9 Month Pregnant Woman: ಬೆಂಗಳೂರಿನ ಯೋಗ ಶಿಕ್ಷಕಿ ಶಶಿಪ್ರಭಾ ದ್ವಿವೇದಿ 9 ತಿಂಗಳ ಗರ್ಭಿಣಿಯಾಗಿದ್ದರೂ ಶೀರ್ಷಾಸನ, ಚಕ್ರಾಸನ ಸೇರಿದಂತೆ ಕಠಿಣ ಯೋಗಾಸನಗಳನ್ನು ಮಾಡಿ ವೈರಲ್ ಆಗಿದ್ದಾರೆ.
ಗರ್ಭಿಣಿಯರು ಸಾಮಾನ್ಯವಾಗಿ ಎಲ್ಲರಂತೆ ಓಡಾಡಲು, ಕೆಲಸ ಮಾಡಲು ಕಷ್ಟಪಡುತ್ತಾರೆ. ಸರಿಯಾಗಿ ಕೂರಲು, ನಿಲ್ಲಲು ಸಹ ಕಷ್ಟವಾಗುತ್ತದೆ. ಆದರೆ, ಇಲ್ಲೊಬ್ಬ 9 ತಿಂಗಳ ತುಂಬು ಗರ್ಭಿಣಿ ತಲೆಕೆಳಗಾಗಿ ಯೋಗ ಮಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಸಾಮಾನ್ಯವಾಗಿ ವೈದ್ಯರು ಸುಲಭ ಹೆರಿಗೆಗಾಗಿ ಗರ್ಭಿಣಿಯರಿಗೆ ಸಣ್ಣಪುಟ್ಟ ಯೋಗಾಸನಗಳನ್ನು ಮಾಡಲು ಸಲಹೆ ನೀಡುತ್ತಾರೆ. ಗರ್ಭಿಣಿಯರು ಯೋಗ ಮಾಡುವುದು ಸಾಮಾನ್ಯ. ಆದರೆ ಬೆಂಗಳೂರಿನ ಈ ಯೋಗ ಟೀಚರ್ 9 ತಿಂಗಳ ಗರ್ಭಿಣಿಯಾಗಿದ್ದುಕೊಂಡು ಮಾಡಿದ ಯೋಗಾಸನಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ.
24
ಬೆಂಗಳೂರಿನ ಯೋಗ ಶಿಕ್ಷಕಿ ಶಶಿಪ್ರಭಾ ದ್ವಿವೇದಿ
ಬೆಂಗಳೂರಿನ ಯೋಗ ಶಿಕ್ಷಕಿ ಶಶಿಪ್ರಭಾ ದ್ವಿವೇದಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಸೀರೆಯುಟ್ಟಿರುವ ಅವರು, 9 ತಿಂಗಳ ಗರ್ಭಿಣಿ. ಈ ಸ್ಥಿತಿಯಲ್ಲೂ ಅವರು ಅದ್ಭುತ ಯೋಗಾಸನಗಳನ್ನು ಮಾಡಿದ್ದಾರೆ. ಸಾಮಾನ್ಯರು ಮಾಡಲು ಕಷ್ಟಪಡುವ ಚಕ್ರಾಸನ, ಶೀರ್ಷಾಸನದಂತಹ ಕಠಿಣ ಆಸನಗಳನ್ನು ಅವರು ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಸುಮಾರು 2 ಕೋಟಿಗೂ ಹೆಚ್ಚು (20 ಮಿಲಿಯನ್) ವೀಕ್ಷಣೆ ಪಡೆದಿದೆ. ಅವರ ಫಿಟ್ನೆಸ್ ಮತ್ತು ದೇಹದ ಮೈಕಟ್ಟು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಎಷ್ಟೇ ದೊಡ್ಡ ಯೋಗ ಟೀಚರ್ ಆದರೂ, ಹೆರಿಗೆಗೆ ಕೆಲವೇ ದಿನಗಳಿರುವಾಗ ಇಂತಹ ಆಸನಗಳನ್ನು ಮಾಡುವುದು ಅಪಾಯಕಾರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
34
ವೈದ್ಯರ ಸಲಹೆ ಪಡೆಯುವುದು ಕಡ್ಡಾಯ
‘ಜನರು ನಾನು ಗರ್ಭಿಣಿಯಾಗಿ ಮಾಡುವ ಯೋಗಾಸನಗಳನ್ನು ಮಾತ್ರ ನೋಡುತ್ತಿದ್ದಾರೆ. ಆದರೆ ಇದರ ಹಿಂದೆ ನನ್ನ ಹಲವು ವರ್ಷಗಳ ಕಠಿಣ ಪರಿಶ್ರಮವಿದೆ. ಅನೇಕ ವರ್ಷಗಳ ಕಠಿಣ ತರಬೇತಿಯ ನಂತರವೇ ನಾನು ಈ ಆಸನಗಳನ್ನು ಮಾಡಲು ಸಾಧ್ಯವಾಗಿದೆ. ನಾನು ಸದ್ಯ 9 ತಿಂಗಳ ಗರ್ಭಿಣಿ ಎಂಬುದು ನಿಜ. ಆದರೆ ಎಲ್ಲರೂ ಈ ಆಸನಗಳನ್ನು ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮಹಿಳೆಯ ದೇಹವೂ ಒಂದೇ ರೀತಿ ಇರುವುದಿಲ್ಲ. ಇಂತಹ ಆಸನಗಳನ್ನು ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಕಡ್ಡಾಯ’ ಎಂದು ಶಶಿ ಪ್ರಭಾ ಹೇಳಿದ್ದಾರೆ.
ಶಶಿ ಪ್ರಭಾ ಪೋಸ್ಟ್ ಮಾಡಿದ ಯೋಗ ವಿಡಿಯೋಗಳಿಗೆ ನೆಟ್ಟಿಗರಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ಅವರ ಪ್ರಯತ್ನವನ್ನು ಬೆಂಬಲಿಸಿದ್ದಾರೆ. ಇನ್ನು ಕೆಲವರು, ಗರ್ಭಾವಸ್ಥೆಯಲ್ಲಿ ಇಂತಹ ಸಾಹಸ ಮಾಡುವುದು ಮಗುವಿನ ಆರೋಗ್ಯಕ್ಕೆ ಅಪಾಯಕಾರಿ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದೊಂದು ಪಬ್ಲಿಸಿಟಿ ಸ್ಟಂಟ್ ಅಷ್ಟೇ ಎಂದು ಟೀಕಿಸಿದ್ದಾರೆ. ‘ಇಂತಹ ಯೋಗಾಸನಗಳನ್ನು ಮಾಡಬೇಡ ಎಂದು ನನ್ನ ತಾಯಿಯೂ ಬೈದಿದ್ದರು, ಆದರೆ ನಾನು ಯೋಗಾಭ್ಯಾಸವನ್ನು ನಿಲ್ಲಿಸಲಿಲ್ಲ’ ಎಂದು ಶಶಿ ಪ್ರಭಾ ಹೇಳಿದ್ದಾರೆ.