ಇದನ್ನು ಓದಿ ನಿಮಗೆ ಅಚ್ಚರಿಯಾಗಬಹುದು. ಆದರೆ ಇದು ನಿಜಾ. ಇದು ಪ್ರಪಂಚದ ಶ್ರೀಮಂತ ಬೆಕ್ಕು. ಈ ಬೆಕ್ಕಿನ ನೆಟ್ ವರ್ತ್ $100 ಮಿಲಿಯನ್ ಅಂದರೆ ₹839 ಕೋಟಿ. ಇದು Social Media Influencer ಕೂಡ ಹೌದು. ಬನ್ನಿ ಈ ಬೆಕ್ಕಿನ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ.
ನೀವು ಪ್ರಪಂಚದಾದ್ಯಂತ ಅನೇಕ ಜನರು ಕೋಟ್ಯಾಧಿಪತಿಯಾಗಿರೋದನ್ನು ನೋಡಿರಬಹುದು, ಆದರೆ ಇಂದು ನಾವು ನಿಮಗೆ ಒಂದು ಕೋಟ್ಯಾಧಿಪತಿ ಬೆಕ್ಕನ್ನು ಪರಿಚಯಿಸಲಿದ್ದೇವೆ. ಈ ಬೆಕ್ಕು ಪ್ರಪಂಚದ ಶ್ರೀಮಂತ ಬೆಕ್ಕು.
27
ಬೆಕ್ಕಿನ ನೆಟ್ ವರ್ತ್ ಎಷ್ಟು?
ಹೌದು, ನೀವು ಕೇಳಿದ್ದು ಸರಿಯಾಗಿಯೇ ಇದೆ, ಈ ಶ್ರೀಮಂತ ಬೆಕ್ಕಿನ ಹೆಸರು ನಲಾ, ಮತ್ತು ಆಕೆ Social Media Influencer ಕೂಡ ಹೌದು. ನಲಾ ವಿಶ್ವದ ಅತ್ಯಂತ ಶ್ರೀಮಂತ ಬೆಕ್ಕು. ಅವಳ ನೆಟ್ ವರ್ತ್ $100 ಮಿಲಿಯನ್, ಅಂದರೆ ₹839 ಕೋಟಿ ಆಗಿದೆ.
37
4.4 ಮಿಲಿಯನ್ ಫಾಲೋವರ್ಸ್
ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಈ ಬೆಕ್ಕು 4.4 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಗಳಿಸಿದೆ.
ಬೆಕ್ಕಿನ ಮಾಲೀಕರು ನಲಾಳನ್ನು,, 2010 ರಲ್ಲಿ 5 ತಿಂಗಳ ಮಗುವಾಗಿದ್ದಾಗ ಶೆಲ್ಟರ್ ಹೋಮ್ ನಿಂದ ದತ್ತು ಪಡೆದರು. 2012 ರಲ್ಲಿ, ಬೆಕ್ಕಿನ ಮಾಲೀಕರು ಮತ್ತು ಆಕೆಯ ಕೆಲವು ಸ್ನೇಹಿತರು ನಲಾಗಾಗಿ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿದರು.
57
ಜನಪ್ರಿಯತೆ ಗಳಿಸಿದ್ದು ಹೇಗೆ?
ನಲಾಳ ಮಾಲೀಕರು ಪ್ರತಿಯೊಂದು ಆಕ್ಟಿವಿಟಿಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಫೋಟೋಗಳು ಮತ್ತು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದರು. ನಲಾಳ ಖಾತೆಯು ಶೀಘ್ರವಾಗಿ ಲಕ್ಷಾಂತರ ಅನುಯಾಯಿಗಳನ್ನು ಗಳಿಸಿತು. ಆ ಮೂಲಕ ನಲಾ ಜನಪ್ರಿಯತೆ ಗಳಿಸಿದಳು.
67
ಸೋಶಿಯಲ್ ಮೀಡಿಯಾದಲ್ಲಿ ವೈರಲ್
ನಲಾ ಇಷ್ಟೊಂದು ಖ್ಯಾತಿ ಗಳಿಸಲು ಮುಖ್ಯ ಕಾರಣ ಆಕೆಯ ನೀಲಿ ಕಣ್ಣುಗಳು ಮತ್ತು ಮುದ್ದಾದ ಮುಖ. ಇದನ್ನು ಜನರು ತುಂಬಾ ಇಷ್ಟಪಟ್ಟರು. ಹಾಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ನಲಾ ಸೆನ್ಶೇಶನ್ ಆದಳು.
77
ನಲಾ ಅಷ್ಟೊಂದು ಹಣ ಗಳಿಸಿದ್ದು ಹೇಗೆ?
ನಲಾಳ ಪ್ರಮುಖ ಆದಾಯದ ಮೂಲ ಸಾಮಾಜಿಕ ಮಾಧ್ಯಮ, ಬ್ರ್ಯಾಂಡ್ ಕೊಲಾಬರೇಶನ್, ಪೇಯ್ಡ್ ಜಾಹೀರಾತು ಮತ್ತು ಪೇಯ್ಡ್ ಪ್ರಾಡಕ್ಟ್ ಮೂಲಕ ನಲಾ ಹಣ ಗಳಿಸಿದಳು. ನಲಾ ತನ್ನದೇ ಆದ ಪ್ರೀಮಿಯಂ ಕ್ಯಾಟ್ ಫುಡ್ ಬ್ರ್ಯಾಂಡ್ "ಲವ್ ನಲಾ" ಅನ್ನು ಸಹ ಹೊಂದಿದ್ದು, ಇದರಿಂದ ಕೂಡ ಗಣನೀಯ ಆದಾಯವನ್ನು ಗಳಿಸುತ್ತದೆ.