'1120 ರೂ. ಇದೆ, ಮಾಂಗಲ್ಯ ಸರ ಕೊಡಿ'-ವೃದ್ಧ ದಂಪತಿ ಬಯಕೆಗೆ, ಅಂಗಡಿ ಮಾಲೀಕನ ಔದಾರ್ಯತೆ ನೋಡಿದ್ರೆ ಮಾತೇ ಬರಲ್ಲ!

Published : Jun 18, 2025, 05:12 PM ISTUpdated : Jun 18, 2025, 05:26 PM IST

ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ವೃದ್ಧರೊಬ್ಬರು ( 93 ವರ್ಷ ) ಪಂಡರಾಪುರದ ಪಾಂಡುರಂಗನ ದರ್ಶನ ಮಾಡಲು ಬಯಸಿದ್ದರು. ಇದಕ್ಕೂ ಮುನ್ನ ಅವರು ತನ್ನ ಪತ್ನಿಗೆ ಮಾಂಗಲ್ಯ ಸರ ಕೊಡಲು ಪ್ಲ್ಯಾನ್‌ ಮಾಡಿದ್ದರು. ಅವರಿಗೆ ಶಾಕಿಂಗ್‌ ಸರ್ಪ್ರೈಸ್‌ ಸಿಕ್ಕಿದೆ. 

PREV
17

ಆ ವೃದ್ಧ ದಂಪತಿ ಬಂಗಾರದ ಅಂಗಡಿಗೆ ಬಂದು ಸರ ನೋಡುತ್ತಿದ್ದರು. ಆಗ ಅಲ್ಲಿದ್ದ ಮಾಲೀಕ ಅದನ್ನು ನೋಡುತ್ತಿದ್ದರು.

27

"ದಂಪತಿ ಶಾಪ್‌ಗೆ ಬಂದು 1120 ರೂಪಾಯಿ ಕೊಟ್ಟು ಮಾಂಗಲ್ಯ ಸರ ಕೊಡಿ ಎಂದರು. ಪತ್ನಿ ಮೇಲೆ ಅವರಿಟ್ಟಿದ್ದ ಪ್ರೀತಿ ನನಗೆ ತುಂಬ ಖುಷಿ ಕೊಟ್ಟಿತು. ಹೀಗಾಗಿ ನಾನು 20 ರೂಪಾಯಿ ತಗೊಂಡು ಸರ ಕೊಟ್ಟೆ" ಎಂದು ಅಂಗಡಿ ಮಾಲೀಕ ಹೇಳಿದ್ದಾರೆ.

37

ಆ ದಂಪತಿಯ ಕಥೆ ಕೇಳಿ ಒಂದು ರೂಪಾಯಿ ಹಣವನ್ನು ಪಡೆದುಕೊಳ್ಳದೆ, ಚಿನ್ನದ ಸರ, ಕಿವಿ ಓಲೆ ನೀಡಿದ್ದಾರೆ. 

47

ನಮಗೆ ಫ್ರೀ ಆಗಿ ಏನೂ ಬೇಡ ಅಂತ ದಂಪತಿ ಹೇಳಿದಾಗ, ಮಾಲೀಕರು 20 ರೂಪಾಯಿಗೆ ಸರ ನೀಡಿದ್ದಾರೆ.

57

ನಿಮ್ಮಿಂದ ನಾನು ದುಡ್ಡು ತಗೊಳಲ್ಲ, ದುಡ್ಡು ತಗೊಂಡರೆ ಪಾಂಡುರಂಗ ಮೆಚ್ಚಲ್ಲ, ನಿಮ್ಮ ಹಣಕ್ಕಿಂತ ಆಶೀರ್ವಾದ ಮುಖ್ಯ ಅಂತ ಹೇಳಿದ್ದಾರೆ.

67

ನಿವೃತಿ ಶಿಂಧೆ ಹಾಗೂ ಅವರ ಪತ್ನಿ ಶಾಂತಾಬಾಯಿ ಇಬ್ಬರೂ ನಡೆದುಕೊಂಡು ಪಂಡರಾಪುರದ ಪಾಂಡುರಂಗನ ದರ್ಶನ ಮಾಡಲು ಬಯಸಿದ್ದರು. ಆಷಾಢ ಏಕಾದಶಿಗೆ ಅಲ್ಲಿಗೆ ತಲುಪುವ ಪ್ಲ್ಯಾನ್‌ಇತ್ತು.

77

ದೇವರ ದರ್ಶನಕ್ಕೂ ಮೊದಲೇ ಅವರ ಬಯಕೆ ಈಡೇರಿದೆ. ಈ ವಿಡಿಯೋ ಈಗ ವೈರಲ್‌ ಆಗ್ತಿದೆ. ಮಗನಿದ್ದರೂ ಕೂಡ ಈ ದಂಪತಿ ತಮ್ಮನ್ನು ತಾವೇ ನೋಡಿಕೊಳ್ತಿದೆ. ಇಬ್ಬರೂ ಜೊತೆಯಾಗಿ ಟ್ರಾವೆಲ್‌ ಮಾಡುತ್ತಿರುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ. 

Read more Photos on
click me!

Recommended Stories