ನಾನು ಮಾಡ್ತಿರೋದು ಬ್ಯುಸಿನೆಸ್, ಪುಕ್ಕಟ್ಟೆ ತೊಗೊಂಡ್ರೆ ಭಿಕ್ಷೆ ಆಗುತ್ತೆ: ಬೆಂಗಳೂರಿನ ಹೂ ಮಾರುವ ಬಾಲೆ

Published : May 17, 2026, 12:34 PM IST

ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಹೂ ಮಾರಾಟ ಮಾಡುವ ಪುಟ್ಟ ಬಾಲಕಿಯೊಬ್ಬಳು ತನ್ನ ಸ್ವಾಭಿಮಾನದ ಮಾತುಗಳಿಂದ ಯುವಕರನ್ನು ಬೆರಗುಗೊಳಿಸಿದ್ದಾಳೆ. ಉಚಿತವಾಗಿ ನೀಡಿದ ಗುಲಾಬಿಯನ್ನು ನಿರಾಕರಿಸಿ, ಅದು ಭಿಕ್ಷೆಯಾಗುತ್ತದೆ, ತಾನು ವ್ಯಾಪಾರ ಮಾಡುತ್ತಿರುವುದಾಗಿ ಹೇಳಿ ಗಮನ ಸೆಳೆದಿದ್ದಾಳೆ.

PREV
15
ಹೂ ಮಾರುವ ಪುಟ್ಟ ಬಾಲಕಿ

ಬೆಂಗಳೂರಿನ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಮಗೆ ಸುಂದರವಾದ ಹೂಗುಚ್ಛಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಕಾಣಿಸುತ್ತಾರೆ. ಹಾಗೆಯೇ ಹೆಚ್ಚುಜನಸಂದಣಿ ಪ್ರದೇಶಗಳಲ್ಲಿ ಹೂ ಮಾರಾಟಗಾರರನ್ನು ಕಾಣಬಹುದು. ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಹೂ ಮಾರುವ ಪುಟ್ಟ ಬಾಲಕಿ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾಳೆ.

25
ಬಾಲಕಿ ಹೇಳಿದ್ದೇನು?

ಹೌದು, Adil M ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ಹೂ ಮಾರುವ ಬಾಲಕಿಯ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ನಾಲ್ಕೈದು ಜನರು ಬಾಲಕಿಯೊಂದಿಗೆ ಮಾತನಾಡಿದ್ದು, ಈ ಎಲ್ಲಾ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ. ಬಾಲಕಿಯ ಒಂದೊಂದು ಮಾತು ಕೇಳುಗರ ಹೃದಯಕ್ಕೆ ಹತ್ತಿರವಾಗಿವೆ. ಹಾಗಾದ್ರೆ ವಿಡಿಯೋದಲ್ಲಿರೋದು ಏನು? ಬಾಲಕಿ ಹೇಳಿದ್ದೇನು ಎಂಬುದನ್ನು ನೋಡೋಣ ಬನ್ನಿ.

35
ಉಚಿತವಾಗಿ ತೆಗೆದುಕೊಂಡ್ರೆ ಅದು ಭಿಕ್ಷೆ ಆಗುತ್ತದೆ

ಚರ್ಚ್‌ ಸ್ಟ್ರೀಟ್‌ನಲ್ಲಿ ಬಾಲಕಿಯೊಬ್ಬಳು ಗುಲಾಬಿ ಮಾರಾಟ ಮಾಡುತ್ತಿರುತ್ತಾಳೆ. ಆಕೆ ಬಳಿಗೆ ಬಂದ ನಾಲ್ಕೈದು ಜನರು ಒಂದೊಂದು ಹೂ ಖರೀದಿಸುತ್ತಾರೆ. ಈ ನಾಲ್ವರಲ್ಲಿ ಓರ್ವ ಒಂದು ಹೂವನ್ನು ಬಾಲಕಿಗೆ ಕಾಣಿಕೆಯಾಗಿ ನೀಡುತ್ತಾನೆ. ಆದ್ರೆ ಬಾಲಕಿ ಹೂ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾಳೆ. ಉಚಿತವಾಗಿ ತೆಗೆದುಕೊಂಡ್ರೆ ಅದು ಭಿಕ್ಷೆ ಆಗುತ್ತದೆ. ನಾನು ಇಲ್ಲಿ ಬ್ಯುಸಿನೆಸ್ ಮಾಡುತ್ತಿದ್ದೇನೆ ಎಂದು ಹೇಳುತ್ತಾನೆ. ಬಾಲಕಿಯ ಮಾತು ಕೇಳುತ್ತಿದ್ದಂತೆ ಯುವಕರ ಗುಂಪು ಶಾಕ್ ಆಗುತ್ತದೆ.

