ವೈನ್, ಬಿಯರ್, ಜಿನ್, ವೋಡ್ಕಾ, ರಮ್‌ನಂತಹ ವಿವಿಧ ಆಲ್ಕೋಹಾಲ್ ಪಾನೀಯಗಳ ನಡುವಿನ ವ್ಯತ್ಯಾಸವನ್ನು ಈ ಲೇಖನವು ವಿವರಿಸುತ್ತದೆ. ದ್ರಾಕ್ಷಿಯಿಂದ ವೈನ್, ಬಾರ್ಲಿಯಿಂದ ಬಿಯರ್ ಮತ್ತು ಕಬ್ಬಿನ ರಸದಿಂದ ರಮ್ ತಯಾರಿಸುವಂತಹ ಪ್ರತಿಯೊಂದು ಪಾನೀಯದ ತಯಾರಿಕಾ ವಿಧಾನ ಮತ್ತು ಬಳಸುವ ಪದಾರ್ಥಗಳನ್ನು ಇದು ವಿವರಿಸುತ್ತದೆ.
ವೈನ್, ಬಿಯರ್, ಜಿನ್, ವೋಡ್ಕಾ, ರಮ್, ಟಕಿಲಾ.... ಇದನ್ನು ಕೇಳಿದ್ರೆ ಹಲವರ ಬಾಯಲ್ಲಿ ನೀರು ಬರತ್ತೆ, ಇನ್ನು ಕೆಲವರ ಬಾಯಲ್ಲಿ ಥೂ ಅಸಹ್ಯ... ಎನ್ನೋ ಶಬ್ದ ಬರತ್ತೆ. ಅಷ್ಟಕ್ಕೂ ಎಲ್ಲವೂ ಆಲ್ಕೋಹಾಲೇ ಆದ್ರೂ ಇವೆಲ್ಲಾ ಏನಪ್ಪಾ ಎಂದು ತಲೆ ಕೆಡಿಸಿಕೊಳ್ಳದವರೂ ಇಲ್ಲದಿಲ್ಲ. ಆದರೆ, ಇದರ ಬಗ್ಗೆ ಯಾರನ್ನು ಕೇಳೋದು ಎನ್ನುವುದು ತಿಳಿದಿರಲ್ಲ. ಇವುಗಳ ವ್ಯತ್ಯಾಸ ಕೇಳಿ ತಿಳಿದುಕೊಳ್ಳೋಣ ಎಂದ್ರೆ ಏನಾದ್ರೂ ಅಂದುಕೊಂಡು ಬಿಟ್ಟಾರೋ ಎನ್ನುವ ಭಯ. ರುಚಿ ನೋಡುವುದಕ್ಕಾಗಿ ಅಲ್ಲದಿದ್ದರೂ, ಇದರ ಬಗ್ಗೆ ವ್ಯತ್ಯಾಸ ತಿಳಿದುಕೊಳ್ಳುವ ಹಂಬಲ ಹಲವರಿಗೆ ಅದರಲ್ಲಿಯೂ ಹಲವು ಮಹಿಳೆಯರಿಗೆ ಇದ್ದೇ ಇರುತ್ತದೆ. ಆದರೆ ಇದರ ಹೆಸರು ಹೇಳೋಕೇನೇ ಭಯ. ಕುಡಿಯೋದು ಏನಾದ್ರೇನೂ, ಒಳಗೆ ಹೋದ್ಮೇಲೆ ಅಷ್ಟೇ... ಎಂದು ಸುಮ್ಮನಾಗಿ ನಮಗ್ಯಾಕೆ ಉಸಾಬರಿ ಎಂದುಕೊಳ್ಳುವವರೂ ಇದ್ದಾರೆ.
211
ತಿಳಿದುಕೊಳ್ಳುವ ಹಂಬಲ ಇದ್ಯಾ?
