ಸೈ ಅನಿಸಿಕೊಂಡವರು. ಇವರನ್ನು ಎಲ್ಲರೂ ಒಪ್ಪಿಕೊಳ್ಳಬೇಕಂತಲ್ಲ ಕಡಿಮೆ ಸಮಯದಲ್ಲಿ ಇವರ ಅಪ್ರತಿಮ ಸಾಧನೆಯನ್ನು ನೋಡಿ ಅಸೂಹೆ ಪಟ್ಟವರು ಸಾಕಷ್ಟು ಜನ ಯಾಕಂದರೆ ಅದು ಮನುಷ್ಯನ ಸಹಜ ಗುಣ. ಟೀಕೆಗಳನ್ನು ತಿಪ್ಪೆಗೆಸೆದು ತನ್ನ ಕಾಯಕದಲ್ಲಿ ಮಗ್ನರಾಗಿರುವ ಇವರನ್ನು ರೀಲ್ಸ್ ರಾಣಿ ಅಂತ ಕರೆದಾಗಲೂ ಕೂಡ ಚಿಂತಿಸಿದವರಲ್ಲ ಏಕೆಂದರೆ ತೆಗಳುವವರು 10 ಪ್ರತಿಶತ ಆದ್ರೆ ಇವರನ್ನು ಒಪ್ಪಿಕೊಂಡವರು 90% ಜನರಿದ್ದಾರೆ. ನಾನು ಕೂಡ ಇವರ ಪ್ರಗತಿಯನ್ನು ನೋಡಿ ಒಂದು ಕಾಲದಲ್ಲಿ ಹೊಟ್ಟೆ ಉರಿ ಪಟ್ಟುಕೊಂಡವ ಯಾಕೆಂದರೆ ನನಗೆ ಅವರು ಏರಿರುವ ಮಟ್ಟ ತಲುಪಲು ಸಾಧ್ಯವಿಲ್ಲ.

ಪ್ರಚಾರದ ಗೀಳಿರುವ ಶಿಕ್ಷಕಿ ಹಾಗೆ ಹೀಗೆ ಅಂತ ಇವರ ವಿರುದ್ಧವಾಗಿ ಒಂದೇ ದಿನದಲ್ಲಿ ಸಾಕಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸುವುದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ. ಪ್ರಚಾರದ ಆಸೆ ಯಾರಿಗಿಲ್ಲ ಸ್ವಾಮಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವುದು ಕೂಡ ತಪ್ಪಾ ??? ಇನ್ನು ಕೆಲವರು ಇವರು ಕಾರ್ಕಳದವರು ಅಂತ ಹೇಳ್ಲಿಕ್ಕೆ ಅಸಹ್ಯವಾಗುತ್ತೆ ಅಂತ ಕಮೆಂಟ್ ಹಾಕಿದ್ದಾರೆ. ನಾನು ಕಾರ್ಕಳ ಬ್ಲಾಕಿನ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುವುದು ಅಂತ ರಾಜ್ಯದ ಅದೆಷ್ಟೋ ನನ್ನ ಶಿಕ್ಷಕ ಸ್ನೇಹಿತರಿಗೆ ಗೊತ್ತಾದಾಗ ವಂದನಾ ರೈ ಟೀಚರ್ ಇದ್ದಾರಲ್ವಾ ಅವರ ಪರಿಚಯ ಇದೆಯಾ ಅವರು ಕಾರ್ಕಳದವರು ಅಂತಲ್ವಾ, ನಮ್ಮ ಕಾರ್ಯಕ್ರಮಕ್ಕೊಂದು ಅವರನ್ನು ಅತಿಥಿಯಾಗಿ ಗೊತ್ತು ಮಾಡಿ ಕೊಡ್ತಿಯಾ ಅಂತ ನನ್ನ ಬಳಿ ಕೇಳಿದವರು ಸಾಕಷ್ಟು ಜನರಿದ್ದಾರೆ. ಕಾರ್ಕಳ ಎನ್ನುವ ಐತಿಹಾಸಿಕ ಸ್ಥಳಕ್ಕೆ ಇವರಿಂದ ಲಾಭವೇ ವಿನಃ ನಷ್ಟವಿಲ್ಲ ಇಂಥವರು ಈ ಮಣ್ಣಿನ ಕುವರಿಯೆನ್ನುವುದು ಕೂಡ ನಮ್ಮ ಹೆಮ್ಮೆ' ಎಂದು ಶಿಕ್ಷಕ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1112