45
ತಾಯಿಗೆ ಹೂ ನೀಡಿ, ನನಗೆ ಬೇಡ

ಇಲ್ಲಿಗೆ ಸುಮ್ಮನಾಗದೇ ಯುವಕರು ತಾವು ತೆಗೆದುಕೊಂಡಿರುವ ಹೂವನ್ನು ಬಾಲಕಿಗೆ ಉಚಿತವಾಗಿ ನೀಡಲು ಮುಂದಾಗುತ್ತಾರೆ. ಆದ್ರೆ ಬಾಲಕಿ ನಾನೇನು ಮಾಡಲಿ? ನಮ್ಮ ಮನೆಯಲ್ಲಿ ತುಂಬಾ ಹೂಗಳಿವೆ. ನೀವು ಈ ಹೂವನ್ನು ನಿಮ್ಮ ತಾಯಿಗೆ ನೀಡಿ ಅಂತಾಳೆ. ಅದಕ್ಕೆ ಯುವಕನೋರ್ವ, ನನ್ನಮ್ಮನಿಗೆ ಗುಲಾಬಿ ಇಷ್ಟವಿಲ್ಲ. ಅದಕ್ಕೆ ನನ್ನ ಗೆಳತಿಗೆ ಕೊಡ್ಲಾ ಎಂದು ಕೇಳುತ್ತಾಳೆ. ಅದಕ್ಕೆ ಬಾಲಕಿ ಹೇಳಿದ ಮಾತು ಕೇಳಿ ಯುವಕರು ಅಚ್ಚರಿ ವ್ಯಕ್ತಪಡಿಸುತ್ತಾರೆ.

55
ಪ್ರತಿದಿನ ಸಂಜೆ ಹೂ ಮಾರಾಟದ ಕೆಲಸ

ಗರ್ಲ್‌ಫ್ರೆಂಡ್ ಸಹ ಮಹಿಳೆ ಅಲ್ಲವಾ? ಆಕೆಯೂ ತಾಯಿ. ಹಾಗಾಗಿ ನಿಮ್ಮ ಗೆಳತಿಗೆ ಈ ಗುಲಾಬಿ ನೀಡಬಹುದು. ಈ ಮಾತು ನಮ್ಮ ಹೃದಯಕ್ಕೆ ಟಚ್ ಆಯ್ತೆಂದು ಅಲ್ಲಿದ್ದ ಯುವಕ ಹೇಳುತ್ತಾನೆ. ಮುಂದುವರಿದು ಬಾಲಕಿ, ನಾನು ಪ್ರತಿದಿನ ಸಂಜೆ ಇಲ್ಲಿಗೆ ಹೂ ಮಾರಾಟಕ್ಕೆ ಬರುತ್ತೇನೆ. ಸದ್ಯ ಶಾಲೆಗಳಿಗೆ ಬೇಸಿಗೆ ರಜೆ. ಮೇ 29ರ ನಂತ್ರ ಶಾಲೆ ಆರಂಭವಾಗುತ್ತದೆ. ಶಾಲೆಯ ದಿನಗಳಲ್ಲಿಯೂ ಸಂಜೆ ಇಲ್ಲಿ ಬರುತ್ತೇನೆ ಎಂದು ತನ್ನ ಶಿಕ್ಷಣದ ಬಗ್ಗೆಯೂ ಮಾತನಾಡಿದ್ದಾಳೆ.

Read more Photos on
click me!

Recommended Stories