ಆದರೂ, ಈ ಆಲ್ಕೋಹಾಲ್ ವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಹಂಬಲ ನಿಮಗೆ ಇದ್ಯಾ? ಗುಟ್ಟಾಗಿ ಆದ್ರೂ ಒಮ್ಮೆ ಇದರ ಬಗ್ಗೆ ತಿಳಿದುಕೊಳ್ಳೋಣ ಎನ್ನುವ ಆಸೆ ಇದ್ಯಾ? ಎಲ್ಲವೂ ಗುಂಡು ಎಂದೇ ಸಾಮಾನ್ಯವಾಗಿ ಆಡು ಭಾಷೆಯಲ್ಲಿ ಹೇಳಿದ್ರೂ, ಕೆಲವರಿಗೆ ಕೆಲವು ಇಷ್ಟ ಆಗೋದ್ಯಾಕೆ ಎನ್ನುವ ಪ್ರಶ್ನೆ ಕಾಡುತ್ತಿರಬೇಕಲ್ಲ, ಅದರಲ್ಲಿಯೂ ಕೆಲವನ್ನು ಹೆಣ್ಣುಮಕ್ಕಳು ಮಾತ್ರ ಸೇವನೆಯನ್ನೂ ಮಾಡುತ್ತಾರೆ. ಹಾಗಿದ್ರೆ ಇವುಗಳ ವ್ಯತ್ಯಾಸ ಏನು ಎನ್ನೋದನ್ನು ಇಲ್ಲಿ ಹೇಳಲಾಗಿದೆ ನೋಡಿ. factomaniafacts ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
311
ಸೈಡರ್ ಎಂದರೇನು?
ಸೇಬಿನ ಹಣ್ಣಿನ ಜ್ಯೂಸ್ ಅನ್ನು ಹುದುಗಿಸಿದರೆ ಅದು ಸೈಡರ್ (Cider)
411
ಜಿನ್ ಎಂದರೇನು?
ಬಿಯರ್ ಅನ್ನು ಬಟ್ಟಿ ಇಳಿಸಿದ ಬಳಿಕ ಅದಕ್ಕೆ ದ್ರಾಕ್ಷಿ ಹಣ್ಣಿನ ಜಾತಿಗೆ ಸೇರಿರುವ ಜುನಿಪರ್ ಹಣ್ಣು ಸೇರಿಸಿದ್ರೆ ಅದು ಜಿನ್ (Gin)
511
ರಮ್ ಎಂದರೇನು?
ಕಬ್ಬಿನ ರಸವನ್ನು ಬಟ್ಟಿ ಇಳಿಸಿದರೆ ಅದು ರಮ್ (Rum)
611
ವೋಡ್ಕಾ ಎಂದರೇನು?
ಆಲೂಗಡ್ಡೆ ಅಥವಾ ಜೋಳವನ್ನು ಬಟ್ಟಿ ಇಳಿಸಿದರೆ ಅದು ವೋಡ್ಕಾ (Vodka)
711
ವಿಸ್ಕಿ ಎಂದರೇನು?
ಬಿಯರ್ ಅನ್ನು ಬಟ್ಟಿ ಇಳಿಸಿದರೆ ಅದು ವಿಸ್ಕಿ (Whiskey)
811
ಬಿಯರ್ ಎಂದರೇನು?
ಬಾರ್ಲಿ ಅಥವಾ ಗೋಧಿಯನ್ನು ಹುದುಗಿಸಿದರೆ ಅದು ಬಿಯರ್ (Beer)
911
ವೈನ್
ಕ್ರಷ್ ಮಾಡಿರೋ ಅಂದ್ರೆ ಪುಡಿಪುಡಿ ಮಾಡಿರುವ ದ್ರಾಕ್ಷಿಯನ್ನು ಹುದುಗಿಸಿದರೆ ಅದು ವೈನ್ (Wine)
1011
ಟಕಿಲಾ
ನೀಲಿ ಭೂತಾಳೆ ಸಸ್ಯವನ್ನು ಬಟ್ಟಿ ಇಳಿಸಿದರೆ ಅದು ಟಕಿಲಾ (Tequila)
1111
ಬ್ರಾಂಡಿ ಅಂದರೇನು?
ಯಾವುದಾದರೂ ಹಣ್ಣುಗಳನ್ನು ಹುದುಗಿಸಿ ಅದನ್ನು ಬಟ್ಟಿ ಇಳಿಸಿದರೆ ಅದು ಬ್ರಾಂಡಿ (Brandy)