ಬತ್ತಿರುವ ಬೋರ್‌ವೆಲ್‌ನ್ನು ಮೂರು ವಿಧಾನಗಳಿಂದ ರೀಚಾರ್ಜ್ ಮಾಡಿ; ನೀರಿನ ಸಮಸ್ಯೆ ಇರಲ್ಲ

Published : May 24, 2026, 06:34 PM IST

ಬೇಸಿಗೆಯಲ್ಲಿ ಬತ್ತಿಹೋಗುವ ಬೋರ್‌ವೆಲ್‌ಗಳನ್ನು ಮಳೆಗಾಲದಲ್ಲಿ ಸುಲಭವಾಗಿ ರೀಚಾರ್ಜ್ ಮಾಡಬಹುದು. ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಮತ್ತು ನೀರಿನ ಸಮಸ್ಯೆಯನ್ನು ನೀಗಿಸುವ ಮೂರು ಸರಳ ವಿಧಾನಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

PREV
15
ಬೋರ್‌ವೆಲ್‌

ಬೇಸಿಗೆಯಲ್ಲಿ ಹಲವರ ಬೋರ್‌ವೆಲ್‌ಗಳು ಬತ್ತಿರುತ್ತವೆ. ಬೋರ್‌ವೆಲ್ ನೀರಿನ ಮೇಲೆ ಆಧಾರಿತ ಬಹುತೇಕರು ಪ್ರತಿ ಬೇಸಿಗೆಯಲ್ಲಿ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮಾನ್ಸೂನ್ ರಾಜ್ಯವನ್ನು ಪ್ರವೇಶಿಸಲಿದೆ. ಮಳೆಗಾಲದ ವೇಳೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಲ್ಲ.

25
ಅಂತರ್ಜಲಮಟ್ಟ ಹೆಚ್ಚಳ

ಮೂರು ವಿಧಾನಗಳಿಂದ ಬತ್ತಿರುವ ಬೋರ್‌ವೆಲ್ ರೀಚಾರ್ಜ್ ಮಾಡಿಕೊಳ್ಳುವ ಅವಕಾಶ ಸಿಗುತ್ತದೆ. ಈ ವಿಧಾನಗಳಿಂದ ಅಂತರ್ಜಲಮಟ್ಟ ಹೆಚ್ಚಳ ಜೊತೆಯಲ್ಲಿ ಉಪ್ಪು ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಆ ಮೂರು ವಿಧಾನಗಳು ಯಾವವು ಎಂದು ನೋಡೋಣ ಬನ್ನಿ.

35
ಮೊದಲ ಎರಡು ವಿಧಾನಗಳು ಈ ರೀತಿಯಾಗಿವೆ

ವಿಧಾನ 1: ಮೊದಲಿಗೆ ಬತ್ತಿರುವ ಬೋರ್‌ವೆಲ್ ಸುತ್ತ ಚೌಕಾಕಾರದಲ್ಲಿ 10 ಅಡಿ ಆಳದಷ್ಟು ಗುಂಡಿಯನ್ನು ತೆಗೆದುಕೊಳ್ಳಿ.

ವಿಧಾನ 2: ಭೂಮಿಯ ಒಳಭಾಗಕ್ಕೆ ಹೋಗುವಾವ ಪೈಪ್‌ಗೆ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿಕೊಳ್ಳಿ. ಈ ರಂಧ್ರದ ಮೂಲಕ ಮರಳು ಹೋಗದಂತೆ ತಡೆಯಲು ಜಾಲರಿ ಮಾದರಿ ಸ್ಟೀಲ್ ಪ್ಲೇಟ್ ಅಳವಡಿಸಬೇಕು.

45
ವಿಧಾನ 3

ಮೂರನೇ ಹಂತ ಗುಂಡಿಯನ್ನು ತುಂಬಿಸೋದು. ಮೊದಲಿಗೆ ಗುಂಡಿಯೊಳಗೆ ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿಕೊಳ್ಳಿ. ನಂತರ ಚಿಕ್ಕ ಕಲ್ಲು (ಜಲ್ಲಿಕಲ್ಲು) ತುಂಬಿಸಬೇಕು. ಅಂತಿಮವಾಗಿ ಮರಳು ಹಾಕಿ ಗುಂಡಿಯನ್ನು ತುಂಬಿಸಿಕೊಳ್ಳಿ. ಇದರಿಂದ ಮಳೆ ನೀರು ಫಿಲ್ಟರ್ ರೀತಿ ಅಂತರ್ಜಲಕ್ಕೆ ತಲುಪುತ್ತದೆ. ಈ ರೀತಿಯಾಗಿ ಬೋರ್‌ವೆಲ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ.

55
ಹೆಚ್ಚಿನ ಮಾಹಿತಿಗೆ ತಜ್ಞರ ಸಲಹೆ ಪಡೆಯಿರಿ

ಎಚ್ಚರ: ಬೋರ್‌ವೆಲ್ ಸುತ್ತ ಗುಂಡಿ ತೆಗೆಯುವಾಗ ಭೂಮಿ ಕುಸಿಯುವ ಅಪಾಯವಿರುತ್ತದೆ. ಹಾಗಾಗಿ ತಜ್ಞರ ಸಲಹೆ ಮೇರೆಗೆ ಬೋರ್‌ವೆಲ್ ಸುತ್ತಳತೆಯಲ್ಲಿ ಗುಂಡಿ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಅಂತರ್ಜಲ ತಜ್ಞರನ್ನು ಸಂಪರ್ಕಿಸಿ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

ಇದನ್ನೂ ಓದಿ: ಅಡ್ಡಬೋರ್‌ ಮೂಲಕ ಬತ್ತಿದ ಕೆರೆ, ಬಾವಿಗಳಲ್ಲಿ ನೀರಿನ ಸೆಲೆ; ಮಂಗಳೂರಿನಲ್ಲಿ ಜಲಕ್ರಾಂತಿ

Read more Photos on
click me!

Recommended Stories