ಮೊಬೈಲ್ ವಿಡಿಯೋ ಬಗ್ಗೆ ಸಂತೋಷ್ ಶೆಟ್ಟಿ ಅಭಿಪ್ರಾಯ:

ಇನ್ನು ಶಿಕ್ಷಕಿ ವಂದನಾ ರೈ ಅವರು ಮಾಡಿದ ‘ಮೊಬೈಲ್ ಅವಾಂತರದ ವಿಡಿಯೋ !!! ವಿಷಯ ವಸ್ತು ಸರಿಯಾದರೂ ಕೂಡ ಪ್ರದರ್ಶಿಸಿದ ರೀತಿ ಪಥ್ಯವಲ್ಲ ಎನ್ನುವುದು ನನಗೂ ನೋಡಿದಾಗಲೇ ಅನಿಸಿತ್ತು. ಇಲ್ಲಿ ಎಡವಿದ್ದಾರೆ ಆದರೂ ಇದನ್ನು ಸಾಕಷ್ಟು ಜನರು ತಮ್ಮ ಮಕ್ಕಳಿಗೆ ತೋರಿಸಿ ನಿರಂತರವಾಗಿ ಮೊಬೈಲ್ ಬಳಸುವ ಹವ್ಯಾಸದಿಂದ ದೂರವಿರಿಸಿದ್ದಾರೆ ಎನ್ನುವ ವಿಚಾರವೂ ಹರಿದಾಡುತ್ತಿದೆ. ಇಲ್ಲಿ ತಪ್ಪಾಗಿದೆ ವಂದನಾ ರೈ ಒಪ್ಪಿಕೊಂಡಿದ್ದಾರೆ, ಇಷ್ಟು ದಿನ ಇವರ ಒಳಿತಿನ ವಿಡಿಯೋವನ್ನು ನೋಡಿ ಸಂಭ್ರಮಿಸಿದ ತಾವು ಇಲ್ಲಾಗಿರುವ ಪುಟ್ಟ ಅಪರಾಧಕ್ಕೆ ಅಪಸವ್ಯ ಎಂಬಂತೆ ವಿಡಂಬಣೆ ಮಾಡುತ್ತಾ ಹೋದರೆ ಇಷ್ಟು ದಿನದ ಇವರ ಶ್ರಮಕ್ಕೆ ಏನು ಬೆಲೆ ಕೊಟ್ಟಂತಾಯಿತು’ ಎಂದು ಶಿಕ್ಷಕಿಗೆ ಮತ್ತು ನೆಟ್ಟಿಗರಿಗೆ ತಿಳಿ ಹೇಳಿದ್ದಾರೆ. 

1212

ಡಾಕ್ಟರ್ ಪಿ.ವಿ. ಭಂಡಾರಿ ಅವರು ಶ್ರೇಷ್ಠ ಮನಃಶಾಸ್ತ್ರಜ್ಞರು ಅವರು ಬರೆದಿರುವ ಲೇಖನ ಓದುವ ಅವಕಾಶ ಸಿಗಲಿಲ್ಲ. ಅವರು ಅರ್ಥೈಸಿದ ಮೇಲೆ ಇವರು ತಿದ್ದಿಕೊಂಡಿದ್ದಾರೆ. ಅಪ್ಲೋಡ್ ಮಾಡಿರುವ ವಿಡಿಯೋವನ್ನು ಕೂಡ ಡಿಲೀಟ್ ಮಾಡಿದ್ದಾರೆ. ವಂದನಾ ರೈ ಗಟ್ಟಿಗಿತ್ತಿ ಟೀಚರ್ ಈ ಎಲ್ಲಾ ಟೀಕೆಗಳನ್ನು ಓದಿದ್ದಾರೋ ಅಥವಾ ಓದದೆ ಬಿಟ್ಟಿದ್ದಾರೋ ಗೊತ್ತಿಲ್ಲ.. ಎಲ್ಲರಿಗೂ ಒಳಿತನ್ನೇ ಬಯಸುವ ವಿದ್ಯಾರ್ಥಿಗಳ ಅತ್ಯುತ್ತಮ ಕಲಿಕೆಗೆ ಸ್ಪೂರ್ತಿಯಾಗುವ ಇಂತಹ ಶಿಕ್ಷಕಿಯನ್ನು ತೆಗಳುವುದನ್ನು ನಿಲ್ಲಿಸೋಣ ಎಂದು ಶಿಕ್ಷಕ ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ ಅವರು ಬರೆದುಕೊಂಡಿದ್ದಾರೆ.

Read more Photos on
click me!

Recommended Stories